ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?

0
3785

Kannada News | Health tips in kannada

ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ಸುಣ್ಣದ ಅಂಶವಿರುತ್ತದೆ. ಇದನ್ನು ಸೇವಿಸಿದ್ದಲ್ಲಿ ಎಲಬುಗಳು ಶಕ್ತಿಯುತವಾಗುವುದಲ್ಲದೆ ರಕ್ತವೃದ್ಧಿಯಾಗುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.ಚರಕ ಮುನಿಗಳ ಪ್ರಕಾರ ಫಲಗಳಲ್ಲಿ ಒಣದ್ರಾಕ್ಷಿಯೇ ಶ್ರೇಷ್ಠ.

೧) ಜೀರ್ಣಕ್ರಿಯೆಗೆ:
ಒಣದ್ರಾಕ್ಷಿಯಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನಿಶಿಯಂ ಅಂಶಗಳು ಹೇರಳವಾಗಿದ್ದು ಅಸಿಡಿಟಿ ಅನ್ನು ತಡೆಗಟ್ಟಿ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

೨) ಮಲಬದ್ಧತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ನಾರಿನಂಶವಿದ್ದು, ರಾತ್ರಿ ನೀರಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿದಿನವೂ ಸೇವಿಸಿದ್ದಲ್ಲಿ ಮಲಬದ್ಧತೆ ನಿವಾರಣೆಯಾಗುವುದು.

೩) ರಕ್ತ ಹೀನತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ಐರನ್ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿದ್ದು ರಕ್ತವೃದ್ಧಿಮಾಡುತ್ತದೆ. ಅದರಲ್ಲಿನ ಕಾಪರ್ ಅಂಶಗಳು ಕೆಂಪು ರಕ್ತಕಣಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.

೪) ಕ್ಯಾನ್ಸರ್ ತಡೆಗಟ್ಟುತ್ತದೆ:
ಒಣದ್ರಾಕ್ಷಿಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡಾಂಟ್ ಗಳು ಗಡ್ಡೆ ಉತ್ಪತ್ತಿಯನ್ನು ಮತ್ತು ಕೊಲೊನ್ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.

೫) ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ:
ಒಣದ್ರಾಕ್ಷಿಯಲ್ಲಿರುವ ಅರ್ಜಿನೈನ್ ಎಂಬ ಅಮೈನೊ ಆಸಿಡ್ ಗಳು ಲೈಂಗಿಕ ಸಾಮರ್ಥ್ಯವನ್ನು ಅಧಿಕ ಗೊಳಿಸಿ ಪುರುಷರಲ್ಲಿ ಶಿಶ್ನ ನಿಮಿರುವಿಕೆ, ವೀರ್ಯಾಣು ಕಡಿಮೆಯಾಗುವಿಕೆ ಮುಂತಾದ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.

೬) ಕಣ್ಣಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ವಿಟಮಿನ್ ಎ,ಬೀಟಾ ಕ್ಯಾರೋಟಿನ್,ಎ ಕ್ಯಾರೊಟಿನೋಯ್ಡ್ ಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಅದ್ರಲ್ಲಿರುವ ಪೊಲಿಫಿನೋಲ್ ಆಂಟಿ ಆಕ್ಸಿಡಾಂಟ್ ಗಳು ಮ್ಯಾಕ್ಯುಲರ್ ಡಿಜೆನೆರೇಷನ್ ಕಡಿಮೆ ಮಾಡಿ ಕ್ಯಾಟರಾಕ್ಟ್ ಬರದಂತೆ ಕಾಪಾಡುತ್ತವೆ.

೭) ಹಲ್ಲಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ಒಲೆನೋಯಿಕ್ ಆಸಿಡ್ ಗಳು ಹಲ್ಲುಗಳು ಹುಳುಕಾಗದಂತೆ ತಡೆಗಟ್ಟುತ್ತವೆ. ಮತ್ತು ಅದರಲ್ಲಿರುವ ಕ್ಯಾಲ್ಸಿಯಂ ಗಳು ಹಲ್ಲುಗಳು ಉದುರದಂತೆ ಕಾಪಾಡುತ್ತವೆ.

Also Read:

೮) ತೂಕ ಜಾಸ್ತಿ ಆಗಲು:
ಒಣದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶಗಳಿದ್ದು ಬೊಜ್ಜು ಹೆಚ್ಚಾಗಿಸದೆ ತೂಕವನ್ನು ಹೆಚ್ಚುಮಾಡುತ್ತದೆ.

ಎಲ್ಲ ಖಾಯಿಲೆಗಳಿಗೆ ದುಬಾರಿ ಔಷಧವಿಲ್ಲದೆ, ದುಬಾರಿ ಖರ್ಚಿಲ್ಲದೆ, ಯಾವುದೇ side effects ಇಲ್ಲದಿರುವ treatments ಪಡೆದುಕೊಳ್ಳಿ…
Dr Sharanya
No 1417, Behind Kumaraswamy Temple, Hanumanthanagar
Bengaluru
Phone : 9480198302

Aslo Read: ನುಗ್ಗೆಕಾಯಿ ಮತ್ತು ಸೊಪ್ಪು ಇಷ್ಟೊಂದು ಖಾಯಿಲೆನ ವಾಸಿ ಮಾಡುತ್ತೆ ಅಂತ ಗೊತ್ತಾದ್ರೆ ಈಗ್ಲೇ ಮನೆಗೆ ತರ್ತೀರಾ..