ಅರಿಶಿಣ ಭಾರತದ ಘನಬಂಗಾರ

0
1641

ಬಹು ಹಿಂದಿನಿಂದಲೂ ಜನಪ್ರಿಯವಾಗಿದ್ದ ಅರಿಶಿಣ ಇತ್ತೀಚಿನ ದಿನಗಲ್ಲಿ ಇನ್ನಷ್ಟು ಪ್ರಚಲಿತದಲ್ಲಿದೆ. ಬಂಗಾರದಂತ ಬಣ್ಣದ ಸಾಂಬಾರ ಪದಾರ್ಥವಾಗಿರುವ ಅರಿಶಿಣ- ಭಾರತ ಮತ್ತು ಏಶಿಯಾದ ಅಡಿಗೆಯ ಪ್ರಮುಖ ವಸ್ತು- ಇದೀಗ ಸ್ಮೂದೀಸ್, ಮಫಿನ್ಸ್ ಮತ್ತು ಲೇಟೀಸ್‍ಗಳ ಭಾಗವಾಗುತ್ತಿರುವುದಲ್ಲದೇ ಗೂಗಲ್‍ನ 2016ರ ಫುಡ್ ಟ್ರೆಂಡ್ಸ್ ರಿಪೋರ್ಟಿನಲ್ಲಿ ‘ರೈಸಿಂಗ್ ಸ್ಟಾರ್’ ಎಂಬ ಬಿರುದನ್ನೂ ಪಡೆದಿದೆ. ಅಲ್ಲದೇ, ನವೆಂಬರ್ 2015ರಿಂದ ಜನವರಿ 2016ರ ಒಳಗಡೆಯೇ ಅರಿಶಿನದ ಕುರಿತ ಇಂಟರ್ನೆಟ್ ಸರ್ಚ್ 56%ದಷ್ಟು ಹೆಚ್ಚಾಗಿತ್ತು.

ಭಾರತದಲ್ಲಿ ಅರಿಶಿನದ ಬಳಕೆಯು 4000 ವರ್ಷಗಳಷ್ಟು ಹಿಂದೆ, ವೇದದ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು. ಆಗ ಇದನ್ನು ಅಡಿಗೆಯ ಭಾಗವಾಗಿ ಉಪಯೋಗಿಸಲಾಗುತ್ತಿತ್ತಲ್ಲದೇ, ಧಾರ್ಮಿಕ ಮಹತ್ವವೂ ಇತ್ತು. ಅರಿಶಿನದ ಉಪಯೋಗಗಳ ಬಗ್ಗೆ ವೈದ್ಯಕೀಯ ಸಾಹಿತ್ಯದಲ್ಲಿ ಬಹಳಷ್ಟು ತಿಳಿಸಲಾಗಿದೆ. ಅರಿಶಿನಕ್ಕೆ ಹಳದಿ ಬಣ್ಣವನ್ನು ನೀಡುವ ಅದರ ಜೈವಿಕ ಸಕ್ರಿಯ ಘಟಕವಾಗಿರುವ ಅರಿಶಿಣ ಆರೋಗ್ಯವನ್ನು ಪ್ರಚೋದಿಸಿ ಹಲವು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆಯೆಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಜೊತೆಗೆ ಇದು ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಬಿ6, ಫೈಬರ್, ತಾಮ್ರ ಮತ್ತು ಪೊಟ್ಯಾಷಿಯಂ ನಂತಹ ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ.

ಅರಿಶಿಣ ರಹಸ್ಯ

benefits-of-turmeric

ಸುಮಾರು 50 ವರ್ಷಗಳ ಹಿಂದೆ ಸಂಶೋಧಕರು ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಅಧಿಕವಾಗಿರುವ ಅಲ್ಝಮೈರ್ ಮತ್ತು ಮಲ್ಟಿಪಲ್ ಸೆಲೆರೊಸಿಸ್‍ಗಳು ಭಾರತದಲ್ಲಿ ವಿರಳವಾಗಿರುವುದನ್ನು ಗಮನಿಸಿದರು. ಈ ವ್ಯತ್ಯಾಸವನ್ನು ಕಂಡುಹಿಡಿಯಲು ಆರಂಭಿಸಿದ ಅಧ್ಯಯನವು ಅವರನ್ನು ಅರಿಶಿಣ ಕಡೆಗೆ ಕೊಂಡೊಯ್ಯಿತು. ಅರಿಶಿನ, ಅದರಿಂದಾಗಿ ಅರಿಶಿಣ ಭಾರತದ ಪ್ರತಿಯೊಂದು ಮನೆಯ ಅಡಿಗೆಯ ಭಾಗವಾಗಿರುವುದು ಅವರಿಗೆ ತಿಳಿಯಿತು. ಅಡಿಗೆಯ ಭಾಗವಾಗಿ ನಾವು ಅರಿಶಿನವನ್ನು ಸೇವಿಸುವುದಲ್ಲದೇ ಗಾಯವನ್ನು ಮಾಗಿಸಲು ಇದನ್ನು ಬ್ಯಾಂಡೇಜಿನಲ್ಲಿಯೂ ಸೇರಿಸುತ್ತೇವೆ ಮತ್ತು ಹಲವು ಕಾಯಿಲೆಗಳಿಗೆ ಔಷಧವಾಗಿಯೂ ಸೇವಿಸುತ್ತೇವೆ. ಇದು ಭಾರತದ ಸಂಸ್ಕøತಿಯಲ್ಲಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ಮದುಮಗ ಮತ್ತು ಮದುಮಗಳು ತಮ್ಮ ಚರ್ಮಕ್ಕೆ ಹೆಚ್ಚಿನ ಹೊಳಪು ಸಿಗಲೆಂದು ಮದುವೆಗೂ ಮುನ್ನ ಮೈಗೆಲ್ಲಾ ಅರಿಶಿನ ಮತ್ತು ಹಾಲನ್ನು ಹಚ್ಚಿಕೊಳ್ಳುತ್ತಾರೆ. ಆದ್ದರಿಂದ ಪಾಶ್ಚಿಮಾತ್ಯ ಸಂಶೋಧಕರು ಅರಿಶಿಣ ಬಗ್ಗೆ ಆಸಕ್ತಿಯನ್ನು ತಳೆದು ಇದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಹೇಗೆ ಬಳಸಬಹುದು ಎಂಬ ಅಧ್ಯಯನವನ್ನು ಆರಂಭಿಸಿದರು. ಇದರ ಫಲವಾಗಿ ಸಮಿ-ಸಬಿನ್ಸಾ ಗ್ರೂಪಿನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ.ಮಹಮದ್ ಮಜೀದ್‍ರವರು ಕಕ್ರ್ಯುಮಿನ್ ಕುರಿತು ಸುಮಾರು 7500 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಅರಿಶಿಣದ ಪ್ರಯೋಜನಗಳು

ಅರಿಶಿಣ ಮತ್ತು ಕ್ಯಾನ್ಸರ್: ತನ್ನ ಆಂಟಿಪ್ರಾಲಿಫರೇಟಿವ್ ಮತ್ತು ಆಂಟಿಕಾರ್ಸಿನೋಜೆನಿಕ್ ಗುಣಗಳಿಂದಾಗಿ ಅರಿಶಿಣ ಹಲವು ರೀತಿಯ ಕ್ಯಾನ್ಸರ್‍ಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಸಸ್ಯಜನ್ಯ ಘಟಕಗಳಾದ ಅರಿಶಿಣ ಮತ್ತು ಸಿಲೈಮರಿನ್‍ಗಳ ಸಂಯೋಜನೆಯು ಕೊಲೊನ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತವೆ ಎಂದು ಅಮೇರಿಕಾದ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ಕಂಡು ಹಿಡಿದಿದ್ದಾರೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಸ್ತನ, ಶ್ವಾಸಕೋಶ, ಗ್ಯಾಸ್ಟ್ರೋ-ಇಂಟೆಸ್ಟೈನಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಮೆಲನೊಮಾ, ನರಸಂಬಂಧಿ ಕ್ಯಾನ್ಸರ್‍ಗಳು, ಸಾರ್ಕೊಮಾ, ಲ್ಯುಕೆಮಿಯಾ ಮತ್ತು ಲಿಂಫೋಮಾಗಳ ನಿರ್ವಹಣೆಯಲ್ಲಿ ಅರಿಶಿಣವನ್ನು ಉಪಯೋಗಿಸಲಾಗುತ್ತಿದೆ. ಅರಿಶಿಣ ಕಾರ್ಸಿನೋಜೆನೆಸಿಸ್‍ನ ಆರಂಭ, ಬೆಳವಣಿಗೆ ಮತ್ತು ಹರಡುವಿಕೆ ಮುಂತಾದ ಮೂರು ಹಂತಗಳನ್ನು ತಡೆಗಟ್ಟಬಲ್ಲದು. ಅಲ್ಲದೇ ಇದು ಕ್ಯಾನ್ಸರ್‍ಗೆ ಕಾರಣವಾಗುವ ವಸ್ತುಗಳನ್ನು ನಿಷ್ಕ್ರಿಯಗೊಳಿಸುವಲ್ಲಿಯೂ ನೆರವಾಗುತ್ತದೆ.

ಟೊಪೊಯ್‍ಸೊಮೆರಸೆಸ್ ಎಂಬ ಎಂಜೈಮ್ ಅನ್ನು ತಡೆಗಟ್ಟುವ ಮೂಲಕ ಅರಿಶಿಣ ಕ್ಯಾನ್ಸರ್ ಸೆಲ್‍ಗಳು ದ್ವಿಗುಣಗೊಳ್ಳುವುದನ್ನು ತಡೆಗಟ್ಟುತ್ತದೆ. ಕಾಲಕಳೆದಂತೆ ಕ್ಯಾನ್ಸರ್ ಸೆಲ್‍ಗಳು ಕೆಮೋಥೆರಪಿ ಮತ್ತು ರೆಡಿಯೋಥೆರಪಿಗಳಿಗೆ ರೋಧವನ್ನು ಬೆಳೆಸಿಕೊಳ್ಳುತ್ತವೆ. ಆದರೆ ಅರಿಶಿಣಯನ್ನು ಚಿಕಿತ್ಸೆಗೆ ಅನುಗುಣವಾದ ಪ್ರಮಾಣದಲ್ಲಿ ಸೇವಿಸಿದಾಗ ಕ್ಯಾನ್ಸರಿನ ಹಾದಿಯನ್ನು ಗುರಿಯಾಗಿಸಿಕೊಂಡು ಕ್ಯಾನ್ಸರ್ ಸೆಲ್‍ಗಳು ಕೆಮೋಥೆರಪಿಯ ಔಷಧಗಳಿಗೆ ಸ್ಪಂದಿಸುವಂತೆ ಮಾಡಿ ಕ್ಯಾನ್ಸರ್ ಸೆಲ್‍ಗಳ ಸಾಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಅರಿಶಿಣ ಮತ್ತು ಅರ್ಥರೈಟಿಸ್: ಕಕ್ರ್ಯುಮಿನ್‍ನ ಉರಿಯೂತಗಳನ್ನು ಕಡಿಮೆ ಮಾಡುವ ಗುಣದಿಂದಾಗಿ ಇದು ಮೂಳೆ ಸಂಧಿವಾತ ಮತ್ತು ರುಮೆಟೈಡ್ ಸಂಧಿವಾತಗಳ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನ ಕಾರಿಯಾಗಿದೆ. ಇದರ ಆಂಟಿಆಕ್ಸಿಡೆಂಟ್ ಗುಣವು ದೇಹದ ಸೆಲ್‍ಗಳನ್ನು ಮತ್ತು ಅಂಗಾಂಶಗಳಿಗೆ ಹಾನಿಮಾಡುವ ಪ್ರೀ ರ್ಯಾಡಿಕಲ್‍ಗಳನ್ನು ಕೊಲ್ಲುತ್ತವೆ. ರುಮೆಟೈಡ್ ಸಂಧಿವಾತದಿಂದ ಬಳಲುತ್ತಿರುವವರು ನಿಯಮಿತವಾಗಿ ಅರಿಶಿನವನ್ನು ಸೇವಿಸಿದರೆ ಸಣ್ಣ ಮತ್ತು ಮಧ್ಯಮ ಸಂಧಿನೋವು ಹಾಗೂ ಸಂಧಿ ಊತದಿಂದ ಹೆಚ್ಚಿನ ಆರಾಮವನ್ನು ಕಾಣುತ್ತಾರೆ.

ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ: ಅರಿಶಿಣಯನ್ನು ಸಕ್ಕರೆ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸುವ ಮೂಲಕ ಇನ್ಸುಲಿನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಅರಿಶಿನದ ಇನ್ನೊಂದು ಉಪಯೋಗವೆಂದರೆ ಇದು ಇನ್ಸುಲಿನ್ ರೋಧವನ್ನು ಕಡಿಮೆ ಮಾಡಿ ಟೈಪ್2 ಸಕ್ಕರೆ ಕಾಯಿಲೆ ಉಂಟಾಗುವುದನ್ನು ತಡೆಗಟ್ಟಲು ನೆರವಾಗುತ್ತದೆ.

ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡುತ್ತದೆ: ಅರಿಶಿನವನ್ನು ಆಹಾರದ ಭಾಗವಾಗಿ ಉಪಯೋಗಿಸುವುದರಿಂದ ಸೆರಮ್ ಕೊಲೆಸ್ಟರಾಲ್ ಮಟ್ಟವು ಕಡಿಮೆಯಾಗುತ್ತದೆಯೆಂದು ಅಧ್ಯಯನಗಳು ತಿಳಿಸಿವೆ. ಅತಿಯಾದ ಕೊಲೆಸ್ಟರಾಲ್‍ನಿಂದ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕೊಲೆಸ್ಟರಾಲ್ ಮಟ್ಟದ ಸರಿಯಾದ ನಿರ್ವಹಣೆಯಿಂದ ಹಲವಾರು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟ ಬಹುದಾಗಿದೆ.

ಇಮ್ಯುನಿಟಿ ಬೂಸ್ಟರ್: ಅರಿಶಿನವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಆಂಟಿಬ್ಯಾಕ್ಟಿರಿಯಲ್, ಆಂಟಿವೈರಲ್, ಆಂಟಿಫಂಗಲ್ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬಲಿಷ್ಠ ರೋಗನಿರೋಧಕ ವ್ಯವಸ್ಥೆಯು ಶೀತ, ಜ್ವರ ಮತ್ತು ಕೆಮ್ಮಿನ ಸಂಭವನೀಯತೆಯನ್ನು ಕಡಿಮೆ ಮಾಡುತ್ತವೆ. ನಿಮಗೆ ನೆಗಡಿ ಕೆಮ್ಮು ಅಥವಾ ಜ್ವರವುಂಟಾದರೆ ಒಂದು ಚಮಚ ಅರಿಶಿನ ಪುಡಿಯನ್ನು ಒಂದು ಗ್ಲಾಸ್ ಬಿಸಿಹಾಲಿನಲ್ಲಿ ಕರಗಿಸಿ ದಿನಕ್ಕೊಮ್ಮೆ ಕುಡಿಯುವುದರಿಂದ ಬೇಗ ಚೇತರಿಕೆ ಕಂಡುಬರುತ್ತದೆ.

ಗಾಯವನ್ನು ಮಾಗಿಸುತ್ತದೆ: ಅರಿಶಿಣ ಒಂದು ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಪದಾರ್ಥವಾಗಿದ್ದು ಇದನ್ನು ಸೋಂಕು ನಿವಾರಕವಾಗಿ ಬಳಸಬಹುದು. ನಿಮಗೆ ಗಾಯ ಅಥವಾ ಸುಟ್ಟ ಗಾಯಗಳಾಗಿದ್ದರೆ ಆ ಜಾಗದ ಮೇಲೆ ಅರಿಶಿನಪುಡಿಯನ್ನು ಉದುರಿಸುವುದರಿಂದ ಚೇತರಿಕೆಯ ಪ್ರಮಾಣವು ಹೆಚ್ಚುತ್ತದೆ. ಅರಿಶಿನವು ಹಾನಿಗೊಳಗಾದ ಚರ್ಮವನ್ನು ರಿಪೇರಿ ಮಾಡುತ್ತದೆ. ಆದ್ದರಿಂದ ಇದನ್ನು ಸೋರಿಯಾಸಿಸ್ ಮತ್ತು ಚರ್ಮದ ಇನ್ನಿತರ ಉರಿಯೂತ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು.