ಇನ್ನುಮುಂದೆ ನೀವೂ ಬ್ಯಾಂಕಿಗೆ ಹೋಗೋ ಅವಶ್ಯಕತೆ ಇಲ್ಲ ಬ್ಯಾಂಕೇ ನಿಮ್ಮ ಮನೆಗೆ ಬರುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ನರೇಂದ್ರ ಮೋದಿ ಜಾರಿ ಮಾಡಿದ್ದಾರೆ!!

0
748

ಬ್ಯಾಂಕಿಂಗ್ ಕ್ಷೆತ್ರದಲ್ಲಿ ಎಷ್ಟೇ ಮುಂದೆ ಹೋದರು ಒಂದು ಕೊರಗು ಮಾತ್ರ ಬಾಕಿಯಿತ್ತು ಆ ಕೊರಗನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ಮಾಡಿದ್ದಾರೆ. ಅದು ಏನ್ ಅಂದ್ರೆ ಮನೆಯಲ್ಲಿಯೇ ಕೂತುಕೊಂಡು ಬ್ಯಾಂಕಿಗೆ ಹಣ ಕಟ್ಟುವ ಮತ್ತು ಹಣ ಬಿಡಿಸಿಕೊಳ್ಳುವ ಮಹಾತ್ವಾಕಾಂಕ್ಷಿ ಯೋಜನೆ ಐಪಿಪಿಬಿ’ಯನ್ನು ನವದೆಹಲಿಯಲ್ಲಿ ನರೆಂದ್ರೆ ಮೋದಿ ಇಂದಿನಿಂದ ದೇಶಾದ್ಯಂತ ಜಾರಿ ಮಾಡಿದ್ದಾರೆ. ಇಂತಹ ಯೋಜನೆಗಳು ಬಂದ್ರೆ ಹಳ್ಳಿಯ ಮತ್ತು ನಗರ ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗುತ್ತೆ ಎಂಬ ಯೋಚನೆ ಎಲ್ಲರಲೂ ಇತ್ತು ಅದು ಚಾಲನೆಯಾಗೋದು ತುಂಬಾ ಕಷ್ಟಸಾದ್ಯವಾಗಿತು. ಈಗ ಅದೇ ಯೋಜನೆ ಬಂದಿರುವುದು ಎಲ್ಲೆಡೆ ಸಂತೋಷ್ ಮೂಡಿದೆ.

ಏನಿದು ಐಪಿಪಿಬಿ ಯೋಜನೆ..?
ಭಾರತೀಯ ಅಂಚೆ ಇಲಾಖೆ ಇದೀಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ, ಇಂದು ದೇಶದಲ್ಲಿ ಏಕಕಾಲಕ್ಕೆ 650 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗೆ ಚಾಲನೆ ನೀಡುವ ಮೂಲಕ ಅಂಚೆ ಇಲಾಖೆ ಮತ್ತೊಂದು ಹೆಜ್ಜೆಯಿಡಲಿದೆ. ಇದರಿಂದ ಐಪಿಪಿಬಿಯು ಭಾರತದ ಅತಿದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಎನಿಸಿಕೊಳ್ಳಲಿದ್ದು. ಇದು ಪ್ರಸ್ತುತ ಇರುವ ಬ್ಯಾಂಕ್‌ಗಳ ವ್ಯಾಪ್ತಿಗಿಂತಲೂ 2.5 ರಷ್ಟು ಹೆಚ್ಚಿನ ವ್ಯಾಪ್ತಿಯನ್ನು ತಲುಪುತ್ತದೆ. ಆ ಮೂಲಕ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಬ್ಯಾಂಕಿಂಗ್ ಸೇವೆಯನ್ನು ಐಪಿಪಿಬಿಯು ಕಲ್ಪಿಸುತ್ತದೆ.
ಐಪಿಪಿಬಿ ಯಿಂದ ಲಾಭವೇನು..?

ದೇಶದ ಪ್ರತಿ ವ್ಯಕ್ತಿಯೂ ಬ್ಯಾಂಕಿಂಗ್ ವ್ಯವಸ್ಥೆಯ ಲಾಭ ಪಡೆದುಕೊಳ್ಳಬೇಕೆಂಬ ಬೃಹತ್ ಆಲೋಚನೆಯೊಂದಿಗೆ ಐಪಿಪಿಬಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು ಈ ಯೋಜನೆ ಮೂಲಕ ಬ್ಯಾಂಕ್‌ ಸೇವೆಯು ಗ್ರಾಹಕನ ಮನೆ ಬಾಗಿಲಿಗೆ ಬಂದು ಸೇರಲಿದೆ. ಇದರಿಂದ ಮನೆಯಲ್ಲೇ ಕುಳಿತು ಠೇವಣಿ ಕಟ್ಟಿ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣಂದಿರ ಕೈಗೆ ಠೇವಣಿ ಹಣ ಕಟ್ಟಿ ರಶೀದಿ ಪಡೆಯಬಹುದಾಗಿದೆ. ಪೋಸ್ಟ್‌ಮನ್‌ಗಳು ತರುವ ಡಿಜಿಟಲ್ ಪ್ಯಾಡ್‌ನಲ್ಲಿ ನಿಮ್ಮ ಬೆರಳಚ್ಚು ಒತ್ತಿ ಹಣವನ್ನು ಡ್ರಾ ಮಾಡಬಹುದು. ಬೇರೆಯವರಿಗೆ ಹಣ ಕಳುಹಿಸಲು ಕೂಡಾ ಇದೇ ಮಾದರಿ ಅನುಸರಿಸಬೇಕು. ಇಲ್ಲಿ ಪೋಸ್ಟ್ ಮ್ಯಾನ್ ನಿಮ್ಮ ಬ್ಯಾಂಕ್‌ ಆಗಲಿದ್ದಾನೆ. ಇದರಿಂದ ದೇಶದ 1.5 ಲಕ್ಷ ಪೋಸ್ಟ್‌ ಆಫೀಸ್‌ಗಳು ಐಪಿಪಿಬಿ ಬ್ಯಾಂಕಿಂಗ್ ಸೇವೆಯನ್ನು ಕೊಡಲಿವೆ. ಎಲ್ಲಾ ಅಂಚೆ ಕಚೇರಿಗಳನ್ನು ಒಂದು ಸಂಪರ್ಕಕ್ಕೆ ತರಲಾಗುತ್ತದೆ. 3 ಲಕ್ಷ ಅಂಚೆಯವರು ಮತ್ತು ಗ್ರಾಮೀಣ ಡಾಕ್ ಸೇವಕ್‌ಗಳು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಮನೆಗೆ ತಲುಪಿಸಲಿದ್ದಾರೆ.

ಗ್ರಾಹಕರು ಕೇವಲ ಆಧಾರ್ ಕಾರ್ಡ್ ನಂಬರ್ ಹೊಂದಿದ್ದರೆ ಸಾಕು ಪೊಸ್ಟ್ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಬಹುದು. ಖಾತೆ ತೆರೆಯುವುದು ಸಹಿತ ಅತೀ ಸುಲಭವಾಗಿದೆ. ಪಾಸ್ ಬುಕ್ ಬದಲಿಗೆ ಕ್ಯೂಆರ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಡ್ ಮೂಲಕ ಬ್ಯಾಂಕ್ ಸೇವೆ ಪಡೆಯಬಹುದಾದ ಸೇವೆಗಳು ಮೊಬೈಲ್ ಬ್ಯಾಂಕಿಂಗ್, ಆರ್ಟಿಜಿಎಸ್, ಸೇರಿದಂತೆ ಆನ್ ಲೈನ್ ಶಾಪಿಂಗ್, ಎಲೆಕ್ಟ್ರಿಕಲ್ ಬಿಲ್ ಪಾವತಿ ಹಾಗೂ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ ಕ್ಯೂ ಆರ್ ಕಾರ್ಡಿನಲ್ಲಿ 1 ಲಕ್ಷ ರೂಪಾಯಿ ಮಾತ್ರ ಅಂತಿಮ ಬ್ಯಾಲೆನ್ಸ್ ಇರಬೇಕು. ಬೆಳಗ್ಗೆ ಲಕ್ಷಾಂತರ ಹಣ ವಹಿವಾಟು ಮಾಡಿದರೆ ಸಾಯಂಕಾಲ ಬ್ಯಾಂಕ್ ವ್ಯವಹಾರ ಸಮಯ ಮುಗಿಯುವ ವೇಳೆ 1 ಲಕ್ಷ ಕ್ಲೋಸಿಂಗ್ ಬ್ಯಾಲೆನ್ಸ್ ಇರಬೇಕು.
ಒಟ್ಟಾರೆಯಾಗಿ ಇನ್ನು ಮುಂದೆ ಕ್ಯಾಸ್ ಲೆಸ್ ವಹಿವಾಟಿಗೆ ಅಂಚೆ ಇಲಾಖೆಯೂ ಸೇರ್ಪಡೆಯಾಗಲಿದೆ. ಮತ್ತು ಕಾಗದ ರಹಿತ ಬ್ಯಾಂಕ್ ಸೇವೆ ನೀಡಲು ಅಂಚೆ ಇಲಾಖೆ ಮುಂದಾಗಿದೆ.