ಐತಿಹಾಸಿಕ ಮೈಲಾರ ಲಿಂಗೇಶ್ವರ ಭವಿಷ್ಯ; ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕಾರ್ಣಿಕ, ಪ್ರಧಾನಿ ನರೇಂದ್ರ ಮೋದಿ ಕಂಠಕ??

0
429

ರಾಜ್ಯದಲ್ಲಿ ಐತಿಹಾಸಿಕವಾಗಿ ನಡೆದುಕೊಂಡ ಬಂದ ಮೈಲಾರ ಲಿಂಗೇಶ್ವರ ಭವಿಷ್ಯ ಎಂದು ಸುಳ್ಳಾಗಿಲ್ಲ ಎನ್ನುವ ನಂಬಿಕೆ ಇದೆ. ಅದಕ್ಕಾಗಿ ಈ ವರ್ಷ ಏನು ಹೇಳುತ್ತೆ ಎನ್ನುವುದನ್ನು ಕಾದು ಕುಳಿತ್ತಿದ್ದ ಭಕ್ತರಿಗೆ ಆಘಾತಕಾರಿ ಸುದ್ದಿ ಮೂಡಿದೆ. ಏಕೆಂದರೆ ಈ ವರ್ಷದ ಭವಿಷ್ಯ ವಾಣಿ ನುಡಿದಿದ್ದು, ಘಟಸರ್ಪ ಕಂಗಾಲಾದೀತಲೇ ಪರಾಕ್ ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. ಜನರ ಪ್ರತಿರೋಧಕ್ಕೆ ಜನವಿರೋಧಿ ಶಕ್ತಿಯೊಂದು ಕಂಗಾಲಾಗಿ ಹೋಗಲಿದೆ ಎಂಬುದಾಗಿಯೂ, ಈ ನಾಡಿನ ವರ್ತಮಾನಕ್ಕೆ ಅನ್ವಯಿಸಿದಾಗ ಹಲವು ಪ್ರಶ್ನೆಗಳು ಮೂಡಿದ್ದು ಹೀಗಿವೆ ನೋಡಿ.

ಘಟಸರ್ಪ ಕಂಗಾಲಾದೀತಲೇ’ ಪರಾಕ್?

ಹೌದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಗೊರವಯ್ಯ ನುಡಿದ ಕಾರ್ಣಿಕದ ಬಗ್ಗೆ ಎಲ್ಲೆಡೆ ತೀವ್ರ ಚರ್ಚೆಯಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಆಯುಧ ಪೂಜೆಯ ದಿನದಂದು ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲಿನ್ನು ಏರಿ ನುಡಿದ ಭವಿಷ್ಯದಲ್ಲಿ ಮುಂದೆ ಅಪಾಯವೊಂದು ಕಾದಿದೆ ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡಲಾಗಿದೆ. ಇದು ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದೇ ಅಥವಾ ರಾಜ್ಯ-ದೇಶಕ್ಕೆ ಸಂಬಂಧಿಸಿದ್ದೇ ಎಂಬ ಪ್ರಶ್ನೆ ಎದುರಾಗಿದೆ. “ರಾಜಕೀಯ ಬಲಾಢ್ಯ ಶಕ್ತಿಯೊಂದು ಕುಸಿದು ಬೀಳುವುದು” ಎಂದು ಅನೇಕರು ವ್ಯಾಖ್ಯಾನಿಸುತ್ತಿದ್ದಾರೆ.

ಗೊರವಯ್ಯನ ಕಾರ್ಣಿಕದಲ್ಲಿ ಯಾವುದೇ ಹೇಳಿಕೆಯು ಸ್ಪಷ್ಟವಾಗಿರುವುದಿಲ್ಲ. ನಿಗೂಢಾರ್ಥದ ಸಾಲುಗಳನ್ನು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ. ಹೆಚ್ಚಿನ ಭವಿಷ್ಯಗಳನ್ನು ರಾಜಕೀಯ ಮತ್ತು ಪ್ರಾಕೃತಿಕ ಬದಲಾವಣೆಗಳಿಗೆ ಅನ್ವಯಿಸಿ ಕಾರ್ಣಿಕ ಹೇಳಿರುವುದು ಇದನ್ನೇ ಕುರಿತಾಗಿ ಇರಬೇಕು ಎಂದು ಊಹಿಸಲಾಗುತ್ತದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ‘ಘಟಸರ್ಪ ಕಂಗಾಲಾದೀತಲೇ ಪರಾಕ್’ ಎಂದು ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯ ನಾಗಪ್ಪಜ್ಜ ಉರ್ಮಿ, ‘ಘಟಸರ್ಪ ಕಂಗಾಲಾದೀತಲೇ ಪರಾಕ್’ ಎಂದು ನುಡಿದು 25 ಅಡಿ ಎತ್ತರದ ಬಿಲ್ಲಿನಿಂದ ಕೆಳಕ್ಕೆ ಹಾರಿದರು. ಆಗ ಇಡೀ ಭಕ್ತ ಸಮೂಹ ಮುಗಿಲುಮುಟ್ಟುವ ಉದ್ಗಾರ ತೆಗೆಯಿತು.

ಗಂಡಾಂತರದ ಮುನ್ಸೂಚನೆ?

ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿಯುವ ವೇಳೆ ಇಡೀ ಮೈದಾನ ನಿಶ್ಶಬ್ಧವಾಗಿತ್ತು. ಗೊರವಯ್ಯ ನುಡಿಯುವ ಕಾರ್ಣಿಕ ಏನಿರಬಹುದು ಎಂಬ ಕುತೂಹಲದ ಜತೆಗೆ ಭಯ ಕೂಡ ಆವರಿಸಿತ್ತು. ನಾಗಪ್ಪಜ್ಜ ಬಳಸಿರುವ ‘ಘಟಸರ್ಪ’ ಎಂಬ ಪದವು ದೊಡ್ಡ ವ್ಯಕ್ತಿಯನ್ನು ಕುರಿತದ್ದಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಂಗಾಲಾದೀತಲೇ ಎನ್ನುವುದರಲ್ಲಿ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಮೋದಿ ಕುರಿತಾಗಿರುವುದೇ?

ಈ ಕಾರ್ಣಿಕ ನುಡಿಯಲಾಗಿದೆ ಎಂದು ದೇಶದ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ದೇಶ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಜತೆಗೆ ಉಗ್ರರ ದಾಳಿಯ ಭೀತಿ ಎದುರಾಗಿದೆ. ದೇಶದೊಳಗಿನ ಅನೇಕ ಸಮಸ್ಯೆಗಳು ಒಂದಾಗಿ ಸೇರಿ ನರೇಂದ್ರ ಮೋದಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಘಟಸರ್ಪ ಎನ್ನುವುದು ಮನುಷ್ಯನಿಗೆ ಅನ್ವಯಿಸುವುದಾದರೆ ಅದು ಮೋದಿ ಅವರೇ ಆಗಿರಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.