“4ಕಥೆ” 4ನಿರ್ದೇಶಕರು ಹಂಸಲೇಖರ ಮಾರ್ಗದರ್ಶನದಲ್ಲಿ ಸಿನಿಮಾ ಮೂಡಿಬರಲಿದೆ

0
866

ನಾದ ಬ್ರಹ್ಮ ಹಂಸಲೇಖ ಸಂಗೀತ ಮಾಂತ್ರಿಕ ಹಂಸಲೇಖ ಹೊಸತೊಂದು ಸ್ಕೂಲು ಶುರು ಮಾಡಿದ್ದಾರೆ. ಅದರ ಹೆಸರು “ಹಂಲೇ ಸಿನಿ ಸ್ಕೂಲ್‌’. ಇಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವ ಆಸಕ್ತಿ ಇರುವವರಿಗೆ ಸಿನಿಮಾ ಪಾಠ ಹೇಳಿಕೊಡುತ್ತಾರೆ. ಈಗ ಅವರು ಮತ್ತೂಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದು “ಹಂಲೇ ಸಿನಿಸ್ಕೂಲ್‌ ಪ್ರೊಡಕ್ಷನ್‌’. ಈ ಬ್ಯಾನರ್ ಅಡಿಯಲ್ಲಿ ವಿಭಿನ್ನ ರೀತಿಯಲ್ಲಿ ನಾಲ್ಕು ಹೊಸ ಕತೆ ಮೂಡಿಬರಲಿದೆ.

ಅವರಿಂದಲೇ ಶಾರ್ಟ್‌ಫಿಲ್ಮ್ಗಳನ್ನು ಮಾಡಿಸುತ್ತಾರೆ. ಹಂಸಲೇಖ ಅವರೇ ಈ ಸ್ಕೂಲಿನ ಪ್ರಿನ್ಸಿಪಾಲು. ನಟನೆ ಆಸಕ್ತಿ ಇರುವವರಿಗೆ ನಟನೆ, ನಿರ್ದೇಶನದ ಮೇಲೆ ಪ್ರೀತಿ ಇರುವವರಿಗೆ ನಿರ್ದೇಶನ ಕಲಿಸಿಕೊಡುತ್ತಾರೆ. ಹಂಸಲೇಖ ಅವರ ಅನುಭವ ದೊಡ್ಡದು. ಅನುಭವವನ್ನೇ ಧಾರೆ ಎರೆದರೂ ಸಾಕು.

ಈ ಬ್ಯಾನರ್‌ ಅಡಿಯಲ್ಲಿ ಒಂದು ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ. ಅದರ ಹೆಸರು “4ಕೆ’. ನಾಲ್ಕು ಕತೆಗಳ ಒಂದು ಗುತ್ಛ ಈ ಸಿನಿಮಾ. ಈ ನಾಲ್ಕೂ ಕತೆಗಳನ್ನು ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸುತ್ತಾರೆ. ಸಂಗೀತ ನಿರ್ದೇಶಕರು, ಸಿನಿಮಾಟೋಗ್ರಾಫ‌ರ್‌ ಎಲ್ಲರೂ ಬೇರೆ ಬೇರೆ. ಈ ನಾಲ್ಕು ಕತೆಗಳಲ್ಲಿ ಒಂದು ಕತೆ ಹಿರಿಯ ಪತ್ರಕರ್ತ, ಬರಹಗಾರ ಜೋಗಿಯವರದು. ಅದರ ಹೆಸರು ಚಿತ್ತಾಣ. ಇನ್ನೊಂದು ತಿಲಕ್‌ ಸೋಮಯಾಜಿಯವರ ಅವನು ಅವಳು. ಉಳಿದೆರಡು ಲೀನಾ ಭಟ್‌ರ ಅಯೋರ ಮತ್ತು ಜಿಲೇಬಿ. ಈ ನಾಲ್ಕು ಕತೆಗಳು ಒಟ್ಟು ಸೇರಿ ಆಗಿರುವುದೇ “4ಕೆ’.

ಈ ಒಂದೊಂದು ಕತೆಯನ್ನೂ ಒಂದೊಂದು ಅಪರೂಪದ ಸ್ಥಳಗಳಲ್ಲಿ ಚಿತ್ರೀಕರಿಸಬೇಕು ಅನ್ನೋದು ಹಂಸಲೇಖರ ಆಸೆ. ಇಡೀ ಒಂದು ಕತೆ ಒಂದು ಚಾರಿತ್ರಿಕ ತಾಣದ ಹಿನ್ನೆಲೆಯನ್ನು ನಡೆಯುತ್ತದೆ. ಗೋಲ್‌ಗ‌ುಂಬಜ್‌, ಜೋಗ್‌ ಹೀಗೆ ಅಪರೂಪದ ಸ್ಥಳಗಳು ಈ ಕತೆಗಳಲ್ಲಿ ಒಂದು ಪಾತ್ರವಾಗಿ ಮೂಡಿ ಬರುತ್ತದೆ ಅನ್ನುತ್ತಾರೆ ಹಂಸಲೇಖ. ಇಲ್ಲಿ “ಅಯೋರ’ ಎಂಬ ಕತೆಯನ್ನು ಖುದ್ದು ಹಂಸಲೇಖ ನಿರ್ದೇಶಿಸಲಿದ್ದಾರೆ. ಉಳಿದ ಕತೆಗಳನ್ನು ಬೇರೆ ಬೇರೆ ನಿರ್ದೇಶಕರ ಮಡಿಲಿಗೆ ಹಾಕಿದ್ದಾರೆ. “ಅಯೋರ’ ಸಿನಿಮಾದ ಸಂಗೀತ ನಿರ್ದೇಶನವನ್ನು ಹಂಸಲೇಖ ಮಾಡಿದರೆ ಉಳಿದ ಸಿನಿಮಾಗಳ ಸಂಗೀತ ನಿರ್ದೇಶನದ ಹೊಣೆಯನ್ನು ವಿ.ಮನೋಹರ್‌, ಶ್ರೀಧರ್‌ ವಿ. ಸಂಭ್ರಮ್‌, ಭರತ್‌ ಬಿಜೆ ಮತ್ತು ಪೂರ್ಣಚಂದ್ರ ತೇಜಸ್ವಿ ಹೊತ್ತುಕೊಂಡಿದ್ದಾರೆ.

ಈ ಸಿನಿಮಾ ಹಿಂದೆ ಇರುವುದು ಹಂಸಲೇಖರವರ ಮಗ ಸೂರ್ಯಪ್ರಕಾಶ್‌. ಅವರು ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರೂ ಹೌದು. ಹಂಸಲೇಖರ ಮಾರ್ಗದರ್ಶನದಲ್ಲಿ, ಹಂಲೇ ಸಿನಿ ಸ್ಕೂಲ್‌ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ಮುನ್ನಡೆಸಲಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದು, ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಸಿನಿಮಾ ನೀಡುವುದು ನಮ್ಮ ಉದ್ದೇಶ ಎಂದು ಸೂರ್ಯಪ್ರಕಾಶ್‌ ಅಭಿಪ್ರಾಯ ತಿಳಿಸಿದ್ದಾರೆ.