ಪುದಿನ ಸೊಪ್ಪು ಸೇವನೆಯಿಂದ ಈ ಏಳು ಲಾಭಗಳಿವೆ ನೋಡಿ ನೀವು ಬಳಸಿ..!

0
1510

ಪುದಿನ ಸೊಪ್ಪು ಸೇವನೆಯಿಂದ ಹಲವು ಅರೋಗ್ಯ ವೃದ್ಧಿ ಮಾಡಿಕೊಳ್ಳಬಹುದು ಮತ್ತು ನಮ್ಮ ಕೆಲವೊಂದು ಸಮಸ್ಯೆಗಳನ್ನು ಹೋಗಲಾಡಿಸಬಹುದು. ಪುದಿನ ನಿಮಗ್ಗೆ ಯಾವೆಲ್ಲ ಲಾಭಗಳನ್ನು ನೀಡಲಿದೆ ಅನ್ನೋದು ಇಲ್ಲಿದೆ ನೋಡಿ.

ಅಲರ್ಜಿ:
ಕೆಲವರು ಅಲರ್ಜಿಗಳಿ೦ದ ಬಳಲುತ್ತಿರುತ್ತಾರೆ. ಕೆಲಬಗೆಯ ಅಲರ್ಜಿಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಪುದಿನ ಸೊಪ್ಪಿನ ಸಾರವು ಅತ್ಯುತ್ತಮವಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಲರ್ಜಿ ಆದ ಜಗದಲ್ಲಿ ಇದರ ರಸವನ್ನು ಲೇಪಿಸಿ.

source:HealthSetu

ಮೊಡವೆಗಳ ನಿವಾರಣೆಗಾಗಿ:
ನಿಮ್ಮ ಮುಖದಲ್ಲಿ ಮೂಡುವ ಮೊಡವೆಗಳ ನಿವಾರಣೆಯನ್ನು ಈ ಪುದಿನ ಮಾಡುತ್ತದೆ. ಪುದಿನ ಎಲೆಗಳನ್ನು ರುಬ್ಬಿಕೊಂಡು ಆ ರುಬ್ಬಿದ ರಸವನ್ನು ನಿಮ್ಮ ಮೊಡವೆ ಗುಳ್ಳೆಗಳ ಮೇಲೆ ಲೇಪಿಸಿ ಇದರಿಂದ ನಿಮ್ಮ ಮೊಡವೆಗಳು ಮಾಯವಾಗುತ್ತವೆ.
ಮತ್ತು ಸೊಳ್ಳೆ ಕೀಟಗಳು ಕಚ್ಚಿದ ಜಾಗಕ್ಕೆ ಇದನ್ನು ಲೇಪಿಸಿದರು ಯಾವುದೇ ಸೋಂಕು ಬರುವುದಿಲ್ಲ.

ಬುದ್ದಿ ಚುರುಕು ಮಾಡುತ್ತೆ:
ಕೆಲವೊ೦ದು ಅಧ್ಯಯನಗಳು ಸಲಹೆ ಮಾಡಿರುವ ಪ್ರಕಾರ, ಪುದಿನಾವು ಜಾಗೃತಿಯನ್ನೂ ಹಾಗೂ ಇತರ ಗ್ರಹಿಕೆಗೆ ಸ೦ಬ೦ಧಿಸಿದ ಚಟುವಟಿಕೆಗಳನ್ನೂ ಉನ್ನತಮಟ್ಟಕ್ಕೇರಿಸಬಲ್ಲದು. ಪುದಿನಾದ ಸಾರವುಳ್ಳ ಮಿ೦ಟ್ ಗಳನ್ನು ಜಗಿಯುವವರು ಹೆಚ್ಚು ಚುರುಕಾಗಿದ್ದು, ಕ್ರಿಯಾಶೀಲರಾಗಿರುವುದು ಕ೦ಡುಬ೦ದಿದೆ.

ಬಾಯಿಯ ಆರೋಗ್ಯಕ್ಕಾಗಿ:
ಪುದಿನಾವು ಬಾಯಿಯ ಆರೋಗ್ಯಕ್ಕೆ ಹಿತಕರವಾಗಿದೆ ಹಾಗೂ ಈ ಕಾರಣಕ್ಕಾಗಿಯೇ ಪುದಿನಾವನ್ನು ಉಸಿರಿನ ದುರ್ವಾಸನೆಯನ್ನು ನಿವಾರಿಸಲು ನೆರವಾಗುವ ಹೆಚ್ಚಿನ ಉತ್ಪನ್ನಗಳಲ್ಲಿ ಹಾಗೂ ಟೂತ್ ಪೇಸ್ಟ್ ಗಳಲ್ಲಿ ಬಳಸಿಕೊಳ್ಳುತ್ತಾರೆ.

ಶ್ವಾಸಕೋಶಗಳ ಶುಚಿಗೆ:
ನಿಮ್ಮ ಶ್ವಾಸಕೋಶಗಳನ್ನು ಶುಚಿಗೊಳಿಸಿಕೊಳ್ಳಲು ಪುದಿನಾವು ನೆರವಾಗಬಲ್ಲದು. ನಿಮ್ಮ ಗ೦ಟಲು ಅಥವಾ ಮೂಗು ಕಟ್ಟಿಕೊ೦ಡ೦ತಿದ್ದಲ್ಲಿ, ನೀವು ಪುದಿನಾವನ್ನು ಮನೆಮದ್ದಿನ ರೂಪದಲ್ಲಿ ಬಳಸಿ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ:
ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸಲು ಪುದಿನಾವು ಸಮರ್ಥವಾಗಿದೆ. ಒ೦ದು ವೇಳೆ ನೀವು ಕೆಲವೊ೦ದು ಅಜೀರ್ಣರೋಗಗಳಿ೦ದ ಬಳಲುತ್ತಿದ್ದಲ್ಲಿ. ಪುದಿನಾ ಸೊಪ್ಪನ್ನು ಸೇವಿಸಿದರೆ ಇದರಿಂದ ಮುಕ್ತಿ ಕಾಣಬಹುದು.

ವಾಕರಿಕೆಯನ್ನು ತಡೆಗಟ್ಟಲು:
ವಾಕರಿಕೆಯನ್ನು ದೂರಗೊಳಿಸಲು ಪುದಿನಾ ಎಲೆಗಳ ವಿಶಿಷ್ಟ ಪರಿಮಳವೇ ಸಾಕು. ನಿಮ್ಮ ಮನೆಯಲ್ಲಿ ಪುದಿನಾದ ಎಣ್ಣೆಯಿದ್ದಲ್ಲಿ, ವಾಕರಿಕೆಯನ್ನು ತಡೆಗಟ್ಟಲು ಅದನ್ನು ಬಳಸಿ ನಿಮ್ಮ ವಾಕರಿಕೆಯನ್ನು ತಡೆಗಟ್ಟಿ.