ಬಡವ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಎಲ್ಲಾ ಖಾಯಿಲೆಗೂ ರಾಮಬಾಣ

0
8295

ಬಡವ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಎಲ್ಲಾ ಖಾಯಿಲೆಗೂ ರಾಮಬಾಣ ಬನ್ನಿ ಸೀಬೆಯ ಮಹತ್ವ ತಿಳಿಯೋಣ

ಬಾಯಿಯ ಸಮಸ್ಯೆಗಳಿಗೆ  :

ಇವುಗಳಲ್ಲಿನ “ಸಿ” ಜೀವಸತ್ವದಿಂದ ಒಸಡುಗಳು ಗಟ್ಟಿಗೊಳ್ಳುತ್ತವೆ ಮತ್ತು ಸ್ಕರ್ವಿಕಾಯಿಲೆ ವಾಸಿಯಾಗುತ್ತದೆ, ಬಾಯಿ ಹುಣ್ಣು ಹಾಗೂ ವಸಡಿನ ರಕ್ತಸ್ರಾವ ನಿಲ್ಲುತ್ತದೆ.

ಸೀಬೆಯ ಚಿಗುರು ಎಲೆಗಳ ಕಷಾಯವನ್ನು ಸಿದ್ಧಮಾಡಿ ಅದಕ್ಕೆ ಉಪ್ಪು ಹಾಕಿ ದಿನಕ್ಕೆ ಮೂರು ಸಲ ಬಾಯಿ ಮುಕ್ಕಳಿಸಿದರೆ ಸಾಕು ಬಾಯಿ ದುರ್ನಾತ ಇರುವುದಿಲ್ಲ.

download

Also read: ಖರ್ಜೂರ : ಕಾಯಿಲೆಗಳಿಗೆ ಒಂದು ಉತ್ತಮ ಮನೆ ಮದ್ದು

ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ:

ಕೆಂಪು ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿವೆ. ನಾರಿನಂಶ ಸಣ್ಣ ಕರುಳಿನಲ್ಲಿ ಆಹಾರ ಸರಾಗವಾಗಿ ಹೋಗಲು ಸಹಕರಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹಾಗೂ ಹಸಿವನ್ನು ಹೆಚ್ಚಿಸುತ್ತದೆ.

primary_image_4cb7117d-279b-4c3c-8d96-2791f47a74b8

ತೂಕ ಇಳಿಕೆಗೆ ಸಹಕಾರಿ:

ಸ್ಥೂಲಕಾಯದವರಿಗೆ ಈ ಹಣ್ಣಿನ ಸೇವನೆ ಅತ್ಯುತ್ತಮ. ಇದು ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಅಧಿಕ ಪ್ರಮಾಣದ ನಾರಿನಂಶ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಸೇಬು, ಕಿತ್ತಳೆ ಮತ್ತು ದ್ರಾಕ್ಷಿ ಮುಂತಾದ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನಲ್ಲಿರುವ ಸಕ್ಕರೆಯ ಪ್ರಮಾಣ ಅತ್ಯಂತ ಕಡಿಮೆ. ಆದ್ದರಿಂದ ಇದರ ಸೇವನೆಯಿಂದ ಮಧುಮೇಹ ಸಮಸ್ಯೆಯಿಂದ ದೂರವಿರಬಹುದು.

ebdf20cdcd3eabf2a97e49d5a3fa6c14-1

ಗರ್ಭಿಣಿ ಸ್ತ್ರೀಯರಿಗೆ ಸಹಾಯಕ:

ಸೀಬೆ ಹಣ್ಣಿನ ಬೀಜ ತೆಗೆದು ತಿರುಳಿಗೆ ಜೇನು ತುಪ್ಪ ಬೆರೆಸಿ ಗರ್ಭಿಣಿಯರು ಸೇವಿಸಿದರೆ ಹೃದ್ರೋಗ, ಅರಿಶಿನ ಕಾಮಾಲೆ, ಉಬ್ಬಸ ಹಾಗೂ ಕ್ಷಯದಂತಹ ಕಾಯಿಲೆಗಳಿಗೆ ರಾಮಬಾಣ.

ಗರ್ಭಾವಸ್ಥೆಯಲ್ಲಿ ಸೀಬೆ ಅತ್ಯಧಿಕವಾಗಿ ಫೋಲಿಕ್ ಆಮ್ಲ, ಅಥವಾ ವಿಟಮಿನ್ ಬಿ 9 ಇರುವ ಸೀಬೆಹಣ್ಣು ಮಗುವಿನ ನರಮಂಡಲದ ಅಭಿವೃದ್ಧಿಪಡಿಸುವಲ್ಲಿ ಸಹಾಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಂದ ಗರ್ಭದಲ್ಲಿರುವ ಶಿಶುವನ್ನು ಕಾಪಾಡುತ್ತದೆ.

pregnant

ಗಾಯ ಹಾಗೂ ವೃಣದ ಸಮಸ್ಯೆ :

ಸೀಬೆ ಹೂಗಳನ್ನು ನುಣ್ಣಗೆ ಅರೆದು ಗಾಯ ಹಾಗೂ ವ್ರಣಗಳಿಗೆ ಪಟ್ಟು ಹಾಕಿದಲ್ಲಿ ಶೀಘ್ರ ಉಪಶಮನ ಸಾಧ್ಯ.

ಶ್ರೀಗಂಧದೊಂದಿಗೆ ಸೀಬೆಯ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ, ತುರಿ, ಹುಳುಕಡ್ಡಿ ಇಲ್ಲವಾಗುತ್ತದೆ. ಇದೇ ಲೇಪನವನ್ನು ತಲೆಗೆ ಹಚ್ಚಿಕೊಂಡು ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿದರೆ ಹೇನುಗಳು ಸಾಯುತ್ತವೆ.

burn

ಮಾನಸಿಕ ಒತ್ತಡ ನಿಯಂತ್ರಣದಲ್ಲಿಡಲು:

ಮೆಗ್ನೀಷಿಯಂ ಹೇರಳವಾಗಿರುವ ಸೀಬೆ ಹಣ್ಣಿನಿಂದ ಒತ್ತಡವನ್ನೂ ನಿಯಂತ್ರಣದಲ್ಲಿಡಬಹುದು. ತುಂಬಾ ಒತ್ತಡದಿಂದ ಕಳೆದ ದಿನ, ಒಂದು ಸೀಬೆಹಣ್ಣು ತಿನ್ನುವುದರಿಂದ ದೇಹದ ನರ ಮಂಡಲಗಳು, ಸ್ನಾಯುಗಳಿಗೆ ವಿಶ್ರಾಂತಿ ದೊರಕಿ, ದೇಹದಲ್ಲಿ ನವಚೈತನ್ಯ ಬಂದಂತಾಗುತ್ತದೆ.

frustrationaltanaka

Also read: ಪಿಜ್ಜಾ ಬರ್ಗರ್ ಬಿಡ್ರಿ ದಾಳಿಂಬೆ ದಿನಕ್ಕೊಂದು ತಿನ್ರಿ!!

ಕ್ಯಾನ್ಸರ್ ನಿರೋಧಕ ಅಂಶ:
ಕೆಂಪು ಸೀಬೆ ಹಣ್ಣಿನ ಅತ್ಯಂತ ಪ್ರಮುಖ ಪ್ರಮುಖ ಪ್ರಯೋಜನವೆಂದರೆ, ಇದರಲ್ಲಿ ಕಾನ್ಸರ್ ನಿರೋಧಕ ಅಂಶ ಅಧಿಕವಾಗಿದೆ. ದೇಹದಲ್ಲಿರುವ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಈ ಹಣ್ಣು ಬಹುತೇಕ ಕ್ಯಾನ್ಸರ್ ರೋಗಿಗಳಿಗೆ ಔಷಧಿಯಾಗಿಯೂ ಪರಿಣಮಿಸಿದೆ. ಇದರಲ್ಲಿರುವ ಪಾಲಿಫಿನಾಲ್ಸ್ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಅಪಾಯವನ್ನುಂಟು ಮಾಡುವ ಜೀವಕೋಶಗಳನ್ನು ನಾಶಗೊಳಿಸುತ್ತದೆ. ಈ ಹಣ್ಣಿನಲ್ಲಿ ಲೈಕೊಪಿನ್ ಎಂಬ ಪ್ರಬಲ ಆಂಟಿಆಕ್ಸಿಡೆಂಟ್ ಕೂಡಾ ಇದ್ದು, ಇದು ಕೆಲವು ರೀತಿಯ ಕ್ಯಾನ್ಸರ್‌ಗಳು ಬಾರದಂತೆ ತಡೆಯುತ್ತದೆ.

maxresdefault

ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯಕ :

ಇದರಲ್ಲಿ ವಿಟಾಮಿನ್‌ ಎ ಹೆಚ್ಚು ಇದ್ದು, ಇದು ಕಣ್ಣಿನ ದೃಷ್ಟಿ ದೋಷವನ್ನು ನಿವಾರಣೆ ಮಾಡಲು ನೆರವಾಗುತ್ತದೆ.

images

ಮಧುಮೇಹ ಸ್ನೇಹಿ

ಇದರಲ್ಲಿರುವ ಕಡಿಮೆ ಗ್ಲೂಕೋಸ್ ಅಂಶ ಹಾಗೂ ಹೇರಳವಾಗಿರುವ ನಾರಿನಂಶದಿಂದ ಮಧುಮೇಹಿ ರೋಗಿಗಳಿಗೆ ಸೀಬೆಹಣ್ಣು ವರವಾಗಿ ಪರಿಣಮಿಸಿದೆ.

blood-sugar-checking

ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿದರೆ ಮೊಡವೆ ಮಾಯವಾಗುತ್ತವೆ.

ಸೀಬೆ ಕಾಯಿಗಳನ್ನು ಹಲ್ಲಿನಿಂದ ಕಚ್ಚಿ ತಿಂದರೆ ದಂತಕ್ಷಯ ಬಾಧೆ ಕಾಣಿಸದು. ಇನ್ನು ಈ ಎಲೆಗಳನ್ನು ನುಣ್ಣಗೆ ಅರೆದು ಮೈ ಕೈಗೆ ತಿಕ್ಕಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತ ಬಂದರೆ ಬೆವರಿನ ವಾಸನೆ ದೂರವಾಗುತ್ತದೆ.

Also read: ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಲೋಳೆಸರದ ಉಪಯುಕ್ತತೆಗಳು