ದೇಶದ ರಾಜಕೀಯದಲ್ಲಿ ಮತ್ತೊಂದು ಬೆಳೆವಣಿಗೆ; ಮೋದಿ ಈ ಬಾರಿ ಪ್ರಧಾನಿ ಹುದ್ದೆಗೇರಲ್ಲ? ಹಾಗಾದ್ರೆ ದೇವೇಗೌಡರಿಗೆ ಪ್ರಧಾನಿಯಾಗುವ ಯೋಗ ಇದಿಯಾ..?

0
270

ದೇಶದಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೊನೆಯ ಹಂತಕ್ಕೆ ಬಂದಿದ್ದು, ಕೇವಲ ಐದು ದಿನಗಳಲ್ಲಿ ಯಾರು ದೇಶವನ್ನು ಆಳುವ ಅರ್ಹತೆ ಪಡೆಯುತ್ತಾರೆ ಎನ್ನುವುದು ನಿಖರವಾಗಲಿದೆ. ಈ ಸಂಬಂಧ ಹಲವಾರು ಸಮಿಕ್ಷೆಗಳು ಭವಿಷ್ಯಗಳು ಹೊರಬಂದಿದ್ದು, ಪ್ರಧಾನಿ ಹುದ್ದೆ ಯಾರ ಮಡಿಲಿಗಿದೆ ಎನ್ನುವುದು ಕುತೊಹಲವಾಗಿದೆ. ಈ ನಡುವೆ ಸುದ್ದಿಯೊಂದು ಹರಡಿದ್ದು ಮತ್ತೆ ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಧಾನಿಯಾಗುವ ಯೋಗವಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಇನ್ಮುಂದೆ ಮಕ್ಕಳನ್ನು ನರ್ಸರಿಗೆ ಸೇರಿಸಲು ಚಿಂತೆ ಬೇಡ; ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಶುರುವಾಗಳಿವೆ ನರ್ಸರಿ ಸ್ಕೂಲ್-ಗಳು..

ಹೌದು ಈ ಸಲ ದೇಶದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತೆ, ಆದ ಕಾರಣ ಮೋದಿ ಈ ಬಾರಿ ಪ್ರಧಾನಿ ಆಗುತ್ತಾರೋ ಇಲ್ಲೋ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ, ಏಕೆಂದರೆ ಮೊದಲು ಮೋದಿ ಪ್ರಧಾನಿಯಾಗುತ್ತಾರೆ ಎಂದು ಹೇಳಿದ ತಿಪಟೂರು ತಾಲೂಕಿನ ದಸರೀಘಟ್ಟದ ಚೌಡೇಶ್ವರಿ ಅಮ್ಮ, ಭವಿಷ್ಯ ನುಡಿದಿದ್ದು, ದೇವತಿ ಹೇಳಿದಂತೆ ಅತಂತ್ರ ಪರಿಸ್ಥಿತಿ ಬಂದರೆ ಪ್ರಧಾನಿ ಹುದ್ದೆಗೇರಲು ಹಲವು ನಾಯಕರು ಹವಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಯೋಗ ಇದೆ. ಎಂದು ಹೇಳಿದೆ. ಏಕೆಂದರೆ ಈ ಅಮ್ಮ ದಸರೀಘಟ್ಟದ ಚೌಡೇಶ್ವರಿ ಕ್ಷೇತ್ರ ಕಳಸ ಬರಹದ ಭವಿಷ್ಯಕ್ಕೆ ಖ್ಯಾತಿ ಪಡೆದಿದೆ. ಅದರಂತೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಲಿರುವ ಭವಿಷ್ಯವನ್ನು ಚೌಡೇಶ್ವರಿ ದೇವಿ ನುಡಿದಿತ್ತು.

Also read: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಆಫರ್; ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತ ಹೆಚ್ಚುವರಿ ಚಿಕಿತ್ಸೆಗೆ ರಾಜ್ಯ ಆರೋಗ್ಯ ಇಲಾಖೆ ಆದೇಶ..

ಅದಕ್ಕಾಗಿಯೇ ದೇವೇಗೌಡರಿಗೆ ದೇವರ ಮೇಲೆ ಬಹಳಷ್ಟು ನಂಬಿಕೆ ಇತ್ತು. ಆದರೆ ಗೌಡರು ಪ್ರಧಾನಿ ಹುದ್ದೆಯಲ್ಲಿರುವಾಗ ಶ್ರೀಕ್ಷೇತ್ರದ ಉತ್ಸವಕ್ಕೆ ಗೈರಾಗಿದ್ದಕ್ಕೆ ಚೌಡೇಶ್ವರಿ ಅಮ್ಮ ಮುನಿಸಿಕೊಂಡಿದ್ದರಂತೆ. ಪರಿಣಾಮ ಅಕ್ಕಿಯ ಮೇಲೆ ಕಳಸದಿಂದ ಬರೆದ ದೇವಿ, ದೇವೇಗೌಡರು 11 ತಿಂಗಳ ಬಳಿಕ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿತ್ತಂತೆ. ಆ ಮಾತು ಸತ್ಯವಾಯಿತು ಎಂದು ಅಲ್ಲಿನ ಪೂಜಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಮೋದಿ ಪ್ರಧಾನಿ ಆಗುತ್ತಾರೆ ಅನ್ನೋದನ್ನು ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಚೌಡೇಶ್ವರಿ ಅಮ್ಮ ಕಳಸ ಬರಹದ ಮೂಲಕ ಹೇಳಿತ್ತು.

ನಂತರ ಸ್ವತಃ ಮೋದಿಯವರೇ ಅಮ್ಮನವರ ಕಳಸ ಹೊತ್ತಿದ್ದರು. ಅಮ್ಮನವರ ಹೇಳಿಕೆಯಂತೆ ಮೋದಿ ಪ್ರಧಾನಿಯಾದರು ಅದರಂತೆ ಮೋದಿಯವರು ಪ್ರಧಾನಿ ಆದ ಬಳಿಕ 3 ಬಾರಿ ತುಮಕೂರು ಜಿಲ್ಲೆಗೆ ಬಂದು ಹೋಗಿದ್ದಾರೆ. ಒಮ್ಮೆಯೂ ಶ್ರೀಕ್ಷೇತ್ರ ದಸರೀಘಟ್ಟಕ್ಕೆ ಭೇಟಿಕೊಟ್ಟಿಲ್ಲ. ಹಾಗಾಗಿ ದೇವೇಗೌಡರಂತೆ ಮೋದಿಯವರೂ ಅವಕೃಪೆಗೆ ಒಳಗಾಗಬಹುದು ಎಂಬ ಚರ್ಚೆ ಶುರುವಾಗಿದೆ. ಇನ್ನೊಂದೆಡೆ ದಸರಿಘಟ್ಟ ಕ್ಷೇತ್ರದ ಶ್ರೀಗಳಾದ ಚಂದ್ರಶೇಖರನಂದನಾಥ ಸ್ವಾಮಿಜಿಗಳ ಪ್ರಕಾರ ಈ ಬಾರಿ ದೇವೇಗೌಡರ ಯೋಗ ಚೆನ್ನಾಗಿದೆ. ಹಾಗಾಗಿ ಉನ್ನತಮಟ್ಟಕ್ಕೆ ಮತ್ತೆ ಏರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೆಲ್ಲದರಿಂದ ಮೋದಿ ಮತ್ತೆ ಪ್ರಧಾನಿಯಾಗುತ್ತಾರೋ ಇಲ್ಲೋ ಎನ್ನುವ ಅನುಮಾನ ಮೂಡಿದೆ.

ಪ್ರಧಾನಿ ಹುದ್ದೆಗೆರಲು ಗೌಡರು ತಯಾರಿ?

Also read: ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಾದ ಮಂಡ್ಯದ ಫಲಿತಾಂಶ; ಮೇ 23 ರಂದು ಮಂಡ್ಯದಲ್ಲಿ ಕಫ್ರ್ಯೂ ಜಾರಿ?ಎರಡು ದಿನಗಳು ಮಂಡ್ಯ ಜಿಲ್ಲೆ ಸಂಪೂರ್ಣ ಬಂದ್..

ಕಳೆದ ಒಂದು ವಾರದಿಂದ ದೇವೇಗೌಡರು ತಮ್ಮ ಹೆಂಡತಿ ಜೊತೆಗೆ ರೆಸಾರ್ಟ್​ನಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ ಗೌಡರು ವಿಶ್ರಾಂತಿ ಪಡೆಯುವ ಸಲುವಾಗಿ ಪತ್ನಿ ಚನ್ನಮ್ಮ‌ ಜೊತೆ ರೆಸಾರ್ಟ್​ನಲ್ಲಿ ಇರಲಿಲ್ಲ. ಕಂಡ ಕಂಡ ದೇವರಿಗೂ ಸುಮ್ಮನೆ ಕೈ ಮುಗಿಯಲಿಲ್ಲ. ತಮ್ಮ‌ ಮಹತ್ವಾಕಾಂಕ್ಷೆ ಈಡೇರಿಕೆಗಾಗಿ ದೇವೇಗೌಡರು ತಮ್ಮ ಮನದೊಳಗೆ ನಡೆಸಿರುವ ಯಜ್ಞ ಇದು. ಕೇಂದ್ರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇಶದ ಪ್ರಧಾನಿ ಆಗುವ ಯಜ್ಞ ಎಂದು ನಿಮಗೆ ಅನಿಸಬಹುದು. ಆದರೆ, ಪ್ರಧಾನಿ ಹುದ್ದೆಗೂ ಮೀರಿದ ಸ್ಥಾನಕ್ಕಾಗಿ ನಡೆಸಿರುವ ಯಜ್ಞ ಅದು. ಅದಕ್ಕಾಗಿಯೇ ದೇವೇಗೌಡರು ರಾತ್ರಿ – ಹಗಲು ನಿದ್ದೆಬಿಟ್ಟು ರಾಜಕೀಯ ತಂತ್ರಗಾರಿಕೆಯ ಬಲೆ ಹೆಣೆದಿದ್ದಾರೆ. ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ. ಮತ್ತೆ ಮೋದಿ ಪ್ರಧಾನಿ ಯಾಗುತ್ತರೋ ಇಲ್ಲ ಮತ್ತೆ ದೇವೇಗೌಡರು ಪ್ರಧನಿಯಾಗುತ್ತಾರೋ ಎನ್ನುವುದು 23 ಫಲಿತಾಂಶ ಬಳಿಕ ತಿಳಿಯಲಿದೆ.