ದುಬಾರಿ ಆಪಲ್ ಐಫೋನ್ ಮತ್ತು ಐಪ್ಯಾಡ್ ಕೊಂಡುಕೊಳ್ಳಲು ಕಿಡ್ನಿ ಮಾರಿದ್ದ ವ್ಯಕ್ತಿ ಈಗ ಹಾಸಿಗೆ ಹಿಡಿರುವುದನ್ನು ನೋಡಿ, ಮನುಷ್ಯನ ಹುಚ್ಚಾಟಕ್ಕೆ ಪಾರೇ ಇಲ್ಲ ಅಂತೀರ!!

0
362

ಈಗಿನ ಯುವಪೀಳಿಗೆನೆ ಹೀಗೆ ಐಷಾರಾಮಿ ಜೀವನ ನಡೆಸಲು ಏನೆಲ್ಲಾ ಮಾಡುತ್ತಾರೆ ಅಂತ ಮಾಧ್ಯಮಗಳಲ್ಲಿ ತೋರಿಸುತ್ತಾರೆ. ಬರಿ ಮದ್ಯ ಕುಡಿಯಲು ಇಲ್ಲ ವಾಹನ, ಮೊಬೈಲ್ ಖರೀದಿಸಲು ಕಳ್ಳತನ, ಕೊಲೆ, ಸುಲಿಗೆ ಮಾಡುವುದನ್ನು ನೋಡಿದ್ದೀರ. ಆದರೆ ಇಲ್ಲೊಬ್ಬ ಆಸಾಮಿ apple ಮೊಬೈಲ್ ಕೊಳ್ಳಲು ಹಣವಿಲ್ಲದಾಗ ತನ್ನ ಕಿಡ್ನಿಯನ್ನೇ ಮಾರಿ ಮೊಬೈಲ್ ತೆಗೆದುಕೊಂಡ ವ್ಯಕ್ತಿಯ ಬಗ್ಗೆ ಕೇಳಿದರೆ ಜನರು ದಾವಂತದ ಜೀವನಕ್ಕೆ ಎಷ್ಟೊಂದು ಮಾರುಹೋಗಿದ್ದಾರೆ ಎಂದು ತಿಳಿಯುತ್ತೆ.

Also read: ಹಿಂದಿ ಬರೋದಿಲ್ಲ ಅನ್ನೋ ಒಂದೇ ಕಾರಣಕ್ಕೆ ಇಮಿಗ್ರೇಷನ್ ಅಧಿಕಾರಿ ನಿಂದಿಸಿರೋ ರೀತಿ ಎಷ್ಟು ಸರಿ?? ಹಿಂದಿಯೇತರರು ಭಾರತೀಯರಲ್ಲವೇ??

ಹೌದು ಹಣವಿರುವ ವ್ಯಕ್ತಿಗಳು ಮಜಾ ಮಾಡುವ ರೀತಿಯಲ್ಲಿ ಬಡ ಕುಟುಂಬದ ಯುವಕರು ನಾವೇನು ಕಡಿಮೆಯಿಲ್ಲ ಅನ್ನೋ ರೀತಿಯಲ್ಲಿ ತಂದೆ ತಾಯಿಗಳಿಗೆ ತೊಂದರೆ ನೀಡಿ, ಅಪರಾಧದ ಮಾರ್ಗದ ಮೂಲಕ ಮೊಬೈಲ್ ಖರೀದಿಸುತ್ತಾರೆ. ಇದು ಸಾಧ್ಯವಾಗದಾಗ ಚೀನಾದ ಹುಡುಗನೊಬ್ಬ ತನ್ನ ಕಿಡ್ನಿಮಾರಿ appale iphone ತೆಗೆದುಕೊಂಡ ಪರಿಣಾಮವಾಗಿ ಸಾವಿನ ಅಂಚಿನಲ್ಲಿ ಜೀವನ ನಡೆಸುತ್ತಿದ್ದಾನೆ.

ಏನಿದು ಐಫೋನ್ ಸುದ್ದಿ?

2011ರಲ್ಲಿ ಚೀನಾದ ಕ್ಸಿಯೋ ವಾಂಗ್ ಎಂಬ 17 ವರ್ಷದ ಬಾಲಕ ಐ ಫೋನ್ 4 ಕೊಂಡು ಕೊಳ್ಳುವ ಹಠಕ್ಕೆ ಬಿದ್ದಿದ್ದ. ಆದರೆ ದುಬಾರಿ ಬೆಲೆಯ ಮೊಬೈಲ್ ಕೊಡಿಸುವಷ್ಟು ಹಣ ತಂದೆ-ತಾಯಿ ಬಳಿ ಇರಲಿಲ್ಲ. ಅದಕ್ಕಾಗಿ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ತನ್ನ ಕಿಡ್ನಿಯನ್ನೇ ಮಾರುವ ಡೀಲ್ ಮಾಡಿಕೊಂಡ. ಆಗ ಐ ಫೋನ್ 4 ಬೆಲೆ 49,758.32 ($699) ಇತ್ತು. ವಾಂಗ್ ಸುಮಾರು 2.23 ಲಕ್ಷ ($3,200 ) ಕ್ಕೆ ತನ್ನ ಒಂದು ಕಿಡ್ನಿಮಾರಿ ಮೊಬೈಲ್ ಕೊಂಡುಕೊಳ್ಳುವ ಕನಸನ್ನು ನನಸಾಗಿಸಿಕೊಂಡ. ಈ ನಿರ್ಧಾರ ಮಾಡಿದ ನಂತರ ಅವನಿಗೆ ಭೂಗತ ಆಸ್ಪತ್ರೆಯಲ್ಲಿ ಆತನ ಶಸ್ತ್ರಚಿಕಿತ್ಸೆ ನಡೆಯಿತು. ಒಂದು ವಾರ ವಿಶ್ರಾಂತಿ ತೆಗೆದುಕೊಂಡ ವಾಂಗ್ ನನಗೆ ಯಾವುದೇ ತೊಂದರೆ ಇಲ್ಲವೆಂದು ಮೊಬೈಲ್ ಖರೀದಿಸಿದ ಸಂಭ್ರಮದಲ್ಲಿ ಹೊರಟುಹೋದ.

ಆದರೆ ಬಿಕಾಬಿಟ್ಟಿ ಕೈಗೊಳ್ಳಲಾಗಿದ್ದ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ಜಾಗರೂಕತೆಯನ್ನು ತೆಗೆದುಕೊಂಡಿರಲಿಲ್ಲ. ಆಪರೇಶನ್ ಥಿಯೇಟರ್‌ನಲ್ಲಿ ಸ್ವಚ್ಚತೆ ಕಾದುಕೊಂಡಿರಲಿಲ್ಲ. ಹೀಗಾಗಿ ಯುವಕನ ಇನ್ನೊಂದು ಮೂತ್ರ ಪಿಂಡಕ್ಕೆ ಸೋಂಕು ತಗುಲಿತು. ನಂತರ ಅವನು ತೀವ್ರ ಅನಾರೋಗ್ಯದಿಂದ ಬಳುತ ಹಾಸಿಗೆ ಹಿಡಿದ. ಈ ವಿಷಯವು ಪಾಲಕರಿಗೆ ತಿಳಿಯಿತು ಪೋಷಕರಿಗೆ ಮಗ ಕಿಡ್ನಿ ಮಾರಿದ ವಿಷಯ ಕೇಳಿ ಆಘಾತವಾಯಿತು. ಮತ್ತೀಗ ಆತನಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈಗ ಈ ಯುವಕನಿಗೆ 24 ವರ್ಷವಾಗಿದೆ. ಮೊಬೈಲ್ ಕೂಡ ಹಳೆಯದು ಆಗಿದೆ. ಸದ್ಯ ಮಗನ ಪ್ರಾಣ ಉಳಿಸಲು ಬಡ ತಂದೆ ತಾಯಿಗಳು ಹರಸಾಹಸ ಮಾಡುತ್ತಿದ್ದಾರೆ.

ಇದಕ್ಕೆ ಪರಿಹಾರವಾಗಿ ಕ್ಸಿಯೋ ವಾಂಗ್ ಮತ್ತು ಅವನ ಪಾಲಕರು ಶಸ್ತ್ರಚಿಕಿತ್ಸೆ ಮಾಡಿದ ಆಸ್ಪತ್ರೆಯಿಂದ ನಗದು ರೂಪದಲ್ಲಿ ಪರಿಹಾರ ಪಡೆದುಕೊಳ್ಳಬಹುದು. ಆದರೆ ಇನ್ನೊಂದು ಕಿಡ್ನಿಯನ್ನು ಪಡೆಯಲು ಸಾಧ್ಯವಿಲ್ಲ. ಇರುವ ಒಂದು ಕಿಡ್ನಿಗೂ ಸೋಂಕು ಅಂಟಿದೆ. ಆದಕಾರಣ ಜೀವನ ಪೂರ್ತಿ ಆಸ್ಪತ್ರೆ ಅಲೆಯುವ ಪರಿಸ್ಥಿತಿ ಬಂದಿದೆ ಮತ್ತು ಅವನು ಬದುಕುಳಿಯುವ ಸಂಶಯ ಕಾಡುತ್ತಿದೆ. ಇಂತಹ ಹುಚ್ಚು ಬಯಕೆಯ ಬಗ್ಗೆ ಯುವಕರು ಜಾಗೃತರಾಗಬೇಕು. ದೇಹಾರೋಗ್ಯ ಸರಿ ಇದ್ದರೆ ಮುಂದೊಂದು ದಿನ ಏನ್ ಬೇಕಾದರು ಖರೀದಿಸಬಹುದು ಎನ್ನುವುದನ್ನು ತಿಳಿಯಬೇಕು.