ಹ್ಯಾರಿಪಾಟರ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

0
474

ಹ್ಯಾರಿ ಪಾಟರ್

ಖ್ಯಾಹ್ಯಾರಿಪಾಟರ್ ಸರಣಿಯ ಎಂಟನೇ ಕಾದಂಬರಿ ‘ಹ್ಯಾರಿಪಾಟರ್ ಕರ್ಸ್ಡ್ ಚೈಲ್ಡ್’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಥಾ ನಾಯಕ ಹ್ಯಾರಿಯ ಮುಂದುವರಿದ ಪೀಳಿಗೆಯ ಕಥೆ ಇದು. ಜಗತ್ತಿನಾದ್ಯಂತ ಓದುಗರ  ಮನ ಕದ್ದಿರುವ ಹ್ಯಾರಿಪಾಟರ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಏನಿದು ಹ್ಯಾರಿಪಾಟರ್ ?

ಹ್ಯಾರಿಪಾಟರ್ ಎಂಬುದು ಬ್ರಿಟಿಷ್ ಲೇಖಕಿ ಜೆ.ಕೆ. ರೌಲಿಂಗ್ ಅವರು ಬರೆದಿರುವ ಕಾಲ್ಪನಿಕ ಕಾದಂಬರಿಗಳ ಸರಣಿ. ಇಲ್ಲಿಯವರೆಗೆ ಒಟ್ಟು 8 ಕಾದಂಬರಿಗಳು ಬಿಡುಗಡೆಯಾಗಿವೆ.

ದಾಖಲೆ ನಿರ್ಮಾಣ:

ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳು ಕೋಟ್ಯಂತರ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಇದುವರೆಗೆ ಮಾರಾಟವಾಗಿರುವ ಸರಣಿಯ ಎಲ್ಲಾ ಪುಸ್ತಕಗಳ ಸಂಖ್ಯೆ 45 ಕೋಟಿಯನ್ನು ಮೀರಿದೆ ಎಂದರೆ ಅದರ ಜನಪ್ರಿಯತೆಯನ್ನು ಊಹಿಸಿಕೊಳ್ಳಬಹುದು. ಹ್ಯಾರಿ ಪಾಟರ್ ಪುಸ್ತಕಗಳು 73 ಭಾಷೆಗಳಿಗೆ ಅನುವಾದಗೊಂಡಿದೆ.

ಜೆ.ಕೆ. ರೋಲಿಂಗ್: ಹ್ಯಾರಿ ಪಾಟರ್ ಕಥೆ ಹೊಳೆದದ್ದು, ರೈಲಿನಲ್ಲಿ ಪಯಣಿಸುವಾಗ ಎಂದು ಲೇಖಕಿ ಜೆ.ಕೆ. ರೋಲಿಂಗ್ ಹಲವು ಬಾರಿ ಹೇಳಿದ್ದಾರೆ. 1995ರಲ್ಲೇ ಈ ಕಥೆ ಪೂರ್ಣವಾಗಿದ್ದೆರೂ ಪ್ರಕಟವಾದದ್ದು 1997ರಲ್ಲಿ, ಲೇಖಕಿ ಮೊರೆ ಹೋದ ಮೊದಲ ಪ್ರಕಾಶಕರು ಪುಸ್ತಕ ಪ್ರಕಟಿಸಲು ನಿರಾಕರಿಸಿದ್ದರಂತೆ. ಆದರೆ ಬ್ಲೂಮ್ಸ್ ಬರಿ ಎಂಬ ಪ್ರಕಾಶನ ಸಂಸ್ಥೆ ಹ್ಯಾರಿಪಾಟರ್ ಪ್ರಕಟಿಸಲು ಒಪ್ಪಿಕೊಂಡಿತು. ರೋಲಿಂಗ್ 9ರಿಂದ 11ನೇ ವಯಸ್ಸಿನ ಮಕ್ಕಳಿಗಾಗಿ ಈ ಕಥೆ ರಚಿಸಿದ್ದರು. ಕಥೆಗಾರ್ತಿ ಒಬ್ಬ ಮಹಿಳೆ ಎಂದು ತಿಳಿದರೆ, ಓದುಗರು ಪುಸ್ತಕ ಕೊಳ್ಳಲು ಹಿಂದೇಟು ಹಾಕಬಹುದು. ಹೀಗಾಗಿ ನಿಮ್ಮ ಲಿಂಗಸೂಚಕವಾಗಿರಬಾರದು ಎಂದೂ ಅದು ಷರತ್ತು ವಿಧಿಸಿತ್ತು. ಹೀಗಾಗಿ ಎಂದಿದ್ದ ಅವರ ಹೆಸರು ಜಾನ್ ಕ್ಯಾಥ್ಲೀನ್ ರೋಲಿಂಗ್ ಎಂದಾಯಿತು. ಒಂದಿಡೀ ತಲೆಮಾರಿನ , ಜಗತ್ತಿನ ಕೋಟ್ಯಂತರ ಮಕ್ಕಳಿಗೆ ಕಥೆ ಹೇಳಿದವರು ಈಕೆ.ಈ ಸರಣಿಯ ಕಥೆಗಳನ್ನು ಅಧರಿಸಿ ಈಗಾಗಲೇ ಎಂಟು ಸಿನೆಮಾಗಳು ಬಿಡುಗಡೆಯಾಗಿವೆ. ಎಂಟನೇ ಪುಸ್ತಕ ಮೂಲತಃ ಎರಡು ನಾಟಕಗಳ ಗುಚ್ಛವಾಗಿವೆ.