ಅಬ್ಬಾ, ಜಗತ್ತಿನ ಪ್ರಪ್ರಥಮ ತಲೆ ಕಸಿ ನೆಡೆಯುತ್ತೆ…

0
1468

ಎಲ್ಲರಿಗು ಗೊತ್ತಿರುವ ಹಾಗೆ ಗಣಪತಿಗೆ ತನ್ನ ತಂದೆಯಿಂದಲೇ ಆನೆ ರುಂಡ ಮರು ಜೋಡಣೆಗೊಂಡು ಜೀವ ನೀಡಿದ ಕತೆ ನೀವೆಲ್ಲ ಕೇಳಿರುತ್ತೀರಿ, ಅದೇ ರೀತಿ ರಷ್ಯಾದ ವಿಜ್ಞಾನಿಗಳು ಆಧುನಿಕ ಯುಗದಲ್ಲೊಂದು ಪವಾಡವನ್ನು ಮಾಡಲು ಹೊರಟಿದ್ದಾರೆ. ಜಗತ್ತಿನಲ್ಲೇ ಮೊದಲ ತಲೆ ಕಸಿ ಚಿಕಿತ್ಸೆ ಇದಾಗಲಿದೆ ಎಂದು ಹೇಳಲಾಗಿದೆ. ಇಬ್ಬರು ಪ್ರಖ್ಯಾತ ವೈದ್ಯರು ಈ ಶಸ್ತ್ರಚಿಕಿತ್ಸೆಯನ್ನು ಮುಂದಿನ ವರ್ಷದ ಆರಂಭದಲ್ಲಿ ನಿರ್ವಹಿಸಲಿದ್ದಾರೆ, ಅದಕ್ಕಾಗಿ ಅಲ್ಲಿನ ಯುವಕನೊಬ್ಬ ತನ್ನ ತಲೆ ಕಸಿ ಮಾಡಿಸಿಕೊಳ್ಳುವ ಚಿಕಿತ್ಸೆಗೊಳಪಡಲು ಸ್ವಯಂ ಒಪ್ಪಿಗೆಯನ್ನೂ ನೀಡಿದ್ದಾನೆ ಎಂದು ‘ಗಿಝ್ಮೊಡೊ’ ಎಂಬ ವೆಬ್ ವಾಹಿನಿ ವರದಿ ಮಾಡಿದೆ.

head transplant

ಇಟಾಲಿಯನ್ ನರತಜ್ಞ ಡಾ. ಸೆರಿಗೊ ಕನಾವೆರೊ ಈ ಶಸ್ತ್ರ ಚಿಕಿತ್ಸೆ ಯೋಜನೆಯ ರೂವಾರಿಯಾಗಿದ್ದಾರೆ. ೨೦೧೩ರಿಂದ ತಲೆಯ ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ಅವರು ಸಂಶೋಧನೆ ನಡೆಸಿದ್ದಾರೆ. 2015ರಲ್ಲಿ ಡಾ. ಕನಾವೆರೊ ಮಂಗವೊಂದಕ್ಕೆ ತಲೆಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಮಂಗ ಸುಮಾರು 20 ಗಂಟೆಗಳ ವರೆಗೆ ಬದುಕಿತ್ತು ಎನ್ನಲಾಗಿದೆ. ಮಂಗನ ತಲೆ ಶಸ್ತ್ರ ಚಿಕಿತ್ಸೆ ನಡೆಸಿರುವುದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಂತಾರಾಷ್ಟ್ರೀಯ ವೈದ್ಯರ ತಂಡ ಪ್ರತಿಪಾದಿಸಿದೆ.

ರಷ್ಯಾದಲ್ಲಿ ಶೈಕ್ಷಣಿಕ ಸಾಫ್ಟ್ವೇರ್ ಕಂಪನಿ ನಡೆಸುತ್ತಿರುವ 31ರ ಹರೆಯದ ಯುವಕ ವ್ಯಾಲೆರಿ ಸ್ಪಿರಿಡೊನೊವ್ ಎಂಬುವರು ವೆರ್ಡ್ನಿಂಗ್-ಹಾಫ್ಮನ್ನ್ (ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಆನುವಂಶಿಕವಾದುದು ಮತ್ತು ತೀರಾ ಅಪಾಯಕಾರಿಯಾದುದು. ಅದು ನರಕಟ್ಟುಗಳಿಗೆ ಹಾನಿಯನ್ನುಂಟು ಮಾಡಿ, ನರತಂತುಗಳ ನಿರ್ವಹಣಾ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ. ಮೆದುಳು ಮತ್ತು ಬೆನ್ನು ಮೂಳೆಗೆ ಸಂಪರ್ಕವಿರುವ ಈ ನರತಂತುಗಳು ದೇಹದ ಚಲನೆಗೆ ಅತ್ಯಂತ ಅಗತ್ಯವಾಗಿವೆ. ಹೀಗಾಗಿ ಸ್ಪಿರಿಡೊನೊವ್ಗೆ ಈ ಕಾಯಿಲೆಯಿಂದ ಮುಕ್ತನಾಗಲು ತಲೆಯ ಶಸ್ತ್ರಕ್ರಿಯೆಯೊಂದೇ ಅಂತಿಮ ಮಾರ್ಗವಿರುವುದು.

monkey-head-transplant2

”ಕಾಯಿಲೆಯಿರುವ ಭಾಗವನ್ನು ತೆಗೆದು ಹಾಕಲಾಗುತ್ತದೆ. ಆದರೆ ನನ್ನ ಈ ಪ್ರಕರಣದಲ್ಲಿ ತಲೆಯೇ ಅತ್ಯಂತ ಪ್ರಮುಖವಾದುದು. ನಾನು ಗುಣಮುಖನಾಗಲು ಇದನ್ನು ಹೊರತುಪಡಿಸಿ ಬೇರೆ ಮಾರ್ಗಗಳಿಲ್ಲ” ಎಂದು ಸ್ಪಿರಿಡೊನೊವ್ ಹೇಳಿದ್ದಾರೆ. ಈ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ರೂ.67 ಕೋಟಿಯಿಂದ ರೂ. 671 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.

maxresdefault (2)

ಮ್ಯಾಕ್‌ಅರ್ಥೂರ್ ಫೌಂಡೇಶನ್ ಇದಕ್ಕೆ ಹಣಕಾಸು ನೆರವು ಪೂರೈಸಲಿದೆ. ಅಷ್ಟೊಂದು ಹಣ ಪೂರೈಸಲು ಸಾಧ್ಯವಾಗದಿದ್ದಲ್ಲಿ, ಖ್ಯಾತ ಉದ್ಯಮಿ ಮಾರ್ಕ್ ಝುಕರ್ಬರ್ಗ್ರ ಸಹಾಯ ಯಾಚಿಸುವುದಾಗಿ ಸ್ಪಿರಿಡೊನೊವ್ ಹೇಳಿದ್ದಾರೆ.

source : suvarna TV