ಸಾಮೂಹಿಕ ಅತ್ಯಾಚಾರ ನಡೆಸಿ ನಾಲಿಗೆ ಕತ್ತರಿಸಿ ಚಿತ್ರಹಿಂಸೆ ಅನುಭವಿಸಿದ್ದ ಯುವತಿ ಸಾವು!!!

0
154

ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿರುವ ಉತ್ತರಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ದಲಿತ ಯುವತಿ ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಸೆಪ್ಟೆಂಬರ್ 14ರಂದು 20 ವರ್ಷದ ಹತ್ರಾಸ್ ಗ್ರಾಮದ ಯುವತಿ ಮೇಲೆ ನಾಲ್ವರು ದುರುಳರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಯುವತಿ, ಆಕೆಯ ತಾಯಿ ಮತ್ತು ಸಹೋದರ ಹುಲ್ಲು ತರಲೆಂದು ಹೊಲಕ್ಕೆ ಹೋಗಿದ್ದರು. ತನ್ನ ಮನೆಯವರಿಂದ ಸ್ವಲ್ಪ ದೂರದಲ್ಲಿ ಹುಲ್ಲು ಕತ್ತರಿಸುತ್ತಿದ್ದನ್ನು ಗಮನಿಸಿದ ಕಾಮುಕರು ಆಕೆಯ ಕುತ್ತಿಗೆ ಸಲ್ವಾರ್ ಬಿಗಿದುದೂರ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದರು. ಅಲ್ಲದೇ ಆಕೆಗೆ ಮಾರಣಾಂತಿಕ ಹಲ್ಲೆ ನಡೆಸಿ ನಾಲಿಗೆಯನ್ನು ತುಂಡರಿಸಿದ್ದರು. ತನ್ನ ತಂಗಿ ಕಾಣದಿದ್ದಾಗ ಹುಡುಕಾಡಿದ್ದ ಮನೆಯವರಿಗೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಳಿಕ ಯುವತಿಯನ್ನು ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ನಂತರ ಆಕೆಯನ್ನು ದೆಹಲಿಗೆ ಸ್ಥಳಾಂತರಿಸಲಾಗಿತ್ತು.

ಕಳೆದ ಹದಿನೈದು ದಿನಗಳಿಂದ ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಂತ್ರಸ್ತೆ ದಲಿತ ಯುವತಿಯನ್ನು ಅದೇ ಊರಿನ ಮೇಲ್ಜಾತಿಯ ನಾಲ್ವರು ಕಾಮುಕರು ಗ್ಯಾಂಗ್‌ ರೇಪ್ ನಡೆಸಿದ್ದರು. ಆರಂಭದಲ್ಲಿ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದ ಪೊಲೀಸರು ಸಾರ್ವಜನಿಕರ ಆಕ್ರೋಶದ ನಂತರ ನಾಲ್ಕೈದು ದಿನದ ಮೇಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು ಎಂದು ಯುವತಿಯ ತಾಯಿ ಆರೋಪಿಸಿದ್ದರು. ಸದ್ಯ ನಾಲ್ವರು ಕಾಮುಕರು ಜೈಲಿನಲ್ಲಿದ್ದಾರೆ.

ಯುವತಿ ಹಿಂದುಳಿದ ಜಾತಿಗೆ ಸೇರಿದ್ದು, ಅತ್ಯಾಚಾರ ಎಸಗಿದ ಆರೋಪಿಗಳು ಮೇಲ್ವರ್ಗಕ್ಕೆ ಸೇರಿದವರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕುಟುಂಬ ಸದಸ್ಯರಿಂದ ಈಕೆ ತುಂಬಾ ದೂರದಲ್ಲಿ ಇದ್ದಿದ್ದರಿಂದ ಅವರ ಗಮನಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಪೈಶಾಚಿಕ ಅತ್ಯಾಚಾರ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಉತ್ತರಪ್ರದೇಶ ಪೊಲೀಸರು ಆರಂಭದಲ್ಲಿ ತಮಗೆ ಯಾವುದೇ ನೆರವು ನೀಡಲಿಲ್ಲ ಎಂದು ಆರೋಪಿಸಿರುವ ಯುವತಿಯ ಕುಟುಂಬಸ್ಥರು, ನಂತರ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

Also read: ಹಣ ಒಡವೆಗಾಗಿ ಯುವತಿಯ ರುಂಡವನ್ನೇ ಕತ್ತರಿಸಿದ್ದ ಈ ನಕಲಿ ಪ್ರಿಯಕರನ ಬಗ್ಗೆ ಓದಿದ್ರೆ ಶಾಕ್ ಆಗ್ತೀರಾ!!