ಹುಣಸೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?

0
1087

ಹುಣಸೆ ಕಪ್ಪಾದ್ರೂ ಅದ್ರ ಆರೋಗ್ಯಕರ ಗುಣಗಳಿಗೆ ಮುಪ್ಪು ಇಲ್ಲ….
ಆರೋಗ್ಯದ ದೃಷ್ಟಿಯಿಂದ ಹೊಸ ಹುಣಸೇಹಣ್ಣಿಗಿಂತ ಹಳೆ ಹುಣಸೆ ಹಣ್ಣು ಉತ್ತಮ.ಹುಣಸೆ ಹಣ್ಣಿನ ರಸ ವಿರೇಚಕ ಗುಣವುಳ್ಳದ್ದು.

  • ಕಾಮಾಲೆ, ತಲೆಸುತ್ತುವುದು, ವಾಂತಿಯಾಗುವಿಕೆ ಇದ್ದಲ್ಲಿ ಗೋಲಿ ಗಾತ್ರದ ಹುಣಸೆ ಹಣ್ಣಿಗೆ ಸ್ವಲ್ಪ ಬೆಲ್ಲ ಜೀರಿಗೆ ಬೆರೆಸಿ ಕುಟ್ಟಿ ದಿನಕ್ಕೆ ಮೂರು ಬಾರಿ ಸೇವಿಸಿದ್ದಲ್ಲಿ ಗುಣವಾಗುವುದು.

  • ವಾಂತಿ, ಭೇದಿ ಇರುವ ಸಂದರ್ಭದಲ್ಲಿ ಹುಣಸೆ ಹಣ್ಣು ,ಪುದಿನ,ಮೆಣಸು, ಹುರಿದ ಏಲಕ್ಕಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದು ನುಣ್ಣಗೆ ಅರೆದು ಸ್ವಲ್ಪ ಉಪ್ಪು ಬೆರೆಸಿ ಸೇವಿಸಿದ್ದಲ್ಲಿ ಬಹಳ ಬೇಗ ವಾಸಿಯಾಗುವುದು.

  • ಆಮಶಂಕೆ, ಅತಿಸಾರ ಇರುವವರು ಒಂದು ಟೀ ಚಮಚ ಹುಣಸೆ ಗೊಜ್ಜನ್ನು ಒಂದು ಬಟ್ಟಲು ಮಜ್ಜಿಗೆಗೆ ಬೆರೆಸಿ ಬಾಳೆಹಣ್ಣಿನ ಜೊತೆ ಸೇವಿಸಿದ್ದಲ್ಲಿ ಶೀಘ್ರ ಗುಣಮುಖರಾಗುವರು.

 

  • ಉಷ್ಣದ ತಲೆನೋವಿಗೆ ಹುಣಸೆಹಣ್ಣಿನ ಸಕ್ಕರೆ ಪಾನಕ ಸೇವಿಸಬೇಕು.

  • ಹುಣಸೆ  ಹಣ್ಣಿನ ರಸವನ್ನು ಕಿವುಚಿ ಕುದಿಸಿ ಅದಕ್ಕೆ ಚಿಟಿಕೆ ಅಡುಗೆ ಸೋಡಾ ಮತ್ತು ಬೆಲ್ಲವನ್ನು ಬೆರೆಸಿ ಉಳುಕಿರುವ ಜಾಗಕ್ಕೆ ಲೇಪಿಸಿದರೆ ನೋವು ಮತ್ತು ಊತ ಇಳಿಯುವುದು.

  • ಮೂತ್ರ ಕಟ್ಟಿದ್ದಲ್ಲಿ ಎರಡು ಚಮಚ ಹುಣಸೆ ಸೊಪ್ಪಿನ ರಸವನ್ನು ಒಂದು ಬಟ್ಟಲು ಮೊಸರಿನಲ್ಲಿ ಕದಡಿ ದಿನಕ್ಕೆ ಒಂದರಂತೆ ನಾಲ್ಕೈದು ದಿನ ಸೇವಿಸಬೇಕು.

  • ಪಿತ್ತದೋಷ.ಕಾಮಾಲೆ, ಮೂಲವ್ಯಾಧಿ ಇರುವ ರೋಗಿಗಳು ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿ ಬೇಯಿಸಿ ತಿನ್ನುವುದರಿಂದ ಗುಣವಾಗುವುದು.

  •  ಬಾಯಿಹುಣ್ಣಿದ್ದರೆ ಹುಣಸೆ ಎಲೆಗಳನ್ನು ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು.

  • ಹುಣಸೆ ಎಲೆಗಳನ್ನು ಅರೆದು ಪಟ್ಟು ಹಾಕುವುದರಿಂದ ಕಜ್ಜಿ ಗುಣವಾಗುತ್ತದೆ.

 

  • ಹುಳುಕಡ್ಡಿ, ಇಸುಬು, ಗಜಕರ್ಣ,ನಾವೇ, ದದ್ದು ಮುಂತಾದ ಚರ್ಮ ರೋಗಗಳಿಗೆ ಹುಣಸೆ ಬೀಜವನ್ನು ನಿಂಬೆರಸ/ ಗೋಮೂತ್ರದಲ್ಲಿ ತೇದು ಹಚ್ಚುವುದರಿಂದ ಶಮನವಾಗುತ್ತದೆ.