ಒಂದು ಕಾಲದಲ್ಲಿ ಊಟಕ್ಕೂ ಕಷ್ಟಪಡಬೇಕಾಗಿದ್ದ ನಂದಿನಿಯ, ಇಂದು ಸ್ವಂತ ಆಫೀಸ್ ನಲ್ಲಿ 6 ಮಂದಿ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ.

0
1911

Kannada News | kannada Useful Tips

ಆಕೆಯ ಹೆಸರು ನಂದಿನಿ. ಓದುವುದು ಎಂದರೆ ತುಂಬಾ ಇಷ್ಟ. ಆ ಇಷ್ಟದಿಂದಲ್ಲೇ ಕಷ್ಟಪಟ್ಟು ಚನ್ನಾಗಿ ಓದಿ ಡಾಕ್ಟರ್ ಆಗಬೇಕು ಎಂದುಕೊಂಡಿದ್ದಳು. ಆದರೆ ಬಡತನ ಆಕೆಯ ಆಸೆಗೆ ಅಡ್ಡ ಬಂದಿತು. ನಂದಿನಿಯ ತಂದೆ ಒಂದು ಚಿಕ್ಕ ಗುಡಿಯಲ್ಲಿ ಪೂಜಾರಿ. ಹೊಟ್ಟೆಗೆ ಊಟ ಸಿಗುವುದೇ ಕಷ್ಟವಾಗಿದ್ದ ಸಮಯದಲ್ಲಿ ಓದುವುದು ಹೇಗೆ ಹೇಳಿ. ಹಾಗಾಗಿ ಓದಿಗೆ ಫುಲ್ ಸ್ಟಾಪ್ ಇಡಬೇಕಾಯಿತು. ಕೆಲವು ದಿನಗಳಲ್ಲಿ ಆಕೆಗೆ ಮದುವೆ ಮಾಡಿದರು. ಆತ ಸಹ ಗುಡಿಯೊಂದರಲ್ಲಿ ಪೂಜಾರಿ. ತವರು ಮನೆಯ ಪರಿಸ್ಥಿತಿಗೂ ಗಂಡನ ಮನೆಯ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ.

ಅದೇ ಸಮಯದಲ್ಲಿ ಆಕೆಯ ತಂದೆಯ ಮರಣದಿಂದಾಗಿ ತಂಗಿ ಜವಾಬ್ದಾರಿಯನ್ನು ಸಹ ಈಕೆ ವಹಿಸಿಕೊಳ್ಳಬೇಕಾಯಿತು. ಇದರಿಂದ ಜೀವನ ಮತ್ತಷ್ಟು ಕಷ್ಟವಾಯಿತು. ಹಾಗಾಗಿ ನಾನು ಏನಾದರೂ ಕೆಲಸ ಮಾಡಿ, ಮನೆಗೆ ಆಸರೆಯಾಗಬೇಕು ಎಂದುಕೊಂಡಳು. ಬಿಲ್ಡಿಂಗ್‌, ಮನೆಗಳಿಗೆ ಬಣ್ಣ ಹಚ್ಚುವುದು, ನಿರ್ಮಾಣ ವಲಯಕ್ಕೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆ ಕೆಲಸ ಮಾಡಿದಳು. ಸ್ವಲ್ಪ ಕಾಲ ಟ್ರಾವೆಲ್ಸ್‌ ಒಂದರಲ್ಲೂ ದುಡಿದಳು. ಆದರೆ ಸ್ವಂತ ಏನಾದರೂ ಬಿಸಿನೆಸ್‌ ಮಾಡುವ ಕನಸಿತ್ತು. ತನ್ನ ಆಸೆಯನ್ನು ಸ್ನೇಹಿತರು, ಬಂಧುಗಳ ಬಳಿ ಹೇಳಿಕೊಂಡಳು. ಆಗ ಸ್ನೇಹಿತೆ ಹೇಳಿದ ಸಲಹೆಯಿಂದ ಆಕೆಯ ಜೀವನದಲ್ಲಿ ಮಹತ್ತರ ಬದಲಾವಣೆ ಆಯಿತು.

ಇಷ್ಟಕ್ಕೂ ನಂದಿನಿಗೆ ಆಕೆಯ ಸ್ನೇಹಿತೆ ನೀಡಿದ ಸಲಹೆ ಏನು ಗೊತ್ತಾ. ಸಿಟಿಯಲ್ಲಿ ಕಂಡುಬರುವ ಉಬರ್‌ ಕ್ಯಾಬ್‌ ಕಂಪನಿ ಉಬರ್‌ ದೋಸ್ತ್‌ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಯಾರಾದರೂ ಉಬರ್‌ ನೆಟ್‌ವರ್ಕ್‌ಗೆ ಚಾಲಕರನ್ನು ಸೇರ್ಪಡೆಗೊಳಿಸುವವರಿಗೆ 2500-3000 ಕಮೀಶನ್‌ ಕೊಡುತ್ತದೆ ಎಂದು ಸಲಹೆ ನೀಡಿದಳು. ಆಗ ನಂದಿನಿ ಡ್ರೈವರ್ ಬೇಕಾಗಿದ್ದಾರೆ ಎಂದು ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಐಟಿ ಪಾರ್ಕ್‌ ಮುಂತಾದ ಕಡೆಗಳಿಗೆ ತೆರಳಿ, ಕಾರು ಚಾಲಕರನ್ನು ಮಾತನಾಡಿಸಿ, ಉಬರ್‌ ಬಗ್ಗೆ ವಿವರಿಸಿದಳು. ಪ್ರಾರಂಭದಲ್ಲಿ ಒಪ್ಪಿಸುವುದೂ ಕಷ್ಟವಾಗಿತ್ತು. ಕ್ರಮೇಣ ಬಿಸಿನೆಸ್‌ ಸುಧಾರಿಸಿತು.

ಅಷ್ಟೇ ನಂದಿನಿ ಜೀವನ ಬದಲಾಗಿ ಹೋಯಿತು. ಸ್ವಾರಸ್ಯವೆಂದರೆ ನಂದಿನಿ ಅವರು ಇದುವರೆಗೆ 1,500ಕ್ಕೂ ಹೆಚ್ಚು ಚಾಲಕರನ್ನು ಉಬರ್‌ಗೆ ಪರಿಚಯಿಸಿದ್ದಾಳೆ. ತಿಂಗಳಿಗೆ 2 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾಳೆ. ಒಂದು ಕಾಲದಲ್ಲಿ ಊಟಕ್ಕೂ ಕಷ್ಟಪಡಬೇಕಾಗಿದ್ದ ನಂದಿನಿಯ ಕುಟುಂಬ ಇಂದು ಸ್ವಂತ ಆಫೀಸ್ ಅದರಲ್ಲಿ 6 ಮಂದಿ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ಚಾಲಕರನ್ನು ಉಬರ್‌ಗೆ ಸೇರಿಸುವುದಕ್ಕಷ್ಟೇ ಕೆಲಸ ಮುಗಿಯುವುದಿಲ್ಲ. ನಂತರ ನೆಟ್‌ವರ್ಕ್‌ನಲ್ಲಿ ಸಕ್ರಿಯವಾಗಿರುವಂತೆಯೂ ನೋಡಿಕೊಳ್ಳಬೇಕಾಗುತ್ತದೆ. ಆದರೆ ಈ ಕೆಲಸವನ್ನು ಮಹಿಳೆಯರೂ ಮಾಡಬಹುದು’ ಎಂಬುದನ್ನು ನಂದಿನಿ ಸಾಧಿಸಿ ತೋರಿಸಿದ್ದಾಳೆ.

Also Read: ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್-ನ ಕಥೆಗಳು!!!