ಈ ಸ್ಮಾರ್ಟ್ ಫೋನ್-ಗಳು ಅತೀ ಹೆಚ್ಚು ಅಪಾಯಕಾರಿ ರೇಡಿಯೇಶನ್ ಹೋರಹಮ್ಮುತ್ತವೆ, ನಿಮ್ಮ ಸ್ಮಾರ್ಟ್ ಫೋನ್ ಈ ಪಟ್ಟಿಯಲ್ಲಿ ಇದೆಯೇ ತಿಳಿದುಕೊಳ್ಳಿ…

0
932

ಅತಿ ಹೆಚ್ಚು ರೇಡಿಯೇಷನ್​ ಹೊಂದಿರುವ ​ಫೋನ್ ಪಟ್ಟಿ ಬಿಡುಗಡೆ: ನಿಮ್ಮ ಮೊಬೈಲ್​ ಇದರಲ್ಲಿದೆಯೇ?

ಮೊಬೈಲ್ ಫೋನ್-ಗಳು ಬಂದಾಗಿಂದ ಏನೆಲ್ಲಾ ಬದಲಾಗಿವೆ. ಬಳಕೆದಾರರಂತು ಮೊಬೈಲ್ ಇಲ್ಲದೆ ಒಂದು ನಿಮಿಷವೂ ಇರಲು ಸಾದ್ಯವಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಅದರಲ್ಲಿ ಸ್ಮಾರ್ಟ್ ಫೋನ್ ಬಂದಾಗಿಂದ ಜನರಿಗೆ ಮಾತನಾಡುವ ಬದಲು ಮನರಂಜನೆಯ ಹೆಚ್ಚಾಗಿದೆ. ಹಾಗೆಯೇ 90 ರಷ್ಟು ಪ್ರಪಂಚದ ಎಲ್ಲ ವಿಷಯಗಳು ತಿಳಿಯುತ್ತಿದೆ. ಅಷ್ಟೇಅಲ್ಲದೆ ಬ್ಯಾಂಕಿಂಗ್, ವ್ಯವಹಾರಗಳಿಗೂ ಈ ಸ್ಮಾರ್ಟ್ ಫೋನ್-ಗಳು ಲಗ್ಗೆ ಇಟ್ಟಿದು ನಗದು ರಹಿತ ವ್ಯವಹಾರಗಳು ಫೋನ್-ಗಳಲ್ಲೇ ನಡೆಯುತ್ತಿವೆ. ಇದು ಬರಿ ಪ್ರಯೋಜನವಾದರೆ ಇನ್ನೂ ಹೆಚ್ಚು ರೇಡಿಯೇಷನ್ ಇರುವ ಮೊಬೈಲ್ ಬಳಕೆ ಮಾಡಿದರೆ ಅಪಾಯಗಳು ಕಟ್ಟಿಟ ಬುತ್ತಿ ಎನ್ನುವುದ್ದನ್ನು ಸಂಶೋಧನೆಗಳು ತಿಳಿಸಿವೆ.

Also read: ನಿಮ್ಮ ಸ್ಮಾರ್ಟ್ ಫೋನ್- ನಲ್ಲಿ ಅಶ್ಲೀಲ ವೀಡಿಯೋಗಳನ್ನು ವೀಕ್ಷಣೆ ಮಾಡುತ್ತಿದ್ದಿರ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ..

ಹೌದು ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಮೊಬೈಲ್ ಆಧುನಿಕ ಜೀವನ ಶೈಲಿಯ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಇದರಿಂದ ಪ್ರಪಂಚದ ಶೇಕಡಾ 90 ರಷ್ಟು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಾಗೆಯೇ ಈ ವೇಳೆಯಲ್ಲಿ ಖರೀದಿಸುವ ಗ್ರಾಹಕರು ಫೀಚರ್​ಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಯಾವ ಮೊಬೈಲ್​ನಲ್ಲಿ ಹೆಚ್ಚು ಸ್ಟೋರೇಜ್ ಇದೆ, ಬ್ಯಾಟರಿ ಪ್ಯಾಕ್​ಅಪ್ ಯಾವುದರಲ್ಲಿ ಹೆಚ್ಚಿದೆ? ಇತ್ತೀಚೆಗೆ ಬಿಡುಗಡೆಯಾದ ಅತ್ಯುತ್ತಮ ಕ್ಯಾಮೆರಾ ಫೋನ್ ಯಾವುದು? ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆದರೆ ಇವೆಲ್ಲಕ್ಕಿಂತಲೂ ಮೊಬೈಲ್​ನಲ್ಲಿ ನೋಡಬೇಕಿರುವುದು ಸ್ಮಾರ್ಟ್​ಫೋನಿನ ರೇಡಿಯೇಷನ್. ಆದರೆ ಇಂತಹದೊಂದು ವಿಷಯದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ ಎಂಬುದೇ ಆತಂಕಕಾರಿ ವಿಷಯ.

ಹೆಚ್ಚು ರೇಡಿಯೇಷನ್ ದೃಷ್ಟಪರಿಣಾಮ ಏನು?

ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ರೇಡಿಯೇಷನ್ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಏಕೆಂದರೆ ಮೊಬೈಲ್​ನಿಂದ ಉಂಟಾಗುವ ತರಂಗಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ಫೋನಿನಲ್ಲಿ ಮಾತನಾಡುವ ವೇಳೆ ಹೊರ ಬರುವ ರೇಡಿಯೇಷನ್ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೆದುಳು ಕ್ಯಾನ್ಸರ್​ಗೂ ಇದುವೇ ಕಾರಣವಾಗುತ್ತಿದೆ ಎಂದು ಕೆಲ ವರದಿಗಳು ಹೇಳಿದೆ.

ಮೊಬೈಲ್ ರೇಡಿಯೇಷನ್ ಪತ್ತೆ ಹಚ್ಚಿದ ಜರ್ಮನ್:

Also read: ದುಬಾರಿ ಆಪಲ್ ಐಫೋನ್ ಮತ್ತು ಐಪ್ಯಾಡ್ ಕೊಂಡುಕೊಳ್ಳಲು ಕಿಡ್ನಿ ಮಾರಿದ್ದ ವ್ಯಕ್ತಿ ಈಗ ಹಾಸಿಗೆ ಹಿಡಿರುವುದನ್ನು ನೋಡಿ, ಮನುಷ್ಯನ ಹುಚ್ಚಾಟಕ್ಕೆ ಪಾರೇ ಇಲ್ಲ ಅಂತೀರ!!

ವಿಶ್ವದ ಅತ್ಯುತ್ತಮ ಮೊಬೈಲ್ ಎಂದು ಖ್ಯಾತಿ ಪಡೆದಿರುವ ಆ್ಯಪಲ್​ನ ಐಫೋನ್​ ಸೇರಿದಂತೆ 16 ಮೊಬೈಲ್​ಗಳಿವೆ. ಶಿಯೋಮಿ ಕಂಪೆನಿಯ ಮೀ ಎ1 ಮೊಬೈಲ್​ 1.75 ಪ್ರಯಾಣದ ರೇಡಿಯೇಷನ್​ ಬಿಡುಗಡೆ ಮಾಡುವ ಮೂಲಕ ಈ ಪಟ್ಟಿಯ ಅಪಾಯಕಾರಿ ಫೋನ್​ ಎನಿಸಿಕೊಂಡಿದೆ. ಅದರಂತೆ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳ ಮತ್ತು ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಮೊಬೈಲ್​ಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಂತಹ ಮೊಬೈಲ್ ಫೋನ್​ಗಳಿಂದ ಸಾಧ್ಯವಾದಷ್ಟು ದೂರವಿರುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎಂದು ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆ ತಿಳಿಸಿದೆ.

ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಇರುವ 16 ಫೋನ್‌ಗಳು:

ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳನ್ನು ಮಲಗುವಾಗ ತಲೆ ಭಾಗದಲ್ಲಿರಿಸಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
Xiaomi Mi A1, OnePlus 5T, Xiaomi Mi Max 3, OnePlus 6T, HTC U12 Life, Xiaomi Mi Mix 3, Google Pixel 3 XL, OnePlus 5, iPhone 7, Sony Xperia XZ1 Compact, HTC Desire 12/12+, Google Pixel 3, one Plus 6, iPhone 8, Xiaomi Redmi Note, ZTE AXON 7 mini,

ಕಡಿಮೆ ರೇಡಿಯೇಷನ್ ಇರುವ 16 ಫೋನ್‌ಗಳು:

1. Samsung Galaxy 8, ZTE Axon Elite, LG G7, Samsung Galaxy A8, Samsung Galaxy S8+, Samsung Galaxy S7 Edge, HTC U11 Life, LG Q6/Q6+, Samsung Galaxy S9+, motorola Moto g5 plus, Motorola Moto Z, Samsung Galaxy J6+, ZTE Blade A610, Samsung Galaxy J4+, Samsung Galaxy S8, 16. ZTE Blade V9,

ಈ 16 ಸ್ಮಾರ್ಟ್​ಫೋನ್​ಗಳಿಂದ ಕಡಿಮೆ ಪ್ರಮಾಣದ ರೇಡಿಯೇಷನ್ ಬಿಡುಗಡೆಯಾಗುತ್ತದೆ. ಈ ಫೋನ್​ಗಳ ಬಳಕೆಯಿಂದ ಅಪಾಯವಿಲ್ಲ ಎಂದಲ್ಲ. ಬದಲಾಗಿ ರೇಡಿಯೇಷನ್ ಪ್ರಭಾವ ಕಡಿಮೆ ಇರುವುದರಿಂದ ಬಳಕೆಗೆ ಈ ಸ್ಮಾರ್ಟ್​ಫೋನ್​ಗಳು ಉತ್ತಮ ಎಂದು ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆ ಹೇಳಿದೆ.