ರಫೇಲ್ ವಿಮಾನಕ್ಕೆ ರಾಜನಾಥ್ ಸಿಂಗ್ ಪೂಜೆ ಸಲ್ಲಿಸಿದ್ದನ್ನೂ ಟೀಕೆ ಮಾಡಿ : ರೇವಣ್ಣ; ರೇವಣ್ಣ ಹೇಳಿರುವುದು ಸರಿಯೇ?

0
227

ನಿಂಬೆಹಣ್ಣು ಕೈಯಲ್ಲಿ ಹಿಡಿದು ಪೇಮಸ್ ಆಗಿದ್ದ ಮಾಜಿ ಸಚಿವ ರೇವಣ್ಣನವರಿಗೆ ನಿಂಬೆಹಣ್ಣು ಎಂದು ಕೆರೆಯುತ್ತಿದ್ದರು, ಏಕೆಂದರೆ ಮೈತ್ರಿ ಸರ್ಕಾರದ ವೇಳೆ ಎಲ್ಲೇ ಹೋದರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಕೊಗುವ ರೇವಣ್ಣನವರು ಭಾರಿ ವ್ಯಗ್ಯಕ್ಕೆ ಒಳಗಾಗಿದ್ದರು, ಇದನ್ನು ನೋಡಿದ ಜನರು ವಿಧಾನ ಸಭೆಯಲ್ಲಿ ಏನಾದರು ಕೆಲಸಕ್ಕೆ ಬಂದರೆ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಬರುತ್ತಿದ್ದರು ಇದನ್ನು ನೋಡಿದ ಸರ್ಕಾರ ವಿಧಾನ ಸಭೆಯಲ್ಲಿ ನಿಂಬೆಹಣ್ಣು ನಿಷೇಧಿಸಿತು, ಇವೆಲ್ಲಕ್ಕೂ ಕಾರಣರಾದ ರೇವಣ್ಣ ಈಗ ಯುದ್ಧ ವಿಮಾನಕ್ಕೆ ಇಟ್ಟ ನಿಂಬೆಹಣ್ಣಿನ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ವಿಮಾನ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇಟ್ಟಿದ್ದಾರೆ. ಇದನ್ನು ನೋಡಿದ ಮಾಜಿ ಸಚಿವ ರೇವಣ್ಣ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಬಗ್ಗೆ ಮಾತನಾಡಲಿ ರಕ್ಷಣಾ ಏಕೇ ವಿಮಾನಕ್ಕೆ ನಿಂಬೆಹಣ್ಣು ಇಟ್ಟಿದ್ದಾರೆ ಸಚಿವರಿಗೂ ನಿಂಬೆಹಣ್ಣಿನ ಮಹತ್ವ ಗೊತ್ತಿದೆ ಅದಕ್ಕಾಗಿ ಇಟ್ಟಿದ್ದಾರೆ. ಆದರೆ ನಾವು ಕೈಯಲ್ಲಿ ಹಿಡಿದರೆ ವ್ಯಂಗ್ಯವಾಡುವ ಬಿಜೆಪಿಗರು ಈಗೇಕೆ ಮಾತನಾಡುತ್ತಿಲ್ಲ ಎಂದು ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಪರೋಕ್ಷವಾಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ಮಾತನಾಡಿದ ರೇವಣ್ಣ ಕಾವೇರಿ ಕೊಳ್ಳದಲ್ಲಿರುವ ಡ್ಯಾಂಗಳಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ. ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದರೂ ಕಾಮಗಾರಿ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದ ಅನರ್ಹರ ಕ್ಷೇತ್ರಗಳಿಗೆ ಮತ್ತು ಬಿಜೆಪಿ ಗೆದ್ದ ಕೆಲ ಕ್ಷೇತ್ರದ ಕಾಮಗಾರಿಗಳಿಗೆ ಈಗ ಕೆಲಸಕ್ಕೆ ಅನುಮತಿ ನೀಡುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

ದ್ವೇಷದ ರಾಜಕಾರಣ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಸಹ ಹಾಗೆಯೇ ಇದೆ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಕೆಲಸಮಾಡಿ. ಕಾಮಗಾರಿ ತಡೆ ಹಿಡಿದ ಜಿಲ್ಲೆಗಳ ಜನತೆ ಕರ್ನಾಟಕದವರಲ್ಲವೇ? ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರು ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸ ಎಂದು ಬಿಜೆಪಿ ವಿರುದ್ಧ ಮಾತನಾಡಿದರು.

ಒಟ್ಟಾರೆಯಾಗಿ ರೇವಣ್ಣನವರು ಅಧಿಕಾರದಲ್ಲಿದ್ದಾಗ ನಿಂಬೆಹಣ್ಣು ಎಂದು ಗೇಲಿ ಮಾಡಿದ ಬಿಜೆಪಿ ನಾಯಕರನ್ನು ಸೂಕ್ಷ್ಮವಾಗಿ ಯಾರು ನಿಂಬೆಹಣ್ಣು ಹಿಡಿಯುತ್ತಾರೆ ಎನ್ನುವುದನ್ನು ಕಾದು ಕುಳಿತು ನೋಡಿ ತಮ್ಮ ಸೇಡನ್ನು ತಿಳಿಸಿಕೊಳ್ಳುತ್ತಿದ್ದಾರೆ.