ಮಾವು-ಹಲಸು ಮೇಳ ಆರಂಭವಾಗಿದೆ ಬನ್ನಿ ನೀವು ಹಣ್ಣನ್ನು ಸವಿಯಿರಿ

0
459

ಬೆಂಗಳೂರು: ಲಾಲ್ ಬಾಗ್ ನಲ್ಲಿ ಮೇ 5ರ ಶುಕ್ರವಾರ ಮಾವು-ಹಲಸು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಳಿಗೆಗಳ ಉದ್ಘಾಟನೆ ಮಾಡಿದರು. ಮಾವಿನ ಕೃಷಿಕರಿಗೆ ಕೈಪಿಡಿ ಬಿಡುಗಡೆ ಮಾಡಿದ ಅವರು, ಆ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ ಕರ್ನಾಟಕದಿಂದ 6795 ಟನ್ ಮಾವು ರಫ್ತು ಮಾಡಲಾಗಿತ್ತು ಅದರಿಂದ 590 ಕೋಟಿ ರುಪಾಯಿ ವಿದೇಶಿ ವಿನಿಮಯ ಬಂದಿತ್ತು. ಈ ಬಾರಿ ಹತ್ತು ಸಾವಿರ ಟನ್ ಮಾವಿನ ಹಣ್ಣು ರಫ್ತು ಮಾಡುವ ನಿರೀಕ್ಷೆ ಇದೆ ಎಂದರು.

 

ಮಾವು ಮೇಳದಲ್ಲಿ ಯಾವುದರ ಬೆಲೆ ಎಷ್ಟು?

ಬಾದಾಮಿ 70, ಮಲ್ಲಿಕಾ 65, ಕೇಸರ್ 50, ಆಮ್ರಪಾಲಿ 50, ಬಂಗನಪಲ್ಲಿ 50, ಮಲಗೋವಾ 85, ರಸಪುರಿ 50, ಕಾಲಾಪಾಡ್ 45, ದಶೇರಿ 70, ಸಕ್ಕರೆ ಗುತ್ತಿ 60, ತೋತಾಪುರಿ 20, ಸೆಂಧೂರ 30, ನೀಲಂ 30- ಈ ಎಲ್ಲವೂ ಕೆಜಿಗಳಲ್ಲಿ ಬೆಲೆ ನೀಡಲಾಗಿದೆ. ನೀವು ಹಣ್ಣು ತೆಗೆದುಕೊಳ್ಳಬೇಕು ಅಂತ ನಿಶ್ಚಯಿಸಿ ಹೋದರೆ, ಬುಟ್ಟಿಯೋ ಮತ್ತೊಂದೋ ತೆಗೆದುಕೊಂಡು ಹೋಗಿ. ಇಲ್ಲದಿದ್ದರೆ ಬಾಕ್ಸ್ ಗೆ 50 ಅಥವಾ 30 ರುಪಾಯಿ ಹೆಚ್ಚುವರಿಯಾಗಿ ಕೊಡಬೇಕು.

20 ದಿನಗಳ ಕಾಲ ಇರುತ್ತೆ ಈ ಮೇಳ:

ಇಪ್ಪತ್ತು ದಿನಗಳ ಮೇಳ ಮೇ 5ರಿಂದ 24ರವರೆಗೆ ಅಂದರೆ ಇಪ್ಪತ್ತು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಲಾಲ್ ಬಾಗ್ ನಲ್ಲಿ ಮಾವು-ಹಲಸು ಮೇಳ ನಡೆಯಲಿದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಾರ್ಬೈಡ್, ರಾಸಾಯನಿಕವನ್ನು ಬಳಸದ ಮಾವಿನ ಹಣ್ಣು ಹಾಗೂ ವಿವಿಧ ತಳಿಯ ಹಲಸಿನ ಹಣ್ಣನ್ನು ಇಲ್ಲಿ ಖರೀದಿಸಬಹುದು.

ಬೇಂಗಳೂರಿನ ವಿವಿಧೆಡೆಯಲ್ಲಿ ಮಾರಾಟ ನಡೆಯುತ್ತಿದೆ

ಬೆಂಗಳೂರಿನ ವಿವಿಧೆಡೆ ಮಾರಾಟ ಲಾಲ್ ಬಾಗ್ ಮಾತ್ರವಲ್ಲದೆ ಬೆಂಗಳೂರಿನ ವಿವಿಧೆಡೆ ರೈತರು ಮಾವನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾಯಂಡಹಳ್ಳಿ, ವಿವೇಕಾನಂದ, ಎಂಜಿ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಜಯನಗರ ಮೆಟ್ರೋ ನಿಲ್ದಾಣಗಳಲ್ಲಿ, ಇಂದಿರಾನಗರ, ಸಹಕಾರ ನಗರದಲ್ಲಿ ಕೂಡ ಮಾರಾಟ ವ್ಯವಸ್ಥೆ ಮಾಡಲಾಗಿದೆ.