ಅಶ್ವಗಂಧದ ಆರೋಗ್ಯಕಾರಿ ಗುಣಗಳ ಬಗ್ಗೆ ಗೊತ್ತಾದ್ರೆ “ಸರ್ವ ರೋಗಕ್ಕೂ ಮದ್ದು ಹಿರೇಮದ್ದು” ಎಂಬ ನಾಣ್ನುಡಿ ಸತ್ಯ ಅನ್ಸುತ್ತೆ …

0
1816

ಆಂಟಿ ಏಜಿಂಗ್ ಕ್ರೀಮ್/ಲೋಷನ್/ ಪುಡಿಗಳನ್ನೆಲ್ಲ ಅಶ್ವಗಂಧದ ಮುಂದೆ ನಿವಾಳಿಸಿ ತೆಗೀಬೇಕು ಯಾಕೆ ಗೊತ್ತಾ?

ಅಶ್ವಗಂಧ/ ಹಿರೇಮದ್ದು ಎಂದು ಕರೆಯಲ್ಪಡುವ ಈ ಸಸ್ಯವು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆಯಾಗಿದೆ. ಇದರ ಎಲೆಗಳನ್ನು ಕೈಗಳಲ್ಲಿ ಉಜ್ಜಿ್ದಾರೆ ಕುದುರೆಯ ಮೂತ್ರದ ವಾಸನೆ ಬರುವುದರಿಂದ ಈ ಮೂಲಿಕೆಗೆ ಅಶ್ವಗಂಧ ಎಂಬ ಹೆಸರಿದೆ.ಇದರ ಎಲೆ, ಹಣ್ಣು, ಬೇರುಗಳನ್ನು ಚಿಕಿತ್ಸೆಯಲ್ಲಿ ಉಪಯೋಗಿಸುವವರು.ಇದರ ಬೇರಿನಲ್ಲಿ ಸೋಮ್ನಿಫೆರಸ್ ಎನ್ನುವ ಕ್ಷಾರವಿದ್ದು ನಿದ್ದೆ ಬರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿರೇಮದ್ದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಪುಷ್ಟಿ ಮತ್ತು ಕಾಂತಿಯನ್ನು ನೀಡುವುದರ ಜೊತೆಗೆ ನಿಶ್ಯಕ್ತಿಯನ್ನು ನೀಗಿಸಿ ಮುಪ್ಪನ್ನು ಹೋಗಲಾಡಿಸುವುದು.
ಈ ವನೌಷಧಿ ಸೇವನೆಯಿಂದ ಚಿತ್ತ ಚಂಚಲತೆ, ಉದ್ವೇಗ ದೂರವಾಗುವವು.ವೃದ್ದಾಪ್ಯದ ದೌರ್ಬಲ್ಯಗಳು ನೀಗಿ ಶಕ್ತಿ, ಸ್ಪೂರ್ತಿ ಮತ್ತು ಯೌವನವು ಲಭಿಸುವುದು.

೧) ಮಕ್ಕಳ ಮತ್ತು ವಯಸ್ಸಿನವರ ಶಕ್ತಿ ವರ್ಧನೆಗೆ:
೧೦೦ ಗ್ರಾಂ ಅಶ್ವಗಂಧದ ಬೇರನ್ನು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ ಒಣಗಿಸಿ ಪುಡಿ ಮಾಡಿ ಗಾಜಿನ ಭರಣಿಯಲ್ಲಿ ಶೇಖರಿಸುವುದು.ದಿನವೂ ೫ ಗ್ರಾಂ ಪುಡಿಗೆ ಸಮಪ್ರಮಾಣದ ಕಲ್ಲು ಸಕ್ಕರೆ ಬೆರೆಸಿ ಸೇವಿಸಿದ ನಂತರ ಹಾಲನ್ನು ಕುಡಿದ್ದಲ್ಲಿ ಶಕ್ತಿ ಮತ್ತು ಪುಷ್ಟಿ ವರ್ಧನೆಯಾಗುವುದು.

೨) ನೋವು ಮತ್ತು ಬಾವುಗಳ ನಿವಾರಣೆಗಾಗಿ:
ನೋವು ಮತ್ತು ಬಾವುಗಳಿದ್ದರೆ ಅಶ್ವಗಂಧದ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಬಾಗಕ್ಕೆ ಇಟ್ಟಲ್ಲಿ ಎಲ್ಲ ರೀತಿಯ ನೋವು ಬಾವುಗಳು ನಿವಾರಣೆಯಾಗುತ್ತದೆ.

೩) ಪ್ರಜ್ವಲ ದೃಷ್ಟಿಗೆ:
ಅಶ್ವಗಂಧದ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದಲ್ಲಿ ದೃಷ್ಟಿ ದೋಷಗಳು ನಿವಾರಣೆಯಾಗಿ ದೃಷ್ಟಿ ಪ್ರಜ್ವಲವಾಗುವುದು.

೪) ವೃದ್ದಾಪ್ಯದ ದೌರ್ಬಲ್ಯತೆ ನಿವಾರಣೆ ಮತ್ತು ಶಕ್ತಿಗೆ:
ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ ಶೋಧಿಸಿಟ್ಟುಕೊಳ್ಳಬೇಕು. ಪ್ರತಿ ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದು ಸಕ್ಕರೆ ಸೇರಿಸಿದ ಹಾಲನ್ನು ಕುಡಿದ್ದಲ್ಲಿ ವೃದ್ದಾಪ್ಯದ ತೊಂದರೆಗಳು ನಿವಾರಣೆಯಾಗುವುದು.

೫) ಸ್ತ್ರೀಯರ ಮುಟ್ಟಿನ ದೋಷದ ನಿವಾರಣೆಗೆ:
ಶುದ್ದಿ ಮಾಡಿದ ಅಶ್ವಗಂಧದ ಚೂರ್ಣ, ಲೋಧ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆಚೂರ್ಣ ಸಮಭಾಗ ಸೇರಿಸಿ ಹೊತ್ತಿಗೆ ಎರಡೂವರೆ ಗ್ರಾಂ ನಷ್ಟು ಚೂರ್ಣವನ್ನು ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲಿನೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದರೆ ಮುಟ್ಟಿನ ದೋಷಗಳು ನಿವಾರಣೆಯಾಗುವುದು

೬) ಗರ್ಭಧಾರಣೆಗೆ:
ಅಶ್ವಗಂಧದ ಚೂರ್ಣವನ್ನು ಹಾಲಿನೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದ್ದಲ್ಲಿ ದೋಷಗಳು ಕಡಿಮೆಯಾಗಿ ಸಂತಾನಾಭಿವೃದ್ಧಿಯಾಗುವುದು.

೭) ಬಂಜೆತನ ದೂರವಾಗಲು;
೨೫ ಗ್ರಾಂ ಅಶ್ವಗಂಧ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸಿ ಅಷ್ಟಾಂಗ ಕಷಾಯ ಮಾಡಿಟ್ಟುಕೊಳ್ಳುವುದು. ಮುಟ್ಟಿನ ೫ ದಿನದ ತರುವಾತ ೪ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ ತುಪ್ಪ ಬೆರೆಸಿ ಕ್ರಮವಾಗಿ ೩ ಮುಟ್ಟಿನಲ್ಲಿ ಮಾಡಿದ್ದಲ್ಲಿ ಬಂಜೆತನ ದೂರವಾಗುವುದು.

೮) ಜ್ವರದ ನಿವಾರಣೆಗೆ:
೩೦ ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ ೪೦ ಗ್ರಾಂ ಅಶ್ವಗಂಧದ ಚೂರ್ಣವನ್ನು ಬೆರೆಸಿ ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಜ್ವರವು ಕಡಿಮೆಯಾಗುತ್ತದೆ.

೯) ಗಂಡಸರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು:
ಅಶ್ವಗಂಧ, ವಿದಾರಿಕಾಂಡ, ನೆಗ್ಗಿಲು ಮತ್ತು ಕಾಮೆ ಬೀಜಗಳನ್ನು ಬೆರೆಸಿ ಚೂರ್ಣಮಾಡಿ ತಜ್ಞರ ಮೇಲ್ವಿಚಾರಣೆಯಲ್ಲಿ ಜೇನುತುಪ್ಪ ಬೆರೆಸಿ ೩ ತಿಂಗಳು ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಅಧಿಕವಾಗಿ ಮಕ್ಕಳಾಗುವವು.

೧೦) ಬೆನ್ನು ನೋವಿನ ನಿವಾರಣೆಗೆ:

  • ೧೦ ಗ್ರಾಂ ಅಶ್ವಗಂಧದ ಪುಡಿ ಮತ್ತುಇ ೧೦ ಗ್ರಾಂ ಕೆಂಪು ಕಲ್ಲು ಸಕ್ಕ್ರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ನೋವು ಶಮನವಾಗುವುದು.
  • ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗಕ್ಕೆ ದಿನಕ್ಕೆ ೩ ಬಾರಿ ಕಟ್ಟಿದ್ದಲ್ಲಿ ನೋವು ಕಡಿಮೆಯಾಗುವುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840