“ಹಟ್ಟಿ ಕಾಪಿ”ಯ ಸಂಸ್ಥಾಪಕ ಮಹೇಂದರ್-ರವರ ಬಗ್ಗೆ ಓದಿ, ನಿಮಗೂ ಸ್ವಂತ ಉದ್ದಿಮೆ ಶುರು ಮಾಡಬೇಕು ಅಂತ ಅನ್ಸುತ್ತೆ…!

0
1988

ಹಾಸನ ಮೂಲದ ಯು.ಎಸ್‌.ಮಹೇಂದರ್‌ ಅವರ ಹಟ್ಟಿ ಕಾಪಿಯ ಮಳಿಗೆಯಲ್ಲಿ ನಿತ್ಯ ಸಾವಿರಾರು ಗ್ರಾಹಕರು ಭಾರತೀಯ ಶೈಲಿಯ ಕಾಫಿಯ ಸ್ವಾದವನ್ನು ಸವಿಯುತ್ತಾರೆ. ಮಹತ್ವಾಕಾಂಕ್ಷಿ ಉದ್ಯಮಿಯಾಗಿ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಸರಣಿಯಾದ ಹಟ್ಟಿ ಕಾಪಿಯ ಸಂಸ್ಥಾಪಕ ಯು.ಎಸ್. ಮಹೇಂದರ್ ಅವರು ತಮ್ಮ ಇಪ್ಪತ್ತೆರಡನೆ ವಯಸ್ಸಿನಲ್ಲಿ ಓದಿಗೆ ತಿಲಾಂಜಲಿ ನೀಡಿ ಕಾಫಿ ವಹಿವಾಟಿಗೆ ಕಾಲಿಟ್ಟು, ಎರಡು ದಶಕಗಳಿಂದ ಅನೇಕ ಏರಿಳಿತಗಳನ್ನು ಎದುರಿಸಿ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಸರಣಿಯಾದ ‘ಹಟ್ಟಿ ಕಾಪಿ’ ಬ್ರ್ಯಾಂಡ್‌ನ್ನು ಸಂಸ್ಥಾಪಿಸಿ ಈ ಉದ್ಯಮದಲ್ಲಿ ಯಶಸ್ವಿಯನ್ನು ಕಂಡುಕೊಂಡಿದ್ದಾರೆ. ಇವರ ಈ ಸಾಧನೆಯು ನಮ್ಮ ನಿಮ್ಮೆಲ್ಲರಿಗೆ ಪ್ರೇರಣೆಯಾಗುವಂಥದ್ದು.

source: teacoffeespiceofindia.com

ಹಾಸನದಲ್ಲಿ ಕಾಫಿ ಬೆಳೆಗಾರ ಕುಟುಂಬಕ್ಕೆ ಸೇರಿದ ಮಹೇಂದರ್‌ ಅವರು ಅಲ್ಲೇ ಬಿಎಸ್‌ಸಿ ಎಲೆಕ್ಟ್ರಾನಿಕ್ಸ್‌ ಓದನ್ನು 2ನೆ ವರ್ಷದಲ್ಲಿಯೇ ನಿಲ್ಲಿಸಿ ಕಾಫಿ ವ್ಯಾಪಾರಕ್ಕೆ ಇಳಿದಿದ್ದರು. ಅಪ್ಪ ಓದಲು ಒತ್ತಾಯಿಸಿದ್ದರೂ ಅದನ್ನು ಕಿವಿಗೊಡದೆ ಕಾಫಿ ವಹಿವಾಟಿನಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಿಸಲು ಕಾಪೀ ವ್ಯಾಪಾರವನ್ನು ಶುರುಮಾಡಿದರು. ಮೊದಲಿಗೆ ಎಸ್ಟೇಟ್‌ಗಳಿಂದ ಕಾಫಿ ಸಂಗ್ರಹಿಸಿ ಬೆಂಗಳೂರಿನ ರಫ್ತುದಾರರಿಗೆ ಮಾರಾಟ ಮಾಡಲು ಶುರುಮಾಡಿದರು. ಇವರ ಈ ವ್ಯಾಪಾರದಲ್ಲಿ ಅವರ ಮನೆಯ ಪಕ್ಕದಲ್ಲಿಯೇ ಇದ್ದ ನಿರುದ್ಯೋಗಿ ಮಹಾಲಿಂಗೇಗೌಡ ಅವರನ್ನು ಜತೆ ಮಾಡಿಕೊಂಡು ಕಾಫಿ ಟ್ರೇಡಿಂಗ್‌ ಶುರು ಮಾಡಿಯೇಬಿಟ್ಟರು. ಹಾಸನದಲ್ಲಿನ ವ್ಯಾಪಾರ ಅಂದುಕೊಂಡಷ್ಟು ಚೆನ್ನಾಗಿರಲಿಲ್ಲ, ಬೆಂಗಳೂರಿಗೆ ಬಂದರೆ ಹೆಚ್ಚು ಲಾಭ ಗಳಿಸಬಹುದೆಂದು ಬೆಂಗಳೂರಿಗೆ ಬಂದರು.

source: theweekendleader.com

2001ರಲ್ಲಿ ಬೆಂಗಳೂರಿಗೆ ಬಂದಾಗ ಅವರ ಹತ್ತಿರ ಬೈಕ್‌ಗೆ ಪೆಟ್ರೋಲ್‌ಗೂ ದುಡ್ಡಿಲ್ಲದೆ ಬರಿ ಉದ್ದಿಮೆದಾರನಾಗುವ ಕನಸುಗಳನ್ನು ತುಂಬಿಕೊಂಡು ಎಂ.ಜಿ ರಸ್ತೆಯ ಉದ್ದಕ್ಕೂ ತಿರುಗಾಡುತ್ತಿದ್ದರು. ಅಷ್ಟಾದರೂ ದೃತಿ ಗೆಡದೆ ಬಂಢ ದೈರ್ಯದಿಂದ ಹೊಸ ಆರಂಭವನ್ನು ಮಾಡಲು ನಿರ್ಧರಿಸಿದರು. ಇದಕ್ಕೆ ಬೆಂಗಳೂರಿನಲ್ಲಿದ್ದ ಕಾಫಿ ಉದ್ದಮಿ ಸ್ನೇಹಿತ ಶ್ರೀಕಾಂತ್‌ ಪ್ರೋತ್ಸಾಹಿಸಿ ಅವರು ನಡೆಸುತ್ತಿದ್ದ ಟಾಟಾ ಕಾಫಿ ಪೂರೈಸುವ ಸಣ್ಣ ಕಾರ್ಖಾನೆಯನ್ನು ಅವರಿಗೆ ವಹಿಸಿ ತಾವು ಮೈಸೂರಿಗೆ ತೆರಳಿದರು. ಇಲ್ಲಿಂದ ಶುರುವಾಯಿತು ಮಹೇಂದರ್‌ ರವರ ಸಂಕಷ್ಟದ ದಿನಗಳು. ಎರಡೂವರೆ ವರ್ಷ ತುಂಬ ಕಷ್ಟಪಟ್ಟರು. ದೊಡ್ಡ, ದೊಡ್ಡ ಹೋಟೆಲ್‌ಗಳಿಗೆ ಕಾಫಿ ಪೂರೈಸಲು ಮುಂದಾದರೆ ಸಕಾಲಕ್ಕೆ ಹಣ ದೊರೆಯುತ್ತಿರಲಿಲ್ಲ. ಒಂದೊಮ್ಮೆ ಹೀಗೆ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಕಾಫಿ ಪೂರೈಸಲು ಅವಕಾಶ ಮಾಡಿಕೊಟ್ಟ ಮಾಲೀಕರೊಬ್ಬರು, “ನಿಮ್ಮ ಕಾಫಿ ರುಚಿಯಾಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.” ಇದನ್ನು ಕೇಳಿ ಅವರು ಮಾರಾಟದ ಬಗ್ಗೆ ತೆಲೆಕೆಡಿಸಿಕೊಳ್ಳದೆ ಗುಣಮಟ್ಟದ ಕಾಫಿ ಮಾಡಬೇಕು ಎಂದು ನಿರ್ಧರಿಸಿದರು. ಆಗ ಹುಟ್ಟಿದ್ದೇ “ಹಟ್ಟಿ ಕಾಪಿ”.

source: thehindubusinessline.com

ರೀಟೇಲ್‌ ಮಳಿಗೆ ಮೂಲಕ ಕಾಫಿ ಮಾರಾಟ ಮಾಡಬೇಕು ಎನ್ನುವ ಆಸೆ ಅವರಲ್ಲಿ ಚಿಗುರೊಡೆಯಿತು. ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸುವ ಹಟ್ಟಿ ಕಾಪಿ ಮಳಿಗೆ 2009ರ ನವೆಂಬರ್‌ 29ರಂದು ಗಾಂಧಿ ಬಜಾರ್‌ನಲ್ಲಿ 30 ಚದರ ಅಡಿಯಯಲ್ಲಿ ಫಿಲ್ಟರ್‌ ಕಾಪಿ ಮಳಿಗೆ ತೆರೆಯಲಾಯಿತು. ಆ ದಿನಗಳಲ್ಲಿ ದಿನಕ್ಕೆ 300 ಕಾಪಿ ಮಾರಾಟ ವಾಗುತ್ತಿತ್ತು. ಗ್ರಾಹಕರಿಗೆ ತುಂಬ ಮೆಚ್ಚಿಗೆಯಾಗಿ ‘ಹಟ್ಟಿ ಕಾಪಿ’ ಭಾರಿ ಜನಪ್ರಿಯತೆ ಕೂಡ ಪಡೆಯಿತು.

source: i0.wp.com

ಮಹೇಂದರ್‌ ಅವರೂ ಮಳಿಗೆಗೆ ಭೇಟಿ ನೀಡಿದಾಗ ಮಾರಾಟದ ಬಗ್ಗೆ ಗಮನ ನೀಡದೆ ಗುಣಮಟ್ಟ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ವಿಲಾಸಿ ಕಾರುಗಳಲ್ಲಿ ಓಡಾಡುವವರೂ ಹಟ್ಟಿ ಕಾಪಿ ಹುಡುಕಿಕೊಂಡು ಬರುತ್ತಾರೆ ಎಂದು ಅವರ ನಂಬಿಕೆಯಾಗಿತ್ತು. ಅದು ನಿಜ ಕೂಡ ಆಯಿತು.

ಇವರಲ್ಲಿರುವ ಅತಿ ಮೆಚ್ಚುಗೆಯ ಪಾತ್ರ ಏನೆಂದರೆ ಹಟ್ಟಿ ಕಾಪಿ ಮಳಿಗೆಗಳಲ್ಲಿ ಹಿರಿಯ ನಾಗರೀಕರು ಮತ್ತು ಅಂಗವಿಕಲರಿಗೂ ಕೆಲಸ ಕೊಟ್ಟಿರುವುದು ಇವರ ಇನ್ನೊಂದು ಹೆಗ್ಗಳಿಕೆಯಾಗಿದೆ. ‘ಹಿರಿಯ ನಾಗರೀಕರಲ್ಲಿನ ಪ್ರಾಮಾಣಿಕತೆ, ಕೆಲಸದ ಶ್ರದ್ಧೆ ಇತರರಿಗೆ ಮಾದರಿಯಾಗಬೇಕು. ಅವರಿಂದ ಕಲಿಯುವುದು ತುಂಬಾ ಇದೆ ಎನ್ನುತ್ತಾರೆ ಅವರು.

source: theweekendleader.com

ಇವರ ಸಾಧನೆಗೆ 2014ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದಿಂದ (ಸಿಐಐ) ಉದಯೋನ್ಮುಖ ಉದ್ಯಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಮತ್ತು ಹೈದರಾಬಾದಿನಲ್ಲಿರುವ 46 ಮಳಿಗೆಗಳಲ್ಲಿ ದಿನಕ್ಕೆ 40,000 ಕ್ಕೂ ಹೆಚ್ಚು ಕಾಫಿ ಕಪ್ ಳನ್ನು ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ, ಇನ್ಫೋಸಿಸ್‌, ವಿಪ್ರೊ, ಸಿಸ್ಕೊ, ಡೆಲಾಯಿಟ್‌ ಮುಂತಾದ ಐಟಿ ತಂತ್ರಜ್ಞಾನ ಕಂಪನಿಗಳ ಕ್ಯಾಂಪಸ್‌ಗಳಲ್ಲೂ ಟೆಕ್ಕಿಗಳು ಹಟ್ಟಿ ಕಾಫಿ ಮಳಿಗೆಗಳಿವೆ. ‘ಹಟ್ಟಿ ಕಾಪಿಗೆ ಅತಿ ಹೆಚ್ಚು ಆದಾಯ ಐಟಿ ಕಂಪನಿಗಳಿಂದಲೇ ಬರುತ್ತಿದೆ. ವಾರ್ಷಿಕ 12 ಕೋಟಿ ರೂ. ವಹಿವಾಟು ಐಟಿ ಕಂಪನಿಗಳಲ್ಲಿ ಕಾಫಿ ಮಾರಾಟದಿಂದ ದೊರೆಯುತ್ತಿದೆ.

source: teacoffeespiceofindia

ಇವರ ಸಾಧನೆಗೆ ಮಹೇಂದರ್ ಅವರ ತಾಯಿ ರಜನಿ ಸುಧಾಕರ್ ಅವರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರ ಧರ್ಮಪತ್ನಿ ಸ್ಮಿತಾ ಕುಟುಂಬಕ್ಕೆ ಬೆಂಬಲನೀಡುವ ಒಂದು ಕಂಬವಾಗಿದ್ದರೆ. ಮಹೇಂದರ್ ಅವರ ಇಬ್ಬರು ಮಕ್ಕಳು ಕೂಡ ಅವರ ಸಾಧನೆಗೆ ಬೆನ್ನೆಲುಬು ಆಗಿದ್ದರೆ. ಗುಣಮಟ್ಟಕ್ಕೆ ಮೊದಲ ಆದ್ಯತೆ ಕೊಟ್ಟಿರುವುದೇ ಈ ಯಶಸ್ಸಿಗೆ ಕಾರಣ ಎನ್ನುತ್ತಾರೆ ಮಹೇಂದರ್‌. ಶ್ರೀಲಂಕಾ, ದುಬೈ ಮುಂತಾದ ಕಡೆಗಳಲ್ಲಿ ಕೂಡ ಮಳಿಗೆಗಳನ್ನು ತೆರೆಯಲು ಹಟ್ಟಿ ಕಾಪಿ ಸಿದ್ಧತೆ ನಡೆಸುತ್ತಿದೆ.