ರಾಜ್ಯದಲ್ಲಿ ಮುಂದುವರೆದ ಸೋತ ಜೆಡಿಎಸ್ ಪಕ್ಷದ ನಾಯಕರ ದರ್ಪ; ವೋಟ್ ಬಿಜೆಪಿಗೆ ಹಾಕ್ತಾನೆ, ನನ್ನತ್ರ ಬಂದು ಚೀಟಿ ಕೊಟ್ಟಿದ್ದಾನೆ, ಮತದಾರನಿಗೆ ರೇವಣ್ಣ ಕ್ಲಾಸ್..

0
293

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಾರಿ ಸೋಲು ಅನುಭವಿಸಿದ ಜೆಡಿಎಸ್ ಪಕ್ಷದ ನಾಯಕರು, ಹೋದಕಡೆ ಮತದಾರರಿಗೆ ಹೀಯಾಳಿಕೆ ಮಾಡುತ್ತಿದ್ದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಒಟ್ಟು ಜೆಡಿಎಸ್ ಒಂದು ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆದ್ದಿದ್ದು ಈ ನಾಯಕರ ಟೀಕೆಗೆ ಕಾರಣವಾಗಿ ಮತದಾರರು ತಮ್ಮ ಅಳುವನ್ನು ಹೇಳಿಕೊಳ್ಳಲು ಹೋದಾಗ ಜನರ ಹತ್ತಿರ ಇವರು ಮಾಡುತ್ತಿರುವ ವರ್ತನೆಗಳು ಹೆಚ್ಚಾಗುತ್ತಿವೆ, ಈ ಹಿಂದೆ ಮಂಡ್ಯದಲ್ಲಿ ಸಚಿವ ತಮ್ಮಣ್ಣ ಮತದಾರರಿಗೆ ಅಸಭ್ಯವಾಗಿ ಮಾತನಾಡಿದರು ಅದೇ ರೀತಿ ರೇವಣ್ಣ ಕೂಡ ಮತದಾರರಿಗೆ ಹಿಯಾಳಿಸಿ ಮಾತನಾಡಿದ್ದಾರೆ.

Also read: ಸಾಲ ಮನ್ನಾ ಮಾಡಲು ರೈತರ ಖಾತೆಗೆ ಬಂದ ಹಣ ಬ್ಯಾಂಕಿನಿಂದ ಸರಕಾರಕ್ಕೆ ವಾಪಸ್; ಕೊನೆಗೂ ಮೈತ್ರಿ ಸರ್ಕಾರದಿಂದ ರೈತರ ಕಣ್ಣಿಗೆ ಮಣ್ಣು..?

ಹೌದು ಸಚಿವ ರೇವಣ್ಣ ಹಾಸನದ ಕೆಪಿಟಿಎಲ್ ನ ಕಾರ್ಯ ಮತ್ತು ಪಾಲನಾ ವಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೊಳೆನರಸೀಪುರ ಕ್ಷೇತ್ರದ ಮತದಾರನಿಗೆ ನಗುತ್ತಲೆ ಲೋಕೋಪಯೋಗಿ ಸಚಿವ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಭಾಷಣ ಸಮಯದಲ್ಲಿ ವ್ಯಕ್ತಿಯೊಬ್ಬ ಚಿಟಿಯ ಮೂಲಕ ಮನವಿ ಸಲ್ಲಿಸಿದ್ದಾನೆ ಈ ಸಮಯದಲ್ಲಿ ಕೋಪಗೊಂಡ ರೇವಣ್ಣ ವೋಟ್ ಬಿಜೆಪಿಗೆ ಹಾಕ್ತಾನೆ, ನನ್ನತ್ರ ಬಂದು ಚೀಟಿ ಕೊಟ್ಟಿದ್ದಾನೆ. ಹೀಗೆ ನಮಗೆ ಮತ ಹಾಕದೆ ಇರುವ ಹಲವರು ಈಗ ಬಂದು ವೋಟ್ ಕೇಳುತ್ತಿದ್ದಾರೆ. ಈಗಾಗಲೇ ರೇವಣ್ಣ ಕಡೆಯವರು ಎಂದು ಹೇಳಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ 450 ಜನ ಗ್ಯಾಂಗ್ ಮ್ಯಾನ್ ವಜಾ ಮಾಡಿದ್ದಾರೆ. ಈಗ ನೀವು ಶೋಭಾ ಕರಂದ್ಲಾಜೆ ಬಳಿ ಹೋಗಿ ಎಂದು ರೇವಣ್ಣ ನಗುತ್ತಲೇ ವ್ಯಕ್ತಿಯ ಕಾಲೆಳೆದರು. ಆ ಬಳಿಕ ಮಾರಗೋಡನಹಳ್ಳಿಯ ಇವನು, ವೋಟ್ ಯಾರಿಗೆ ಹಾಕಿದ್ದಾನೆ ಕೇಳಿ? ಎಂದು ಭಾಷಣದ ನಡುವೆ ಹೇಳಿದರು.

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸಮ್ಮಿಶ್ರ ಸರ್ಕಾರ ಬಗ್ಗೆ ಪ್ರಸ್ತಾಪಿಸಿದ ಅವರು, ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ. ಆದರೆ ವೋಟ್ ಬಿಜೆಪಿಗೆ ಹಾಕುವವ ನನ್ನ ಬಳಿ ಬಂದು ಈಗ ಚೀಟಿ ಕೊಟ್ಟಿದ್ದಾನೆ. ಆದರೆ ನನಗೆ ಬಿಜೆಪಿ, ಕಾಂಗ್ರೆಸ್ ಸಂಬಂಧವಿಲ್ಲ. ಅವರು ಒಳ್ಳೆಯ ಅಧಿಕಾರಿ ಆಗಿದ್ದಾರೆ. ಎಲ್ಲರದ್ದು ಕೆಲಸ ಮಾಡಿಕೊಡುತ್ತೇನೆ. ಈ ಭಾಗದ ಜನರಿಗೆ ಬೇಕಾದ ಕೆಲಸ ಮಾಡಲು ಬಂದಿದ್ದು, ಎಲ್ಲರ ಕೆಲಸ ಮಾಡುತ್ತೇನೆ ಎಂದು ಕೊನೆಗೆ ಸಮಾಧಾನದ ಮಾತುಗಳನ್ನು ಆಡಿದ್ದಾರೆ.

@ Public tv

ಈ ಹಿಂದೆ ಜೆಡಿಎಸ್ ಪಕ್ಷದ ಸಚಿವ ತಮ್ಮಣ್ಣ ಮಂಡ್ಯದಲ್ಲಿ ಮತದಾರರಿಗೆ ಅಶ್ಲೀಲ ಪದ ಬಳಕೆ ಮಾಡಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ವಿಪಕ್ಷ ನಾಯಕರು ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಇವರು ಮದ್ದೂರು ಕ್ಷೇತ್ರದಲ್ಲಿ ಹಲವೆಡೆ ವಿವಿಧ ಅಭಿವೃ್ದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ತೆರಳಿದ್ದರು. ಈ ವೇಳೆ ಅನೇಕರು ಸಚಿವರ ಬಳಿ ತಮ್ಮೂರಿನ ಸಮಸ್ಯೆ ಹೇಳಿಕೊಂಡಿದ್ದಾರೆ. ಇದಕ್ಕೆ ಮತದಾರರ ವಿರುದ್ಧವೇ ತಮ್ಮಣ್ಣ ತಿರುಗಿ ಬಿದ್ದು. ಅಭಿವೃದ್ದಿ ಮಾಡೋ ನಮಗೆ ಓಟ್ ಹಾಕದೆ ಯಜಮಾನಿಕೆಗೆ ಮಾತ್ರ ಬರುತ್ತೀರಾ .
“ನೀವು ನಮಗೆ ಓಟ್ ಹಾಕಿಲ್ಲ. ಹಾಗಾಗಿ ಈಗ ಗೆಲ್ಲಿಸಿದವರ ಕೈಯ್ಯಲ್ಲೇ ಅಭಿವೃದ್ದಿ ಮಾಡಿಸಿಕೊಳ್ಳಿ,” ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ? ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ, ಕುರುಬರದೊಡ್ಡಿ ಗ್ರಾಮದಲ್ಲಿ, ನಿಮಗೆಲ್ಲಾ ಮಾಡಿಕೊಡುತ್ತಾರೆ, ಮಾಡಿಸಿಕೊಳ್ಳಿ. ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ. ನನಗೇನಿಲ್ಲ ನಾನೇನಿದ್ದರೂ ನೇರ. ನಾನೇನು ಗೂಟ ಹೊಡೆದುಕೊಂಡು ಇಲ್ಲೇ ಕೂರಬೇಕಿಲ್ಲ ಎಂದು ಹೇಳಿದ್ದರು. ಈಗ ಮತ್ತೆ ರೇವಣ್ಣ ವ್ಯಂಗ್ಯವಾಡಿದ್ದು ಹಾಸನ ಮಂಡ್ಯದ ಜನರಿಗೆ ಬೇಸರ ತಂದಿದೆ.

ಮಾಹಿತಿ ಕೃಪೆ: Public tv