ಕರ್ನಾಟಕ ಜನತೆಯೇ ಭಾರೀ ತಿರಸ್ಕಾರದ ನಡುವೆಯೂ ಮುಂದುವರೆದ ಮೈತ್ರಿ ಸರ್ಕಾರ!! ಎಚ್.ಡಿ.ಕೆ. ಇನ್ನೂ ನಾಲ್ಕು ವರ್ಷ ಸಿ.ಎಂ. ಆಗಿ ಇರ್ತಾರ??

0
208

ರಾಜ್ಯದಲ್ಲಿ ಮೈತ್ರಿ ಸರ್ಕಾರವು ಅಳಿವು-ಉಳಿವುನಲ್ಲಿ ನಿಂತಿದೆ ಇಷ್ಟು ದಿನ ಅಧಿಕೃತವಾಗಿ ಮಾತನಾಡದ ಕಾಂಗ್ರೆಸ್ ಶಾಸಕರು ಈಗ ಬೆಜೆಪಿಗೆ ಸೇರುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹೀನಾಯವಾಗಿ ಸೋಲನುಭವಿಸಿದೆ. ಪರಿಣಾಮ ರಾಜ್ಯ ಸರ್ಕಾರ ಉರುಳಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಉಭಯ ಪಕ್ಷದ ನಾಯಕರು ಮುಂದಿನ ನಾಲ್ಕು ವರ್ಷಕ್ಕೂ ಕುಮಾರಸ್ವಾಮಿಯೇ ಸಿಎಂ ಎಂದು ಸ್ಪಷ್ಟಪಡಿಸಿದ್ದರು ಇದಕ್ಕೆ ಒಪ್ಪದ ಹಲವು ಕಾಂಗ್ರೆಸ್ ನಾಯಕರು ಸಿದ್ದು ಸಿಎಂ ಆದರೆ ಮಾತ್ರ ಪಕ್ಷದಲ್ಲಿ ಇರುತ್ತೇವೆ ಇಲ್ಲದಿದರೆ ಬಿಜೆಪಿಗೆ ಹೋಗುತ್ತೇವೆ ಎನ್ನುವ ಮಾತನ್ನು ಹೇಳಿದ್ದಾರೆ.

Also read: ಮತ್ತೆ ನರೇಂದ್ರ ಮೋದಿ ಇತಿಹಾಸ ಬರೆದು ಪ್ರಚಂಡ ಗೆಲುವು ಸಾಧಿಸಿದಕ್ಕೆ ಗ್ರಾಹಕರಿಗೆ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡಿದ ಕ್ಷೌರಿಕ..

ಹೌದು ಮೈತ್ರಿಯಲ್ಲಿ ಅತೃಪ್ತ ನಾಯಕರು ಬಿಜೆಪಿಗೆ ಹೋಗುವುದು ಖಚಿತ ಎನ್ನುವ ಸುದ್ದಿ ಹರಡಿತ್ತು, ಆದರೆ, ನಿನ್ನೆ ಮಧ್ಯಾಹ್ನ ಔಪಚಾರಿಕ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕರು ಮುಂದಿನ ನಾಲ್ಕು ವರ್ಷಗಳು ಕುಮಾರಸ್ವಾಮಿ ಮಂತ್ರಿಯಾಗಿ ಮುಂದುವರಿಯಲು ಅನುಮತಿ ನೀಡಿದರು. ಅದರಂತೆ ಈ ಸಭೆಯ ನಂತರ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಎಂದೇ ಊಹಿಸಲಾಗಿತ್ತು. ಆದರೆ ಒಪ್ಪಿಗೆಗೆ ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ತಕರಾರು ತಗೆದಿದ್ದು ಬಿಜೆಪಿಗೆ ಹೋಗುವ ಎಲ್ಲಾ ಲಕ್ಷಣಗಳನ್ನೂ ಮುಂದಿಟ್ಟಿದೆ. ಅದರಲ್ಲೂ ಬಿಸಿ ಪಾಟೀಲ್ ಹೇಳಿಕೆ ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೆಲ್ಲವೂ ಒಂದು ಕಡೆಯಾದರೆ ಕಾಂಗ್ರೆ​ಸ್‌ ಹಾಗೂ ಜೆಡಿ​ಎಸ್‌ ಪಕ್ಷ​ಗಳ 30ಕ್ಕೂ ಹೆಚ್ಚು ಶಾಸ​ಕರು ಬಿಜೆ​ಪಿಗೆ ಇಂದೋ ನಾಳೆಯೋ ಬರ​ಲಿ​ದ್ದು 2 ದಿನದಲ್ಲೇ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಮುರು​ಗೇಶ ನಿರಾಣಿ ತಿಳಿಸಿದ್ದು ಲೋಕ​ಸಭೆ ಚುನಾ​ವಣೆ ಫಲಿತಾಂಶ ಹೊರ ಬೀಳು​ತ್ತಲೇ ಮೈತ್ರಿ ಸರ್ಕಾ​ರವೂ ಪತ​ನ​ವಾ​ಗ​ಲಿ​ಯೆಂದು ಹೇಳಿ​ದ್ದೆವು. ಈಗ ಹಾಗೆಯೇ ಆಗಲಿದೆ. ಕಾಂಗ್ರೆಸ್‌, ಜೆಡಿ​ಎಸ್‌ ಪಕ್ಷ​ಗಳ ಶಾಸ​ಕರು ಈಗಾ​ಗಲೇ ನಮ್ಮ ಪಕ್ಷದ ಜೊತೆಗೆ ನಿರಂತರ ಸಂಪ​ರ್ಕ​ದ​ಲ್ಲಿ​ದ್ದಾರೆ. ಮೈತ್ರಿ ಪಕ್ಷ​ಗ​ಳಿಂದ ಯಾರು ಯಾರು ಬರು​ತ್ತಾ​ರೆಂಬು​ದನ್ನು ಕಾದು ನೋಡಿ ದೇಶದ ಜನತೆ ನರೇಂದ್ರ ಮೋದಿಗೆ ಮತ್ತೊಮ್ಮೆ ಆಶೀ​ರ್ವಾದ ಮಾಡಿ​ದ್ದಾರೆ ಎಂದರು.

Also read: ಮಂಡ್ಯದಲ್ಲಿ ಸೋತ ನಿಖಿಲ್ ದೇವೇಗೌಡರ ಮೇಲೆ ಗರಂ; ನಿಮ್ಮನ್ನು ನಂಬಿ ನಾನು ಹಾಳಾಗಿಬಿಟ್ಟೆ, ಸೋತು ನನಗೆ ಅಪಮಾನ ಆಗಿದೆ ಎಂದ ನಿಖಿಲ್…

ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ ಏನು?

ಮೈತ್ರಿ ಸರ್ಕಾರವನ್ನ ಉರುಳಿಸಲು ಮೆಗಾ ಸ್ಕೆಚ್ ನಡೆದಿದ್ದು, ಈಗಾಗಲೇ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಬಾರಿ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ಡೇಟ್ ಫಿಕ್ಸ್ ಮಾಡಿದೆ. ಸದ್ಯಕ್ಕೆ ಸುಮ್ಮನಿರಿ, ಒಂದು ತಿಂಗಳ ಬಳಿಕ ಆಟ ಚಾಲೂ ಮಾಡಿ ಸರ್ಕಾರ ಬೀಳಿಸಿ. ಆಮೇಲೆ ನಮ್ಮ ಆದೇಶ ಪಾಲಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಹೊಸ ಗೇಮ್ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.

ಏನು ಬಿಜೆಪಿಯ ಹೊಸ ಗೇಮ್?

Also read: ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ.ಗೆ ಭಾರಿ ಜಯ, ಬಿ.ಜೆ.ಪಿ.ಯ ಪ್ರಣಾಳಿಕೆಯಂತೆ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋಗ್ತಾರೆ ಅಂತ ಓದಿ!!

ದೋಸ್ತಿ ಸರ್ಕಾರವನ್ನು ಬೀಳಿಸಲು ಕನಿಷ್ಠ 11 ಶಾಸಕರು ರಾಜೀನಾಮೆ ಕೊಡಲೇಬೇಕು. ಹೀಗಾಗಿ ಮತ್ತೆ ಗೆಲ್ಲುವ ತಾಕತ್ತು ಇರುವ ಶಾಸಕರನ್ನ ಮಾತ್ರ ಪಿಕ್ ಮಾಡಲು ಪ್ಲಾನ್ ಮಾಡಿದೆ. ಈಗ ಬಿಜೆಪಿ ಬಲ 105, ಇಬ್ಬರು ಪಕ್ಷೇತರರು ಸೇರಿದರೆ 107 ಆಗುತ್ತದೆ. 11 ಶಾಸಕರಿಂದ ರಾಜೀನಾಮೆ ಕೊಡಿಸಿದರೆ 224 ಸದಸ್ಯ ಬಲದ ವಿಧಾನಸಭೆ 213 ಸಂಖ್ಯಾಬಲಕ್ಕೆ ಕುಸಿಯುತ್ತದೆ. ಆಗ ಸರ್ಕಾರ ಇರಬೇಕಾದರೆ ಕನಿಷ್ಠ 107 ಸ್ಥಾನಗಳ ಅಗತ್ಯ ಇರುತ್ತದೆ. ಈ ವೇಳೆ ಮೈತ್ರಿ ಸರ್ಕಾರದಲ್ಲಿ 1 ಸೀಟಿನ ಕೊರತೆ ಬರುತ್ತದೆ. ಆ ಸಂದರ್ಭದಲ್ಲಿ ಬಿಜೆಪಿಗೆ 107 ಸೀಟು ಇರುತ್ತದೆ.