ಮಂಡ್ಯದ ಜನರು ನನ್ನನು ಕೈ ಬಿಟ್ಟಿದ್ದಾರೆ, ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ ಎಂದು ಗಳಗಳನೆ ಅತ್ತ ಎಚ್‍ಡಿ ಕುಮಾರಸ್ವಾಮಿ.!

0
206

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಎಲ್ಲ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಒಬ್ಬರ ತಪ್ಪುಗಳನ್ನು ಒಬ್ಬ ಹೇಳಿಕೊಂಡು ಮತದಾರರ ಮನಗೆಲ್ಲುತ್ತಿದ್ದಾರೆ. ಆದರೆ ಗೆಲ್ಲಲೇಬೇಕು ಎನ್ನುವ ಛಲ ಹೊತ್ತಿರುವ ಬಿಜೆಪಿ ಸರ್ಕಾರ ಭಾರಿ ಪ್ರಚಾರ ಮಾಡುತ್ತಿದ್ದು. ಪ್ರತಿಯೊಂದು ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೋಗಿ ಮತ ಕೇಳುತ್ತಿದ್ದಾರೆ. ಅದರಂತೆ ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡುವಾಗ ಎಚ್‍ಡಿಕೆ ಭಾವುಕರಾಗಿ ಕಣ್ಣಿರು ಹಾಕಿದ್ದಾರೆ. ನನ್ನ ಮಗನನ್ನು ನೀವೇ ಚುನಾವಣೆಗೆ ನಿಲ್ಲಿಸ್ಸಿ ನೀವೇ ಸೋಲಿಸಿದ್ರಿ ಎಂದು ಕಣ್ಣಿರಿಟ್ಟಿದ್ದಾರೆ.

@kannada.news18.com

ಮತ್ತೆ ಎಚ್‍ಡಿಕೆ ಕಣ್ಣಿರು?

ಹೌದು ಮಾಜಿ ಸಿಎಂ ಕುಮಾರಸ್ವಾಮಿ ಇಂದು ಕೆ.ಆರ್.ಪೇಟೆ ಚುನಾವಣಾ ಪ್ರಚಾರದಲ್ಲಿ ನನಗೆ ನಿಮ್ಮ ಪ್ರೀತಿ ಸಾಕು, ಯಾವ ಸಿಎಂ ಹುದ್ದೆಯೂ ಬೇಡ ಎಂದು ವೇದಿಕೆಯಲ್ಲಿಯೇ ಕಣ್ಣೀರಾಕಿ ಜನರ ಬಳಿ ಮತಯಾಚಿಸಿದರು. ಮೈತ್ರಿ ಸರ್ಕಾರದ ವೇಳೆ ನಾನು ಮೊದಲನೇ ದಿನದಿಂದಲೂ ನೆಮ್ಮದಿಯಿಂದ ಕೆಲಸ‌ಮಾಡಲಿಲ್ಲ. ಪರಮೇಶ್ವರ್ ನಮ್ಮ ಪಕ್ಷದವರನ್ನು ಕೋತಿ ಅಂತಾರೆ. ನಾನು ಆ ಪಕ್ಷದವರ ಜೊತೆ ಇದ್ದಾಗ ಗುಲಾಮನಾಗಿ ಕೆಲಸ ಮಾಡಿದೆ. ಕಣ್ಣೀರಾಕುತ್ತಲೇ ಜನರಿಗೆ ತನ್ನ ಸಂದರ್ಭ ವಿವರಿಸಿ ಮತಯಾಚನೆ ಮಾಡಿ. ಜಿಲ್ಲೆಯ

ಜನರೇ ನನ್ನನ್ನು ಕೈ ಬಿಟ್ಟ ಮೇಲೆ ನಾನು ಅಧಿಕಾರದಲ್ಲಿರಬೇಕೇ?

ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ಮುಖ್ಯಮಂತ್ರಿ ಸೇರಿದಂತೆ ಉಳಿದ ಅಧಿಕಾರ ಯಕಶ್ಚಿತ್ ಎಂದು ಕಣ್ಣೀರು ಹಾಕಿದರು. ಅಲ್ಲದೆ ನಾನು ನನ್ನ ಮಗನನ್ನು ಚುನಾವಣೆಗೆ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ನೀವೇ ಈ ಕುರಿತು ಒತ್ತಾಯ ಮಾಡಿ, ಬಲವಂತವಾಗಿ ನಿಲ್ಲಿಸಿದಿರಿ. ಜಿಲ್ಲೆಯ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು? ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನನ್ನು ಗುಲಾಮನ ರೀತಿಯಲ್ಲಿ ನಡೆಸಿಕೊಂಡರು, ನಾನು ಜಿಲ್ಲೆಯ ಜನರಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ನನ್ನ ತಪ್ಪಾ? ಪತ್ರಿಕೆಯವರು, ಟಿವಿಯವರು ಏನಾದರೂ ಬರೆದುಕೊಳ್ಳಲಿ. ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ. ಈಗ ಆ ನೀರು ಹೊರ ಬರುತ್ತಿದೆ ಎಂದು ಭಾವುಕರಾದರು.

ಬಾಂಬೆ ಕಳ್ಳನಿಗೆ ಟಿಕೆಟ್ ನೀಡಿದೆ

ನಾರಾಯಣಗೌಡರಿಗೆ ಟಿಕೆಟ್ ಕೊಟ್ಟಿದ್ದು ನನ್ನ ತಪ್ಪು ಬಾಂಬೆ ಕಳ್ಳ ಎಂದು ಕರೆಯುವ ಈತನಿಗೆ 2013 ರಲ್ಲಿ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಈಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನನ್ನ ಕರ್ಮ 2018 ರಲ್ಲಿ ನನ್ನ ತಂದೆಯ ವಿರೋಧದ ನಡುವೆಯೂ ನಾನು ಟಿಕೆಟ್ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 2019 ರ ಫೆಬ್ರವರಿಯಲ್ಲಿ ನಾನು ಬಜೆಟ್ ಸಿದ್ಧತೆಯಲ್ಲಿದ್ದೆ. ಆಗ ಜಿಲ್ಲೆಗೆ ಏನು ಕೊಡಬೇಕೆಂದು ಚಿಂತನೆ ಮಾಡುತ್ತಿದ್ದೆ. ಆದರೆ ಆಗ ಇವನು ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆಯಲ್ಲಿದ್ದ. ಬಿಜೆಪಿಯವರಿಂದ ಹಣ ಪಡೆದು ಆಸ್ಪತ್ರೆಯಲ್ಲಿ ಮಲಗಿದ್ದ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದನ್ನು ದೇವರು ಮೆಚ್ಚುತ್ತಾನಾ ಎಂದು ಎಚ್‍ಡಿಕೆ ಸಿಎಂ ಆಗಿದ್ದಾಗ ನಾರಾಯಣಗೌಡ ಬರೆದ ಪತ್ರವನ್ನು ಓದಿ ಭಾವುಕರಾದರು.

ಮಧ್ಯಂತರ ಚುನಾವಣೆ ಸಾಧ್ಯವಿಲ್ಲ ಯಡಿಯೂರಪ್ಪ ಸ್ಪಷ್ಟನೆ;

ಉಪ ಚುನಾವಣೆಯಲ್ಲಿ ತಾವು ಅಧಿಕ ಸೀಟುಗಳನ್ನು ಗೆಲ್ಲಲ್ಲಿದ್ದು, ಸರ್ಕಾರ ಸುಭದ್ರವಾಗಿರುತ್ತದೆ, ಹೀಗಿರುವಾಗ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಮಧ್ಯಂತರ ಚುನಾವಣೆ ಬೇಡವಾಗಿದೆ. ಆದರೆ ಅಧಿಕಾರ ಇಲ್ಲದೆ ಹತಾಶೆಯಿಂದ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಯ ಮಾತನ್ನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಇನ್ನೂ ಮೂರೂವರೆ ವರ್ಷ ವಿರೋಧ ಪಕ್ಷದ ನಾಯಕರಾಗಿಯೇ ಇರಬೇಕು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Also read: ಇಸ್ರೇಲ್ ಮಾದರಿಯಂತೆ ಕೃಷಿಯಲ್ಲಿ ಕೋಳಿ ಮೊಟ್ಟೆ, ಅಡುಗೆ ಎಣ್ಣೆ ಬಳಸಿ ಲಕ್ಷಾಂತರ ರೂ. ಲಾಭ ಗಳಿಸುವಲ್ಲಿ ಯಶಸ್ವಿಯಾದ ರಾಯಚೂರಿನ ರೈತರು.!