ಮಂಡ್ಯದ ಸೊಸೆ ಸುಮಲತಾರವರಿಗೆ ಅವಮಾನ ಮಾಡಿದ ರೇವಣ್ಣ; ಇತ್ತ ಕಾಂಗ್ರೆಸ್-ನಿಂದಲೂ ಟಿಕೆಟ್ ಸಿಗದ ಸುಮಲತಾ ಬಿ.ಜೆ.ಪಿ. ಗೆ ಸೇರಬೇಕಾ??

0
250

ಜೆಡಿಎಸ್ ಕುಟುಂಬದ ಹಿರಿಯ ಕುಡಿ ಮತ್ತು ಲೋಕೋಪಯೋಗಿ ಸಚಿವ ರೇವಣ್ಣ ತಮ್ಮ ರಾಜಕೀಯ ಸೊಕ್ಕು ತೋರಿಸಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ನಿನ್ನೆ ಮಾಧ್ಯಮಯೊಂದರ ಸಂಧರ್ಶನದಲ್ಲಿ ಸುಮಲತಾ ಅವರ ರಾಜಕೀಯದ ಬಗ್ಗೆ ಹಗುರವಾಗಿ ಮಾತನಾಡಿದ ಅವರು ನಮಗೆ ಸುಮಲತಾ ಏನು ಅಲ್ಲ ಗಂಡ ಸತ್ತು ಇನ್ನೂ ಎರಡು-ಮೂರು ತಿಂಗಳು ಆಗಿಲ್ಲ ಆಗಲೇ ರಾಜಕೀಯಕ್ಕೆ ಬಂದರೆ ನಡೆಯುತ್ತಾ? ಅವರಿಗೆ ರಾಜಕೀಯ ಬೇಕಿತ್ತಾ? ಎಂದು ಹೇಳಿಕೆ ನೀಡಿದ್ದಾರೆ. ಅದರಲ್ಲಿ ಮಹಿಳೆಯ ದಿನವಾದ ನಿನ್ನೆ ಈ ಮಾತನ್ನು ಆಡಿದ್ದು ರಾಜ್ಯದಲ್ಲಿ ರೇವಣ್ಣ ವಿರುದ್ದ ಮಾತುಗಳು ಕೇಳಿಬರುತ್ತಿವೆ.

ಹೌದು ಕೊಡಗಿನ ಜಲ ಪ್ರಳಯದಲ್ಲಿ ನಾಯಿಗೆ ಬಿಸ್ಕತ್ ಎಸೆಯಿವ ರೀತಿಯಲ್ಲಿ ಜನರಿಗೆ ಬಿಸ್ಕತ್ ಎಸೆದು ಟ್ರೋಲ್ ಆಗಿದ್ದ ರೇವಣ್ಣ ನಾಯಿಯಂತೆ ರಾಜ್ಯದ ಜನರನ್ನು ನೋಡುತ್ತಿದ್ದಾರೆ. ಅವರಿಗೆ ಹಣದ, ಮತ್ತು ರಾಜಕೀಯ ಅಮಲು ನೆತ್ತಿಗೇರಿ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಇದು ಅಂತ್ಯದ ಮೊದಲ ಹಂತ ಎಂದು ಟ್ವೀಟ್-ನಲ್ಲಿ ಹಲವು ಮಾತುಗಳು ಕೇಳಿದವು ಅದರಂತೆ ಮತ್ತೊಂದು ವಿವಾಧಕ್ಕೆ ಗುರಿಯಾಗಿರುವ ಸಚಿವ ರೇವಣ್ಣ ತಮ್ಮನ ಮಗನ ರಾಜಕೀಯ ಪ್ರವೇಶಕ್ಕೆ ಅಡ್ಡವಾಗಿರುವ ಸುಮಲತಾ ವಿರುದ್ಧ ರೇವಣ್ಣ ನೀಡಿರುವ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ ಜನರ ಪ್ರೀತಿಗೆ ಮಣಿದು, ಅವರ ಋಣ ತೀರಿಸಲು ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಸುಮಲತಾ ಮುಂದಾಗಿದ್ದಾರೆ. ಅವರ ರಾಜಕೀಯ ಪ್ರವೇಶ ಕುರಿತು ಕಿಡಿಕಾರಿರುವ ಸಚಿವ ರೇವಣ್ಣನ ಹೇಳಿಕೆಗೆಯ ಬಗ್ಗೆ ಟ್ವೀಟ್ ನಲ್ಲಿ ಬಂದಿರುವ ಪ್ರತಿಕ್ರಿಯೆ ಹೇಗಿದೆ ನೋಡಿ.

ಟ್ವೀಟ್ ನಲ್ಲಿ ರೇವಣ್ಣನಿಗೆ ನೀತಿಯ ಪಾಠ?

ರೇವಣ್ಣ ಸುಮಲತಾ ವಿರುದ್ಧ ಲಘು ಹೇಳಿಕೆ ನೀಡಿ ಅಂಬರೀಷ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಗುರವಾಗಿ ಮಾತನಾಡಿದ ರೇವಣ್ಣನಿಗೆ ಮಹಿಳೆಯೊಬ್ಬರು ಟ್ವೀಟ್ ಮಾಡಿ. ನಾಲಿಗೆ ಹರಿ ಬಿಟ್ಟ ರೇವಣ್ಣ, ವಿಶ್ವ ಮಹಿಳಾ ದಿನವೇ ಒಂದು ಹೆಣ್ಣಿಗೆ ಅವಮಾನ ಮಾಡಿದ್ದಾರೆ, H d revanna is third grade politician, ಮಂಡ್ಯದ ಸ್ವಾಭಿಮಾನಿ ಮಹಿಳೆಯರೇ, ಇಲ್ಲೊಬ್ಬ ಮಂತ್ರಿ ಇದಾನೆ. ಅವನಿಗೆ ಅಧಿಕಾರದ ಅಹಂ ತಲೆಗೆ ಹತ್ತಿದೆ. ಇವತ್ತು ಮಂಡ್ಯದ ಸೊಸೆಗೆ ಅವಮಾನ ಮಾಡಿದ್ದಾನೆ. ಈ ಅವಮಾನಕ್ಕೆ ತಕ್ಕ ಬುದ್ದಿ ಕಲಿಸಿ. ಮಹಿಳೆಯರ ಶಕ್ತಿ ತೋರಿಸಿ, ರೀ ರೇವಣ್ಣ.. ಚುನಾವಣೆಗೆ ಮುಂಚೆ ನಿಮ್ಮ ತಮ್ಮ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧಿಸುವುದು ಅಂತ ಹೇಳಿದ್ರೂ. ಆ ಹೇಳಿಕೆ ಕೊಟ್ಟು 6 ತಿಂಗಳಾಗಿಲ್ಲ ಆಗ್ಲೇ ಮನೆ ಮಂದಿಗೆಲ್ಲ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಮನೆಯವರದ್ದೂ ನಾಲಿಗೇನಾ ಇಲ್ಲ ಎಕ್ಕಡನಾ?? ಮೊದಲು ಮಹಿಳೆಗೆ ಕೊಡಿ ಮರ್ಯಾದೆ ಕೊಡದವನು ನಾಯಿಗಿಂತ ಕೀಳು ಅರ್ಥ ಮಾಡಿಕೊಳ್ಳಿ.

ನಿಮ್ಮ ತಮ್ಮ ಎಚ್. ಡಿ ಕುಮಾರಸ್ವಾಮಿ ಅಂಬರೀಷ್ ನಿಧನರಾದಾಗ ಕುಟುಂಬ ಸದಸ್ಯರೇ ತೀರಿಕೊಂಡತೆ ಕಂಬನಿ ಮಿಡಿದಿದ್ದರು. ಆದರೆ, ಲೋಕಸಭೆ ಚುನಾವಣೆ ಸಂಬಂಧ ಸುಮಲತಾ ಅವರು ಸವಾಲು ಹಾಕಿರುವ ಕಾರಣ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದ್ದಾರೆ ಇದು ಸರಿನಾ? ಎಂದು ರೇವಣ್ಣನಿಗೆ ಚಳಿ ಬಿಡಿಸಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾಯಿತೋ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಯಿತೋ ಆಗ ಎಚ್ಚೆತ್ತ ಅವರು ತಮ್ಮ ಮಾತಿನಲ್ಲಿ ತಪ್ಪಲ್ಲ. ಈ ಕುರಿತು ಕ್ಷಮೆಯನ್ನು ಕೇಳುವುದಿಲ್ಲ ನಾನು ಹಿಂದೂ ಸಂಸ್ಕೃತಿ ಪ್ರಕಾರ ಮಾತಾಡಿದ್ದೇನೆ.ಗಂಡ ಸತ್ತು ಇಷ್ಟು ಬೇಗ ರಾಜಕಾರಣಕ್ಕೆ ಬರಬಾರದು. ಬೇರೆ ಉದ್ದೇಶದಿಂದ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರೇವಣ್ಣನ ಮಾತಿಗೆ ತಮ್ಮನ ಪ್ರತಿಕ್ರಿಯೆ?

ಎಚ್ ಡಿ ರೇವಣ್ಣ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಸಹೋದರ ಹಾಗೂ ಸಿಎಂ ಎಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಸುಮಲತಾ ಅಂಬರೀಶ್​ ವಿರುದ್ಧ ಸಚಿವ ಎಚ್​.ಡಿ.ರೇವಣ್ಣ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ. ಮಂಡ್ಯದ ವಿಚಾರವನ್ನು ನನಗೆ ಬಿಟ್ಟುಬಿಡಿ. ರೇವಣ್ಣ ಹೇಳಿಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ, ನಮ್ಮ ನಾಯಕರುಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸುಮಲತಾ ಬಿ.ಜೆ.ಪಿ. ಗೆ ಸೇರಬೇಕಾ??

ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟ ಆಗಿದೆ , ಕಾಂಗ್ರೆಸ್ ಇಂದ ಸುಮಲತಾ ಅವರಿಗೆ ಟಿಕೇಟ್ ಇಲ್ಲ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಅದರಂತೆ ನಿಖಿಲ್ ಅವರನ್ನು ಸಜ್ಜುಗೊಲಿಸಿದ್ದು ಸುಮಲತಾ ಸ್ಪರ್ಧೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಈ ನಡುವೆ ಸುಮಲತಾ ಅವರಿಗೆ ಬಿಜೆಪಿಯ ಬೆಂಬಲ ವಿದೆ ಎನ್ನುವುದು ತಿಳಿದಿದೆ ಆದರೆ ಇದ್ದಕೆ ಉತ್ತರಿದ ಸುಮಲತಾ ಕಾಂಗ್ರೆಸ್ ಟಿಕೆಟ್ ಗಾಗಿ ಕೊನೆ ಕ್ಷಣದವರೆಗೂ ಕಾಯುತ್ತೇನೆ. ಎನ್ನುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಟಿಕೇಟ್ ನೀಡದೆ ಬಿಜೆಪಿಯವರು ಅವಕಾಶ ಕೊಟ್ಟರೆ ಸುಮಲತಾ ಬಿಜೆಪಿ ಸೇರಬೇಕೆ ಎನ್ನುವುದು ಪ್ರಶ್ನೆಯಾಗಿದೆ.

Also read: ಆಂಬುಲೆನ್ಸ್ ಅಲ್ಲ, ಅಂಬಾಸಿಡರ್ ಕಾರೇ ಅಂಬುಲೆನ್ಸ್ ಮಾಡಿಕೊಂಡು 45 ವರ್ಷಗಳಿಂದ ಉಚಿತವಾಗಿ, ಸಾವಿರಾರು ಜನರ ಪ್ರಾಣ ಉಳಿಸಿದ ವ್ಯಕ್ತಿಗೆ ಏನ್ ಅಂತ ಕರೆಯಬೇಕು??