ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಸೇವಿಸಿದರೆ ಈ ಹತ್ತು ಆರೋಗ್ಯ ಲಾಭಗಳನ್ನು ಪಡೆಯುತ್ತೀರ!!

0
4005

ಭಾರತೀಯರ ಆಚರಣೆ, ಉಡುಗೆ, ತೊಡುಗೆ, ಊಟದಲ್ಲಿ ಒಂದೊಂದು ನಂಬಿಕೆ ಇದೆ. ಊಟಕ್ಕೆ ಬಾಳೆ ಏಲೆ.. ಮೊದಲು ಈ ಆಹಾರ ತಿಂದ್ರೆ ಉತ್ತಮ. ವಾತಾವರಣಕ್ಕೆ ಅನುಸಾರವಾಗಿ ಆಹಾರ ಪದ್ಧತಿ ಇವೆ. ಹಾಗೇ ಊಟವಾದ ಬಳಿಕ ಮಜ್ಜಿಗೆಯನ್ನು ಕುಡಿಯದೇ ಇದ್ದರೆ ಊಟ ಪರಿಪೂರ್ಣ ಎನಿಸುವುದೇ ಇಲ್ಲ.

 • ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯ. ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ. ಹಲವಾರು ಔಷಧೀಯ ಗುಣಗಳಿವೆ.

 • ದೇಹದ ಆರೋಗ್ಯಕ್ಕೆ ಬೇಕಾದ ಖನಿಜಾಂಶವನ್ನು ಮಜ್ಜಿಗೆ ಹೊಂದಿದೆ. ವಿಟಾಮಿನ್​ ಬಿ 12 ಗ್ಲುಕೋಸನ್ನು ಸುಲಭವಾಗಿ ಜೀರ್ಣಿಸಿ ಶಕ್ತಿಯಾಗಿ ಪರಿವರ್ತಿಸುತ್ತದೆ. ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಪಾಸ್ಪರಸ್ ಅಂಶವು ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಪುಷ್ಟಿಯನ್ನು ನೀಡುತ್ತದೆ.
 • ಮಜ್ಜಿಗೆಗೆ ಶುಂಠಿ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ವಾಂತಿ ಉಪಶಮನವಾಗುತ್ತದೆ. ಸಕ್ಕರೆ ಖಾಯಿಲೆ ಇರುವವರಂತೂ ಪ್ರತಿದಿನ ಮಜ್ಜಿಗೆ ಕುಡಿದರೆ ಉತ್ತಮ. ಮಜ್ಜಿಗೆಗೆ ಎಷ್ಟೊಂದು ಶಕ್ತಿಯಿದೆ ನೋಡಿ..!

 • ಹೊಟ್ಟೆ ಉರಿ ನಿವಾರಣೆಗೆ ಮಜ್ಜಿಗೆ ಉಪಯೋಗ. ಇದನ್ನು ಸೇವನೆ ಮಾಡಿದರೆ, ನಿವಾರಣೆ ಆಗುತ್ತದೆ.
  ಇದ್ರಲ್ಲಿ ಇಲೆಕ್ಟ್ರೋಲೈಟ್​ ಪ್ರಮಾಣ ಅಧಿಕವಾಗಿರುತ್ತದೆ.
 • ದೇಹದ ಉಷ್ಣತೆಯ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಡೀಹೈಡ್ರೇಶನ್​ ಸಮಸ್ಯೆ ಇದ್ದಲ್ಲಿ ಪ್ರತಿ ದಿನ ಒಂದು ಲೋಟ ಮಜ್ಜಿಗೆ ಕುಡಿದ್ರೆ ನಿವಾರಣೆ.

 

 • ಮಜ್ಜಿಗೆಗೆ ಅರ್ಧ ಚಮಚ ಶುಂಠಿ ಬೆರಿಸಿ ಕಲಸಿ ಕುಡಿದ್ರೆ, ಡೈರಿಯಾದಿಂದ ಮುಕ್ತಿ
 • ಇದನ್ನು ಸೇವಿಸುವುದರಿಂದ ಕ್ಯಾನ್ಸರ್​​, ಕೊಲೆಸ್ಟ್ರಾಲ್​​, ರಕ್ತದೊತ್ತಡ ಕಡಿಮೆ ಮಾಡಲು ಇದು ಉಪಯೋಗ.
 • ಇನ್ನು ನಿಮಗೆ ಪೈಲ್ಸ್​ ಸಂಬಂಧಿತ ಸಮಸ್ಯೆಗಳು ಇದ್ದಲ್ಲಿ ಇದರ ಸೇವನೆಯಿಂದ ಮುಕ್ತಿ ಸಾಧ್ಯ.

 • ಇದ್ರಲ್ಲಿ ಪ್ರೋಟಿನ್​ ಬ್ಲಡ್​ ಪ್ರೇಶರ್​ ಕಡಿಮೆ ಮಾಡುತ್ತದೆ. ಅಲ್ಲದೆ ಲೀವರ್​ ಆರೋಗ್ಯವಾಗಿರಲು ಇದು ಸಹಾಯಕ.
 • ಇನ್ನು ತೂಕದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವರಿಗೆ ಇದು ತುಂಬಾನೇ ಮುಖ್ಯ.