ಹಲ್ಲಿ ಶಾಸ್ತ್ರ : ವೈಜ್ಞಾನಿಕ ವಿಶ್ಲೇಷಣೆ

0
4918

ಹಲ್ಲಿ ಮೈಮೇಲೆ ಬಿದ್ದರೆ ಕಂಡುಬರುವ ಶಕುನಗಳು :

ಹಲ್ಲಿಗಳ ಪಾದದಲ್ಲಿ ಸ್ಥಾಯಿ ವಿದ್ಯುತ್ ನ ಗುಣ ಇರುವ ಅತಿಸೂಕ್ಷ್ಮ ಕೂದಲ ಕಾರಣ ಗೋಡೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.(ಹಿಂದೆ ಇದರ ಕಾಲಿನಲ್ಲಿ ರಬ್ಬರ್ ಹೀರು ಬಟ್ಟಲಿನಂತಿದ್ದು ಗೋಡೆಯನ್ನು ಹಿಡಿದುಕೊಳ್ಳುತ್ತದೆ ಎಂದು ನಂಬಲಾಗಿತ್ತು, ಆದರೆ ಇತ್ತೀಚಿನ ಸಂಶೋಧನೆಗಳು ನಿಜಸ್ಥಿತಿಯನ್ನು ವಿವರಿಸಿವೆ).ಆದರೆ ಗೋಡೆಗಳ ಮೇಲೆ ಸಂಗ್ರಹವಾಗಿರುವ ಅತಿಸೂಕ್ಷ್ಮ ಧೂಳಿನ ಕಾರಣ ಕೆಲವೊಮ್ಮೆ ಹಿಡಿತ ಸಿಗದೇ ಕೆಳಗೆ ಬೀಳುತ್ತದೆ.ವೈರಿಯಿಂದ ದೂರ ಓಡಲೂ ಗೋಡೆಯಿಂದ ನೆಗೆದರೂ ಯಾರದಾದರೂ ಮೈ ಮೇಲೆ ಬೇಕೆಂದೇ ಹಲ್ಲಿ ಎಂದಿಗೂ ಬೀಳುವುದಿಲ್ಲ. ಹಲ್ಲಿ ಬೀಳುವುದೇನಿದ್ದರೂ ಅತ್ಯಂತ ಅನಿರೀಕ್ಷಿತ ಹಾಗೂ ಕಾಕತಾಳೀಯವೇ ಹೊರತು ಯಾವತ್ತೂ ಪ್ರಜ್ಞಾಪೂರ್ವಕವಾಗಿ ಹಲ್ಲಿ ಮೈಮೇಲೆ ಬೀಳುವುದಿಲ್ಲ.

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ ಒಂದು ವೇಳೆ ಯಾರದಾದರೂ ಮೈಮೇಲೆ ಅಕಾಸ್ಮಾತ್ ಆಗಿ ಹಲ್ಲಿ ಬಿದ್ದರೆ, ಆಗ ಗೌಳಿಶಾಸ್ತ್ರದ ಆಗಮನವಾಗುತ್ತದೆ. ಈ ಶಾಸ್ತ್ರದ ಪ್ರಕಾರ ಹಲ್ಲಿ ದೇಹದ ಯಾವ ಭಾಗದ ಮೇಲೆ ಮೊದಲು ಬಿತ್ತು ಎಂಬ ಅಂಶವನ್ನು ಪರಿಗಣಿಸಿ ಒಳ್ಳೆಯ ಅಥವಾ ಕೆಟ್ಟ ಶಕುನವೆಂದು ಭಾವಿಸಲಾಗುತ್ತದೆ. ಕ್ಷೋಭೆಗೊಳ್ಳುವ ಮನಸ್ಸು, ಕೆಡುವ ಆರೋಗ್ಯ, ಮನೆಯವರಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಅಥವಾ ಸಾವು ಮೊದಲಾದ ಅಪಶಕುನಗಳಿದ್ದರೆ ಐಶ್ವರ್ಯದ ಆಗಮನ, ಉತ್ತಮ ಆರೋಗ್ಯ, ಕಳೆದುಹೋದವರು ಹಿಂದಿರುಗಿ ಬರುವುದು ಮೊದಲಾದ ಶುಭಶಕುನಗಳೂ ಇವೆ.

ಹಲ್ಲಿ ಲೊಚಗುಟ್ಟುವ ಶಕುನ :

ಹಲ್ಲಿ ಲೊಚಗುಟ್ಟುವುದನ್ನು ಕೇಳಿದರೆ ಅದು ಯಾವ ದಿಕ್ಕಿನಿಂದ ಬಂದಿತು, ಎಷ್ಟು ಹೊತ್ತು ಲೊಚಗುಟ್ಟಿತು? ದಿನದ ಯಾವ ಹೊತ್ತಿನಲ್ಲಿ ಕೇಳಿದಿರಿ? ಅಂದು ಯಾವ ದಿನವಾಗಿತ್ತು? ದಿನಾಂಕ ಏನು ಮೊದಲಾದ ವಿವರಗಳ ಮೇಲೆ ಶಕುನವನ್ನು ವಿವರಿಸಲಾಗುತ್ತದೆ.

ಗೌಳಿಶಾಸ್ತ್ರದ ಪ್ರಕಾರ ನಿಮಗೆ ಕೆಟ್ಟದಾಗುವಂತಿದ್ದರೆ ಏನು ಮಾಡಬೇಕು :-

ಗೌಳಿಶಾಸ್ತ್ರದ ಪ್ರಕಾರ ಹಲ್ಲಿ ಮೈಮೇಲೆ ಬಿದ್ದ ಬಳಿಕ ಕ್ಷಣಮಾತ್ರವೂ ತಡಮಾಡದೇ ಸ್ನಾನ ಮಾಡಿಬಿಡಬೇಕು, ಬಳಿಕ ತಕ್ಷಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಜ್ಯೋತಿ ಬೆಳಗಿಸಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ ಪಂಚಗವ್ಯವನ್ನು ಸೇವಿಸಬೇಕು.

ಮಣ್ಣಿನ ಅಥವಾ ಚಿನ್ನದ ದೀಪ ಅಥವಾ ಎಳ್ಳೆಣ್ಣೆಯನ್ನು ದಾನ ಮಾಡಬೇಕು. ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿಯನ್ನು ಮುಟ್ಟಿದರೆ ಹಿಂದಿನ ಕೆಡಕು ಮತ್ತು ದೋಷಗಳು ಪರಿಹಾರವಾಗುವುವು. ತಮಿಳುನಾಡಿನ ಕಾಂಚಿಪುರಂನಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಚಿನ್ನದ ಮತ್ತು ಬೆಳ್ಳಿಯ ಹಲ್ಲಿಗಳಿದ್ದು ಇವು ಸೂರ್ಯ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತವೆ.

ಈ ಶಕುನಗಳನ್ನು ಕೊಂಚ ವಿವರವಾಗಿ ನೋಡೋಣ:

 • ತಲೆಯ ಮೇಲೆ ನೇರವಾಗಿ ಬಿದ್ದರೆ ಕೆಡುಕು ಸಂಭವಿತುತ್ತದೆ
 • ಜಡೆಯಮೇಲೆ ಬಿದ್ದರೆ ಒಳ್ಳೆಯದಾಗುತ್ತದೆ
 • ಮುಖದ ಮೇಲೆ ಬಿದ್ದರೆ ಹತ್ತಿರದವರಲ್ಲಿ ಯಾರಿಗಾದರೂ ಪ್ರಾಣಾಪಾಯವಾಗುವ ಸಂಭವವಿದೆ
 • ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನವಾಗುತ್ತದೆ.
 • ಗಲ್ಲದ ಮೇಲೆ ಬಿದ್ದರೆ ಹಿಂದಿನ ತಪ್ಪಿಗೆ ಶಿಕ್ಷೆಯಾಗುವ ಸಂಭವವಿದೆ
 • ಮೇಲ್ತುಟಿಯ ಮೇಲೆ ಬಿದ್ದರೆ ನಿಮ್ಮ ಐಶ್ವರ್ಯವೆಲ್ಲಾ ಕರಗಿ ಬೀದಿಪಾಲಾಗುವ ಸಂಭವಿಸಲಿದೆ.
 • ಕೆಳತುಟಿಯ ಮೇಲೆ ಬಿದ್ದರೆ ನಿಮಗೆ ಭಾರೀ ಐಶ್ವರ್ಯ ದೊರಕಲಿದೆ.
 • ಮೂಗಿನ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಕೆಡಲಿದೆ
 • ಬಲಗಿವಿಯ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲಿದೆ
 • ತೆರೆದ ಬಾಯಿಯಲ್ಲಿ ಬಿದ್ದರೆ ನಿಮಗೇನೋ ಗ್ರಹಚಾರ ಕಾದಿದೆ.
 • ಕುತ್ತಿಗೆಯ ಮೇಲೆ ಬಿದ್ದರೆ ನಿಮ್ಮ ವೈರಿಗಳು ತನ್ನಿಂತಾನೇ ನಾಶವಾಗುತ್ತಾರೆ.
 • ಎಡಗೈಯ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ಸುಗಮವಾಗುತ್ತದೆ.
 • ಬಲಗೈ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಬಹಳ ಕೆಡಲಿದೆ.
 • ಬಲಮಣಿಕಟ್ಟಿನ ಮೇಲೆ ಬಿದ್ದರೆ ನಿಮಗೆ ಯಾವುದೋ ತೊಂದರೆ ಎದುರಾಗಲಿದೆ.
 • ಹೊಕ್ಕುಳ ಮೇಲೆ ಬಿದ್ದರೆ ನಿಮಗೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.
 • ತೊಡೆಗಳ ಮೇಲೆ ಬಿದ್ದರೆ ನಿಮ್ಮ ತಂದೆತಾಯಿಯರಿಗೆ ಬೇಸರ, ಅಸಂತೋಷ ಎದುರಾಗಬಹುದು.
 • ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
 • ಹಿಮ್ಮಡಿಯ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
 • ಪ್ರಷ್ಠಗಳ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
 • ಪಾದಗಳ ಮೇಲೆ ಬಿದ್ದರೆ ನಿಮಗೆ ಶೀಘ್ರದಲ್ಲಿಯೇ ದೂರಪ್ರಯಾಣದ ಸೌಭಾಗ್ಯವಿದೆ.
 • ವೃಷಣಗಳ ಅಥವಾ ಜನನಾಂಗಗಳ ಮೇಲೆ ಬಿದ್ದರೆ ಕಷ್ಟಕರ ಜೀವನ ಮತ್ತು ಬಡತನ ಎದುರಾಗಲಿದೆ.

ಮೇಲೆ ವಿವರಿಸಿರುವ ಶಕುನಗಳು ಗೌಳಿಶಾಸ್ತ್ರದ ಪರಿಚಯ ಮಾತ್ರವಾಗಿದೆ. ಏಕೆಂದರೆ ಗೌಳಿಶಾಸ್ತ್ರದಲ್ಲಿ ದೇಹದ 65 ವಿವಿಧ ಭಾಗಗಳಿಗೆ ಹಲ್ಲಿ ಬಿದ್ದರೆ ವಿವಿಧ ಶಕುನವನ್ನು ಹೇಳಲಾಗಿದೆ. ಅದರಲ್ಲೂ ಪುರುಷರ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲಿ ಬೀಳುವ ಶಕುನಗಳನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ.