ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯೊರ್ವ ಕಪಾಳಮೋಕ್ಷ; ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್..

0
247

ಲೋಕಸಭಾ ಚುನಾವಣೆಯ ಪ್ರಚಾರ ದೇಶದಲ್ಲಿ ಬಿರುಸಿನಿಂದ ನಡೆಯುತ್ತಿದ್ದು, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಮ ಪಾಟೀಲ್ ಪರ ಭಾಷಣ ಮಾಡುತ್ತಿದ್ದ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯೊರ್ವ ಸಾರ್ವಜನಿಕ ಸಮಾರಂಭದಲ್ಲಿ ಕಪಾಳಮೊಕ್ಷ ಮಾಡಿರುವ ಘಟನೆ ಸುರೇಂದ್ರ ನಗರ್ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಅದರಂತೆ ಸುರೇಂದ್ರ ನಗರ್​ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಏನಿದು ಘಟನೆ?

ಹೌದು ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ, ಪಾಟೀಲ್ ಪರ ಮತಯಾಚಿಸಿ ಹಾರ್ದಿಕ್ ಪಟೇಲ್ ಭಾಷಣ ಮಾಡುತ್ತಿದ್ದ ವೇಳೆ ಅಪರಿಚಿತನೊಬ್ಬ ಹಠಾತ್ ವೇದಿಕೆ ಏರಿ ಕಪಾಳ ಮೋಕ್ಷ ಮಾಡಿದ. ಈ ಘಟನೆಯಿಂದ ವೇದಿಕೆಯಲ್ಲಿದ್ದ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಆತ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಚಳುವಳಿಯನ್ನೇ ಮರೆತಿದ್ದಾರೆ. ತಾನು ರಾಜಕೀಯವಾಗಿ ಬೆಳೆಯಲು ಜನರನ್ನು ಬಳಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಜನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ” ಇದರಿಂದ ಕಾಂಗ್ರೆಸ್ ವಲಯದಲ್ಲಿ ಬಾರಿ ಹಿಂಜರಿಕೆಯಾಗಿದೆ.

ಸಮಾವೇಶದಲ್ಲಿ ಕಪಾಳ ಹೊಡೆದ ವ್ಯಕ್ತಿ ಯಾರು?

ಹಾರ್ದಿಕ್ ಪಟೇಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ತರುಣ್ ಗಜ್ಜಿರ್ ಎಂದು ಗುರುತಿಸಲಾಗಿದ್ದು, ಪಟೇಲ್ ಸಾರ್ವಜನಿಕರ ಸಮಾರಂಭದ ಮೇಲೆ ಭಾಷಣ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಇತ್ತ ಪೊಲೀಸರು ತರುಣ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್, ಪಾಟೀದರ್ ಸಮುದಾಯದ ಮೀಸಲಾತಿ ಹೋರಾಟ ನಡೆಯುವ ವೇಳೆ ನನ್ನ ಪತ್ನಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ದು ಕೂಡ ಬಂದ್ ನಡೆದಿದ್ದ ಕಾರಣ ಔಷಧಿಗಳು ಲಭ್ಯವಾಗದೇ ಸಮಸ್ಯೆ ಎದುರಿಸಿದ್ದೆ. ಅಲ್ಲದೇ ಪತ್ನಿ ಮಗುವಿಗೆ ಜನ್ಮ ನೀಡಿದ ಬಳಿಕವೂ ಆದೇ ಸಮಸ್ಯೆ ಮುಂದುವರಿದಿತ್ತು. ಅಂದೇ ಈತನಿಗೆ ಸೂಕ್ತ ಬುದ್ಧಿ ಕಲಿಸಲು ನಿರ್ಧರಿಸಿ ಈ ಕೃತ್ಯ ನಡೆಸಿದ್ದಾಗಿ ತಿಳಿಸಿದ್ದಾನೆ.

ಘಟನೆಯ ಹಿಂದೆ ಬಿಜೆಪಿ ಕೈವಾಡ?

ಮೋದಿಯ ಕಟ್ಟಾ ವಿರೋಧಿ ಬಣಕ್ಕೆ ಸೇರಿದ ಹಾರ್ದಿಕ್ ಪಟೇಲ್ ಮೇಲೆ ಹೀಗೆ ಬಹಿರಂಗ ದಾಳಿ ನಡೆಯುತ್ತಿದ್ದಂತೆ ಘಟನೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ. ಘಟನೆಯ ಹಿಂದೆ ಬಿಜೆಪಿ ಕೈವಾಡ ಇರುವ ಕುರಿತು ಶಂಕೆ ವ್ಯಕ್ತಪಡಿಸಿರುವ ಹಾರ್ದಿಕ್ ಪಟೇಲ್, ‘ಹಲ್ಲೆ ನಡೆಸಿದ ವ್ಯಕ್ತಿಗೆ ನನ್ನ ಕುರಿತು ಅಸಮಾಧಾನವಿದ್ದರೆ ನನ್ನ ಬಳಿ ಬಂದು ಮಾತನಾಡಬಹುದಿತ್ತು. ಅಥವಾ ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ ನಡೆಸಬಹುದಿತ್ತು. ಆದರೆ ಹೀಗೆ ದೈಹಿಕ ಹಲ್ಲೆ ನಡೆಸುವುದು ಬಿಜೆಪಿ ಸಂಸ್ಕೃತಿ ಹಾಗೂ ಬಿಜೆಪಿ ಪಕ್ಷದ ಹೋರಾಟದ ರೀತಿಯೇ ಹಾಗಿದೆ. ಹೀಗಾಗಿ ಇದರ ಹಿಂದೆ ಖಂಡಿತ ಬಿಜೆಪಿ ಪಕ್ಷದ ಕೈವಾಡ ಇದೆ” ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ “ಹಲ್ಲೆ ನಡೆಸಿದ ವ್ಯಕ್ತಿಯನ್ನು ಸ್ಥಳದಲ್ಲಿ ಯಾರೂ ಪ್ರತಿಹಲ್ಲೆ ನಡೆಸದಂತೆಯೂ ಎಚ್ಚರಿಕೆ ವಹಿಸಿ, ಆತನನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ”

ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆ ಈ ಹಿಂದೆ ಹಾರ್ದಿಕ್ ಪಟೇಲ್ ಜೊತೆ ಇದ್ದು ಈಗ ಬಿಜೆಪಿ ಸೇರ್ಪಡೆಯಾಗಿರುವ ಸ್ಥಳೀಯ ನಾಯಕ ವರುಣ್ ಪಟೇಲ್ ಈ ಕುರಿತು ಸ್ಪಷ್ಟಣೆ ನೀಡಿದ್ದು, “ಯಾವುದೇ ನಾಯಕನ ಮೇಲೆ ಹೀಗೆ ಬಹಿರಂಗವಾಗಿ ಹಲ್ಲೆ ನಡೆಸುವುದು ಖಂಡನೀಯ. ಅಲ್ಲದೆ ಈ ಘಟನೆಯ ಹಿಂದೆ ಬಿಜೆಪಿ ಕೈವಾಡ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Also read: ಶಾಶ್ವತವಾಗಿ ದೇವೇಗೌಡರ ಕುಟುಂಬವನ್ನು ರಾಜಕೀಯದಿಂದ ಕಿತ್ತೊಗೆಯಿರಿ; ಸೈನಿಕರಿಗೆ ಅವಮಾನ ಮಾಡಿದ ಪರಿವಾರಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು; ನರೇಂದ್ರ ಮೋದಿ..