ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಪರಭಾಷಿಗರ ಅಟ್ಟಹಾಸ..!!!

0
417
ಬೆಂಗಳೂರಲ್ಲಿ ಪರಭಾಷಿಗರ ಅಟ್ಟಹಾಸ ದಿನದಿಂದ ದಿನ್ನಕ್ಕೆ ಮಿತಿ ಮೀರುತ್ತಿದ್ದೆ.  ಇದೀಗ ಇದ್ದಕ್ಕೆ ಒಂದು ನೇರ ಉದಾಹರಣೆ ಇಲ್ಲಿದೆ ನೋಡಿ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಗರದ ಮಾರತ್ ಹಳ್ಳಿಯ ಮುನ್ನೆಕೊಳಲಿನಲ್ಲಿ ಶಿಲ್ಪಾ ಎಂಬಾಕೆಯ ಮೇಲೆ ಹಲ್ಲೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಶಿಲ್ಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಲ್ಪಾ ಉತ್ತರ ಕರ್ನಾಟಕದ ಚಿತ್ರದುರ್ಗದವರು ನಿನ್ನೆ ಮನೆಗೆ ಹೋಗುವ ವೇಳೆಗೆ ಉತ್ತರ ಭಾರತದ ಕೆಲ ಯುವಕರು ಶಿಲ್ಪಾಳ ಬಳಿ ಹಿಂದಿಯಲ್ಲಿ ಅಡ್ರೆಸ್​​ ಕೇಳಿದ್ದಾರೆ. ಆದರೇ ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಶಿಲ್ಪಾ ಕನ್ನಡದಲ್ಲಿ ಉತ್ತರಿಸಿದ್ದಾಳೆ.  ಆದರೇ ಉತ್ತರ ಭಾರತ ಮೂಲದ ಯುವಕರು ಮತ್ತೆ -ಮತ್ತೆ ಅಡ್ರೆಸ್ ಹಿಂದಿಯಲ್ಲಿಯೇ ​ಕೇಳಿದ್ದಾರೆ. ಆಗಲೂ ಶಿಲ್ಪಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಯುವಕರು ಶಿಲ್ಪಾ ಮೇಲೆ ಎರಗಿ ಕತ್ತು ಸೀಳಿ ಪರಾರಿಯಾಗಿದ್ದಾರೆ.
ಈ ಘಟನೆ ನಡೆದ ತಕ್ಷಣ ಸ್ಥಳೀಯರು ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚಿಗೆ ನಗರದಲ್ಲಿ ಉತ್ತರ ಭಾರತ ಭಾಗದ ಪುಂಡರ ಹಾವಳಿ ಮಿತಿಮೀರಿದ್ದು ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಶಿಲ್ಪಾಳಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತಾರಾ ಕಾದುನೋಡಬೇಕು.
ಮಾಹಿತಿ ಕೃಪೆ: BTV News