ಕೀಲು ನೋವು ಕಾಡುತ್ತಿದೆಯೇ? ಹಾಗದರೆ ಸರಳ ಉಪಾಯ ಮಾಡಿ..!

0
1387

ಇತ್ತೀಚೆಗಿನ ದಿನಗಳಲ್ಲಿ ಕೀಲು ನೋವು ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಿನ ಅಂತರವಿಲ್ಲದೇ ಬಿಡದೇ ಕಾಡುವ ನೋವುಗಳಿಂದ ಸುಲಭವಾಗಿ ಮುಕ್ತಿ ಪಡೆಯಲು ಕೆಲವು ಉಪಾಯಗಳಿವೆ ಇಲ್ಲಿವೆ ನೋಡಿ.

ಮುಖ್ಯವಾಗಿ ಸಮಮತೋಲಿತ ಆಹಾರ ಸೇವಿಸಿ. ಸಾಕಷ್ಟು ತರಕಾರಿ, ಹಣ್ಣು ಮತ್ತು ಡೈರಿ ಉತ್ಪನ್ನಗಳು, ಋತುವಿಗೆ ತಕ್ಕ ಹಣ್ಣುಗಳನ್ನು ಸೇವಿಸುತ್ತಿದ್ದರೆ ಕೀಲು ನೋವು ಬರದು. ಅಲ್ಲದೆ ವಿಟಮಿನ್ ಹೆಚ್ಚಿರುವ ಆಹಾರ ಸೇವಿಸುವುದು ತುಂಬಾ ಮುಖ್ಯ.

Image result for ತರಕಾರಿ, ಹಣ್ಣು ಮತ್ತು

ಅದರಲ್ಲೂ ಮುಖ್ಯವಾಗಿ ವಿಟಮಿನ್ ಡಿ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಹಾಗೂ ಖನಿಜ ಮತ್ತು ಕ್ಯಾಲ್ಶಿಯಂ ಅಂಶಗಳನ್ನೂ ತೆಗೆದುಕೊಳ್ಳಬೇಕು. ಕ್ಯಾಬೇಜ್, ಪಾಲಕ್, ಆರೆಂಜ್ ಹಾಗೂ ಇನ್ನಿತರ ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸಿ.

ಕುಳಿತಲ್ಲೇ ಕುಳಿತಿರಬೇಡಿ. ದೇಹಕ್ಕೆ ಸಾಕಷ್ಟು ಚಟುವಟಿಕೆ ನೀಡಬೇಕು. ಸೈಕಲ್ ತುಳಿಯುವುದು, ವಾಕಿಂಗ್, ಈಜುವುದರಿಂದ ನಮ್ಮ ಮಾಂಸ ಖಂಡಗಳು ಚುರುಕಾಗುತ್ತವೆ. ಇದರಿಂದ ಕೀಲು ನೋವುಗಳೂ ಕಡಿಮೆಯಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಕುಳಿತುಕೊಳ್ಳುವ, ನಿಲ್ಲುವ ಭಂಗಿ ಸರಿಯಾಗಿದ್ದರೆ ಕೀಲು ನೋವು ಕಾಡುವುದಿಲ್ಲ.