ವ್ಯಕ್ತಿ ಸತ್ತನೆಂದು ಅಂತ್ಯಸಂಸ್ಕಾರ ಮಾಡಿ ತಿಥಿ ನಡೆದು ಎರಡು ದಿನದ ನಂತರ ಮನೆಗೆ ಮರಳಿದ ವ್ಯಕ್ತಿ!!

0
448

ಸಮಾಜದಲ್ಲಿ ವ್ಯಕ್ತಿ ಸತ್ತನೆಂದು ತಿಳಿದರೆ ಸಾಕು ಅದು ಹೆಣವೆಂದು ಭಾವಿಸುವ ಜನರು ದೂರದಿಂದಲೇ ನೋಡುತ್ತಾರೆ. ಇದ್ದಾಗ ಮಾತ್ರ ವ್ಯಕ್ತಿಯನ್ನು ಹತ್ತಿರದಿಂದ ನೋಡುವ ಜನರು ಸತ್ತಾಗ ಮಾತ್ರ ಸ್ವಲ್ಪ ಭಯದಲ್ಲಿರುತ್ತಾರೆ. ಅದ್ಯಾಕೋ ಗೊತ್ತಿಲ್ಲ ಜನರಲ್ಲಿ ಭಯ ಎನ್ನುವುದು ಇರುತ್ತದೆ. ಒಂದು ವೇಳೆ ಸತ್ತ ವ್ಯಕ್ತಿ ಸ್ವಲ್ಪ ಮಿಸಿಗಿದರು ಜನರ ಎದ್ದೆ ಬಡಿತ ಹೆಚ್ಚಾಗುತ್ತೆ, ಇಂತಹ ಸೀನ್ -ಗಳನ್ನು ಕೆಲವು ಸಿನಿಮಾಗಳಲ್ಲಿ ತೋರಿಸಿದ್ದಾರೆ. ಒಂದು ವೇಳೆ ನೀಜ ಜೀವನದಲ್ಲಿ ಸತ್ತ ವ್ಯಕ್ತಿ ಮೇಲೆದ್ದರೆ ಅಥವಾ ಅತ್ಯಸಂಸ್ಕಾರವಾದ ಕೆಲವು ದಿನಗಳ ನಂತರ ಯಾರಾದರು ಕಣ್ಣಿಗೆ ಕಾಣಿಸಿಕೊಂಡರೆ ಹೇಗಿರುತ್ತೆ ಎನ್ನುವುದು ಉಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇಂತಹದೆ ಘಟನೆ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದಿದ್ದು ಇಡಿ ರಾಜ್ಯದ ತುಂಬೆಲ್ಲ ವೈರಲ್ ಆಗಿದೆ.

Also read: ವಿಶ್ವದ ವಿಚಿತ್ರ ಹೋಟೆಲ್; ಇಲ್ಲಿ ಕುಡಿಯಲು, ಊಟ ಮಾಡಲು ಹೋಗಬೇಕು ಅಂದರೆ ಬೆತ್ತಲಾಗಿ ಹೋಗಬೇಕು..

ಏನಿದು ಸತ್ತ ವ್ಯಕ್ತಿಯ ಸುದ್ದಿ?

ಹೌದು ಹಾಸನದಲ್ಲಿ ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲ್ಲೂಕು ಶಂಖ ಗ್ರಾಮದಲ್ಲಿ ನಡೆದಿದ್ದು. ಆತ ಸತ್ತು ಹೋಗಿದ್ದಾನೆ ಅಂದುಕೊಂಡ ಮನೆಯವರು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಪತ್ನಿ ಕಳೆದುಕೊಂಡ ಪತಿಯನ್ನು ನೆನೆದು ಕಣ್ಣೀರಿಡುತ್ತಲೇ ಇದ್ದರು. ಹೀಗಿರುವಾಗಲೇ ಅಂತ್ಯಸಂಸ್ಕಾರ ನಡೆದ ಮೂರನೇ ದಿನಕ್ಕೆ ಮೃತಪಟ್ಟ ವ್ಯಕ್ತಿಯೇ ಮನೆಗೆ ಮರಳಿ ಅಚ್ಚರಿ ಹಾಗೂ ಶಾಕ್​ ನೀಡಿದ್ದಾನೆ.

ಸತ್ತ ವ್ಯಕ್ತಿ ಬದುಕಿದ್ದು ಹೇಗೆ?

ಹಾಸನ ಜಿಲ್ಲೆಯ ಶಂಖ ಗ್ರಾಮದ ನಿವಾಸಿಯಾದ ಶಿವಣ್ಣ ಎಂಬುವರು ಮನೆಯಲ್ಲಿ ಯಾವುದೋ ಕಾರಣಕ್ಕೆ ಮಡದಿಯ ಜೊತೆಗೆ ಜಗಳವಾಡಿ, ಬೇಸರದಿಂದ ಮನೆಯ ಬಿಟ್ಟು 15 ದಿನಗಳು ಮರಳಿ ಬಂದಿರಲಿಲ್ಲ, 15 ದಿನಗಳು ಕಳೆದರೂ ಶಿವಣ್ಣ ಮನೆಗೆ ಬರದೇ ಇರುವುದರಿಂದ ಆತಂಕಕ್ಕೆ ಒಳಗಾದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ಇವರು ದೂರು ನೀಡಿ ಎರಡು ದಿನಗಳಲ್ಲಿ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಪೊಲೀಸರು ಇವರ ಮಾಹಿತಿ ತಿಳಿಸಿದರು ಮೇಲ್ನೋಟಕ್ಕೆ ಆ ದೇಹ ಶಿವಣ್ಣನನ್ನೇ ಹೋಲುತಿತ್ತು. ಹೀಗಾಗಿ ಕುಟುಂಬಸ್ಥರು ಆತನನ್ನೇ ಶಿವಣ್ಣ ಎಂದುಕೊಂಡು ಅಂತ್ಯಸಂಸ್ಕಾರ ಮಾಡಿದ್ದಾರೆ.

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂತಿರುಗಿದ್ದಾರೆ. ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿದೆ. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಿವಣ್ಣ ಮನೆಬಿಟ್ಟು ಹೋದ ನಂತರ ತುಮಕೂರಿಗೆ ಹೋಗಿ ಅಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಬೆಂಗಳೂರಿನಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ತಮ್ಮನನ್ನು ನೋಡಿದ ಅಕ್ಕ ನಡೆದಿರುವ ಎಲ್ಲಾ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಶಿವಣ್ಣ ಕುಟುಂಬ ಸೇರಿಕೊಂಡಿದ್ದಾರೆ.