ಶಂಕರಾಚಾರ್ಯರ ನೇರ ಶಿಷ್ಯರಾದ ಶ್ರೀ ಹಸ್ತಾಮಲಕಾಚಾರ್ಯರರ ಬಗ್ಗೆ ತಿಳಿಯಿರಿ

0
1071

ಅದ್ವೈತ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರಿಗೆ ನಾಲ್ಕುಜನ ನೇರ ಶಿಷ್ಯರು ಇದ್ದರು. ಅವರೆಂದರೆ ಪದ್ಮಪಾದರು, ತೋಟಕಾಚಾರ್ಯರು, ಸುರೇಶ್ವರಾಚಾರ್ಯರು, ಹಸ್ತಾಮಲ ಕಾಚಾರ್ಯರು. ಈ ನಾಲ್ಕು ಜನ ಶಿಷ್ಯರಲ್ಲಿ ಹಸ್ತಾಮಲಕಾಚಾರ್ಯರು ಅಧ್ಯಾತ್ಮ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದರು. ಧಾರ್ಮಿಕ, ಬ್ರಾಹ್ಮಣ ಶಾಸ್ತ್ರಜ್ಞನೂ ಆಗಿದ್ದ ಪ್ರಭಾಕರ ಎಂಬುವವರಿಗೆ ಜಡ, ಮೂಗ ಮಗನಿದ್ದನು. ಆತನನ್ನು ಬಿಟ್ಟು ಆ ದಂಪತಿಗೆ ಬೇರೆ ಸಂತಾನವಿರಲಿಲ್ಲ.

ಒಬ್ಬನೇ ಮಗನ ಈ ದುಃಸ್ಥಿತಿಯನ್ನು ಕಂಡು ಮನದಲ್ಲಿಯೇ ಮರುಗುತ್ತಿದ್ದನು. ಹೀಗಿರುವಾಗ ಶ್ರೀ ಶಂಕರಾಚಾರ್ಯರು ಸಂಚಾರ ಮಾಡುತ್ತ ತಮ್ಮ ಊರಿಗೆ ಬರುತ್ತಾರೆ ಎಂದು ಪ್ರಭಾಕರ ದಂಪತಿಗೆ ಅವರಿವರಿಂದ ತಿಳಿಯಿತು. ಅವರು ಮಹಾಮಹಿಮರು, ನಿಮ್ಮ ಮಗನನ್ನು ಅವರ ಕಣ್ಣಿಗೆ ಹಾಕು ಎಂದು ಒಬ್ಬರು ಪ್ರಭಾಕರನಿಗೆ ತಿಳಿಸಿದರು.

ಅದರಂತೆ ಪುತ್ರನನ್ನು ಕರೆದುಕೊಂಡು ಶಂಕರಾಚಾರ್ಯರು ಇದ್ದಲ್ಲಿಗೆ ಬಂದು ಮಗನ ದುಃಸ್ಥಿತಿ ವಿವರಿಸಿ ಆತನ ಜಡತ್ವ, ಮೂಕತ್ವವನ್ನು ನಿವಾರಿಸಬೇಕು ಎಂದು ಪ್ರಾರ್ಥಿಸಿದರು. ಆಗ ಶಂಕರಾಚಾರ್ಯರು ಬಾಲಕನನ್ನು ಕುರಿತು ಎಲೈ ಶಿಶುವೇ, ನೀನು ಯಾರು, ಯಾರ ಮಗ? ಎಲ್ಲಿಗೆ ಹೋಗುತ್ತಿರುವೆ? ನಿನ್ನ ಹೆಸರೇನು? ಎಲ್ಲಿಂದ ಬಂದೆ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡು ಹಾಗೂ ನಿನ್ನನ್ನು ನೋಡಿದರೆ ನನಗೆ ಸಂತೋಷವಾಗುತ್ತಿದೆ ಎಂದರು.

ಶ್ರೀ ಶಂಕರಾಚಾರ್ಯರ ದರ್ಶನ ಭಾಗ್ಯದಿಂದಲೋ ಅವರ ಮಾತಿನ ಪ್ರಭಾವದಿಂದಲೋ ಆ ಜಡ ಬಾಲಕನು ಕೂಡಲೇ ತನ್ನ ಮಧುರ ಕಂಠದಿಂದ ನಾಹಂ ಮನುಷ್ಯೋ, ನ ಚ ದೇವ ಯಕ್ಷೋ, ನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಾಃ ನ ಬ್ರಹ್ಮಚಾರೀ, ನ ಗೃಹೀ ವನಸ್ಯೋ ಭಿಕ್ಷುರ್ನ ಚಾಹಂ ನಿಜ ಬೋದ ರೂಪಃ ಎಂದು ಉತ್ತರಿಸಿದನು. ಜನನ ಕಾಲದಿಂದಲೂ ಮಾತೇ ಆಡದಿದ್ದ ಆ ಮಗ ಶ್ಲೋಕ ರೀತಿಯಲ್ಲಿ ಉತ್ತರ ನೀಡಿದ್ದು ಅದಕ್ಕಾಗಿ ಸಂಸ್ಕøತ ಭಾಷೆಯನ್ನು ಬಳಸಿದ್ದು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ಶ್ರಿ ಆಚಾರ್ಯರಿಗೂ ಅಚ್ಚರಿಯಾಯಿತು. ಆಚಾರ್ಯರು ತಮ್ಮ ಶಿಷ್ಯರನ್ನು ಕುರಿತು ಈ ಬಾಲಕನು ನೀವೆಲ್ಲಾ ತಿಳಿದಿರುವಂತೆ ಸಾಧಾರಣನಲ್ಲ.

ಆತ್ಮಜ್ಞಾನ ಪಡೆದಿರುವ ಬ್ರಹ್ಮಜ್ಞಾನಿ ಪುರುಷ. ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಈ ಬಾಲಕನು ಆತ್ಮಜ್ಞಾನವನ್ನು ಪಡೆದಿರುವನು. (ಈ ಸ್ತೋತ್ರವು ಹಸ್ತಾಮಲಕ ಸ್ತೋತ್ರ ಎಂದು ಪ್ರಸಿದ್ಧಿಯಾಗಿದೆ)ಶ್ರೀ ಶಂಕರರು ಆ ದಂಪತಿಯನ್ನು ಕುರಿತು ಇನ್ನು ಈ ಬಾಲಕ ಮನೆಯಲ್ಲಿ ಇರುವುದು ಯೋಗ್ಯವಲ್ಲ. ಪೂರ್ವಜನ್ಮದ ಫಲದಿಂದ ಈತನು ಬ್ರಹ್ಮಜ್ಞಾನವನ್ನು ಪಡೆದಿರುವನು. ಕೇವಲ ತನ್ನ ಪ್ರಾರಬ್ಧವನ್ನು ಕಳೆದುಕೊಳ್ಳಲು ಈ ಶರೀರವನ್ನ ಪಡೆದಿರುವನು. ಸಾಂಸಾರಿಕ ಸಂಬಂಧಗಳು ಇವನಿಗೆ ಉಂಟಾಗದು. ಈತ ಚಿದಾನಂದÀ ಸ್ವರೂಪ ಎಂದು ಈತನಿಗೆ ತಿಳಿದಿದೆ.

ಆದ್ದರಿಂದ ಈತನನ್ನು ನನ್ನ ಬಳಿ ಬಿಡಿ ಎಂದರು. ಶಂಕರರ ಮಾತಿಗೆ ಒಪ್ಪಿ ಬಾಲಕನನ್ನು ಗುರುವಿಗೆ ಒಪ್ಪಿಸಿದರು.ಹಸ್ತಾಮಲಕಾಚಾರ್ಯರ ಪೂರ್ವ ವೃತ್ತಾಂತಶ್ರೀ ಶಂಕರಾಚಾರ್ಯರು ಈ ಬಾಲಕನ ಹೋದ ಜನ್ಮದ ವೃತ್ತಾಂತವನ್ನು ತಂದೆ-ತಾಯಿಗೆ ಈ ರೀತಿ ತಿಳಿಸಿದರು.  ಅನ್ಯಮಾರ್ಗವಿಲ್ಲದೆ ಮಗನನ್ನ ಶ್ರೀ ಶಂಕರರ ಬಳಿ ಬಿಟ್ಟು ಮನೆಗೆ ತೆರಳಿದರು. ಹಲವು ದಿನಗಳ ನಂತರ ಶ್ರೀ ಶಂಕರಾಚಾರ್ಯರು ಆ ಬಾಲಕನಿಗೆ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ಕೊಟ್ಟು `ಹಸ್ತಾಮಲಕಾಚಾರ್ಯ’ ಎಂದು ನಾಮಕರಣ ಮಾಡಿದರು. ಬಾಲಕನ ಜಡತ್ವ ಹೋಗಿ ಮುಖದಲ್ಲಿ ಬ್ರಹ್ಮಜ್ಞಾನಿಯ ಕಳೆ ಬಂದಿತು.

ನಂತರ ಆತ್ಮಜ್ಞಾನದ ಮಾತುಗಳೇ ಬರಲು ಪ್ರಾರಂಭಿಸಿತು. ಕಾಲಾಂತರದಲ್ಲಿ ಶ್ರೀ ಶಂಕರಾಚಾರ್ಯರ ಶಿಷ್ಯರಲ್ಲಿ ಅದರಲ್ಲೂ ಪ್ರಧಾನ ಶಿಷ್ಯರಲ್ಲಿ ಹಸ್ತಾಮಲಕಾ ಅತಿ ಶ್ರೇಷ್ಠರೆನಿಸಿಕೊಂಡರು. ಅವರ ಬಾಯಿಂದ ಬಂದ ಮಾತುಗಳು `ಹಸ್ತಾಮಲಕಾ ಸ್ತೋತ್ರ’ ಎಂದು ಪ್ರಸಿದ್ಧಿಯಾಗಿದೆ.ಶ್ರೀ ಶಂಕರಾಚಾರ್ಯರು ತಮ್ಮ ನೇರ ಹಾಗೂ ಪ್ರಧಾನ ಶಿಷ್ಯರಾದ ಹಸ್ತಾಮಲಕಾಚಾರ್ಯರನ್ನು ಬದರಿಯಲ್ಲಿರುವ ಜ್ಯೋತಿರ್ ಪೀಠಕ್ಕೆ ಪ್ರಧಾನ ಪೀಠಾಧಿಪತಿಯನ್ನಾಗಿ ಮಾಡಿದರು. ಈಗಲೂ ಪೀಠಾಧಿಪತಿಗಳ ಪರಂಪರೆ ನಡೆದುಕೊಂಡು ಬರುತ್ತಿದೆ.