ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

0
630

ಕರ್ನಾಟಕದ ಇತಿಹಾಸದ ದಾಖಲೆ 2000 ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗೂ ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.

ಮಿಥಿಲಯಾ ಕರ್ನಾಟಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನ್ನು ತಾವು ಕರ್ನಾಟ ವಂಶ ಹಾಗೂ ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು, ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.

ಸ್ವಾತಂತ್ರ್ಯದ ನಂತರ, ಒಡೆಯರ್ ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ”ಏಕೀಕರಣ” ಚಳುವಳಿ ೧೯ನೇ ಶತಮಾನದ ಎರಡನೇ ಭಾಗದಲ್ಲಿ ಶುರುವಾಗಿ ೧೯೫೬ ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು.

ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ೧೯೭೩ರಲ್ಲಿ ಪುನರ್ ನಾಮಕರಣ ಮಾಡಲಾಯಿತು.  ಮೈಸೂರು ರಾಜ್ಯವು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವ/ ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಶೇರ್ ಮಾಡಿ ಶುಭಾಶಯ ತಿಳಿಸಿ