ದಿನನಿತ್ಯ ಬಳಸುವ ಸಬ್ಬಸಿಗೆ ಸೊಪ್ಪಿನಲ್ಲಿ ಅಡಗಿರುವ ೧೦ ಆರೋಗ್ಯಕರ ಲಾಭಗಳು…!

0
1803

ಸೊಪ್ಪುಗಳಲ್ಲಿ ವಿಭಿನ್ನವಾಗಿರುವ ಸಬ್ಬಸಿಗೆ ಅಥವಾ ಸಬ್ಬಕ್ಕಿ ಸೊಪ್ಪಿನ ಪ್ರತಿ ಭಾಗವೂ ಸುವಾಸನೆಯಿಂದ ಕೂಡಿರುತ್ತದೆ. ಸಾರು, ಪಲ್ಯ ಉಪ್ಪಿನಕಾಯಿಗಳಲ್ಲಿ ಸ್ವಾದ ಮತ್ತು ಸುವಾಸನೆಗಾಗಿ ಬಳಸುವ ಈ ಸೊಪ್ಪು ನಾನಾ ತರಹದ ಅಡುಗೆಗಳಿಗೂ ಬಳಕೆಯಾಗುತ್ತದೆ. ಬೀಜ ಗಳನ್ನು ವಿಶೇಷವಾಗಿ ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ.

ಸಬ್ಬಸಿಗೆ ಸೊಪ್ಪಿನಲ್ಲಿ ಅಡಗಿರುವ ಆರೋಗ್ಯಕರ ಗುಣಗಳು

1. ಈ ಸೊಪ್ಪನ್ನು ಬಳಸಿ ಮಾಡಿದ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುವುದು ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

source: kannadaaduge.blogspot.in

2. ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಮಕ್ಕಳು ಮತ್ತು ಬಾಣಂತಿಯರಿಗೆ ಉತ್ತಮ ಆಹಾರ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.

source: brooksidenursery.co.uk

3. ಸಬ್ಬಸಿಗೆ ಸೊಪ್ಪು ಪಚನಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಇವುಗಳಲ್ಲಿ ವಾತಾವರಣ ಉತ್ತೇಜಕ ಮತ್ತು ಮೂತ್ರೋತ್ಪಾದಕ ಗುಣಗಳಿವೆ. ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳಲ್ಲಿ ಇವುಗಳ ಬಳಕೆ ಹೆಚ್ಚು.

source: tvcook.ru

4. ಸಬ್ಬಕ್ಕಿ ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿಳಿಯನ್ನು ಗ್ರೈಪ್ ವಾಟರ್‌ನಲ್ಲಿ ಬಳಸಲಾಗುತ್ತದೆ. ವಾತ, ಶೂಲೆ, ವಾಕರಿಕೆ ಮತ್ತು ಬಿಕ್ಕಳಿಕೆಯಂತಹ ರೋಗಗಳಿಗೆ ಬಹು ಉಪಯುಕ್ತ.

source: Nuts.com

5. ಸಬ್ಬಸಿಗೆ ಸೊಪ್ಪನ ರಸಕ್ಕೆ ಜೇನು ಬೇರಸಿ ಕುಡಿದರೆ ಅಜೀರ್ಣ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ. ಹೊಟ್ಟೆನೋವು ಕಡಿಮೆಯಾಗುತ್ತದೆ.

source: glutenfreecat.com

6. ಸಬ್ಬಸಿಗೆ ಸೊಪ್ಪು ನರಗಳಿಗೆ ಶಕ್ತಿಯನ್ನು ನೀಡುತ್ತದೆ, ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ.

source: cache.bzi.ro

7. ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

8. ಯಾವುದೇ ಗಾಯಗಳಿಗೆ ಸಬ್ಬಸಿಗೆ ಸೊಪ್ಪಿನ ರಸ ಹಚ್ಚಿದರೆ ರಕ್ತ ಬೇಗ ನಿಲ್ಲುತ್ತದೆ. ಗಾಯ ಬಲುಬೇಗ ಒಣಗಿ ವಾಸಿಯಾಗುತ್ತದೆ.

source: TheHealthSite.com

9. ಸಬ್ಬಸಿಗೆ ಸೊಪ್ಪುನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು.

10. ಸೊಪ್ಪಿನಲ್ಲಿರುವ ಎಣ್ಣೆ ಅಂಶವು ಕಾರ್ವೋನ್ ಸಂಯುಕ್ತವನ್ನೊಳಗೊಂಡಿದೆ. ಮಧುಮೇಹಿಗಳಿಗಾಗಿ ಇದೊಂದು ಉತ್ತಮ ಸಿದ್ಧೌಷಧ.

source: organicfacts.net