ಸೀಬೆ ಹಣ್ಣು ಅಷ್ಟೇ ಅಲ್ಲ, ಸೀಬೆ ಎಲೆಯ ಕಮಾಲ್ ಕೇಳಿದರೆ ಬೆರಗಾಗ್ತೀರಾ..!!

0
2798

ವಿಟಮಿನ್-ಸಿ ಆಗರವಾಗಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿ ಕರವೋ ಆರೋಗ್ಯಕ್ಕೂ ಅಷ್ಟೇ ಲಾಭಕಾರಿ. ಆದರೆ ಇದರ ಎಲೆಗಳೂ ಅಷ್ಟೇ ಉಪಯುಕ್ತವಾಗಿದ್ದು, ಇವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ವೃದ್ಧಿಸುತ್ತವೆ.

ಕೇಶ ಸೌಂದರ್ಯ:

ಒಂದು ಪಾತ್ರೆಯಲ್ಲಿ ನಾಲ್ಕೈದು ಲೋಟ ನೀರು ಹಾಕಿ. ಅದರಲ್ಲಿ ಸೀಬೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಮೂರು ಲೋಟಕ್ಕಿಳಿದಾಗ ಒಲೆ ಆರಿಸಿ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ನೀರನ್ನು ಕೂದಲು ಮತ್ತು ಕೂದಲ ಬುಡಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಒಣಗಿದ ನಂತರ ಮೃದು ಮತ್ತು ಉತ್ತಮ ಗುಣಮಟ್ಟದ ಶಾಂಪೂವಿನಿಂದ ಸ್ನಾನ ಮಾಡಿ. ಇದರಿಂದ ಕೂದಲು ಮೃದುವಾಗುವುದರ ಜೊತೆಗೆ ಹೊಳಪು ಪಡೆಯುತ್ತದೆ. ಅಲ್ಲದೇ ಕೂದಲಿಗೆ ಶಕ್ತಿ ಬಂದು ಸೊಂಪಾಗಿ ಬೆಳೆಯುತ್ತದೆ.

ಮೊಡವೆ ಮಾಯ:

ಅಲರ್ಜಿ, ತುರಿಕೆಯಂಥ ಚರ್ಮ ಸಮಸ್ಯೆ ಮತ್ತು ಮೊಡವೆಗಳಿಂದ ಬೇಸತ್ತವರು ಸೀಬೆಯ ಎಳೆ ಎಲೆಗಳನ್ನು ರುಬ್ಬಿ ನಯವಾಗಿ ಪೇಸ್ಟ್ ಮಾಡಿ. ರಾತ್ರಿ ಮುಖಕ್ಕೆ ಪ್ಯಾಕ್ ತರಹ ಹಚ್ಚಿ. ಒಣಗಿದ ನಂತರ ಮುಖ ತೊಳೆಯುತ್ತ ಬಂದಲ್ಲಿ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೆ ಅಲರ್ಜಿಗಳೂ ದೂರವಾಗಿ ತ್ವಚೆ ಹೊಳಪು ಪಡೆಯುತ್ತದೆ.

ಕಪ್ಪು ಕಲೆಗೂ ಸೈ:

ಬ್ಲ್ಯಾಕ್ ಹೆಡ್ಸ್, ಮುಖದಲ್ಲಿ ಸಣ್ಣಪುಟ್ಟ ರಂಧ್ರಗಳ ಸಮಸ್ಯೆ ಹೊಂದಿದವರು ಸೀಬೆ ಎಲೆಗಳನ್ನು ತರಿತರಿಯಾಗಿ ರುಬ್ಬಿ ಮುಖಕ್ಕೆ ಸ್ಕ್ರಬ್ ತರಹ ಮಸಾಜ್ ಮಾಡುತ್ತ ಬನ್ನಿ. ಜೊತೆಗೆ ಇದರ ಪೇಸ್ಟ್ ಅನ್ನು ಮುಖಕ್ಕೆ ಪ್ಯಾಕ್ ತರಹ ಹಚ್ಚುತ್ತಾ ಬಂದಲ್ಲಿ ಮುಖದ ಸುಕ್ಕೂ ಮಾಯವಾಗುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840