ದೇಹದಲ್ಲಿ ಪಿತ್ತ ಜಾಸ್ತಿಯಾಗಿದೆ ಅಂತ ಇಂಗ್ಲಿಷ್ ಮೆಡಿಸಿನ್-ಗೆ ದುಡ್ಡು ಸುರಿಯೋ ಬದಲು ಕೋಕಂ ಉಪಯೋಗಿಸಿ. ಥಟ್ ಅಂತ ಪಿತ್ತ ಕಡಿಮೆಯಾಗುತ್ತೆ!!

0
1589

ಕೋಕಂ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಬೆಳೆಯುವ ಹಣ್ಣು. ಇದನ್ನು ದಕ್ಷಿಣ ಭಾರತ, ಗುಜರಾತ್, ರಾಜಸ್ತಾನ್ ಗಳಲ್ಲಿ ಖಾದ್ಯ ಪದಾರ್ಥವಾಗಿ ಬಳಸುತ್ತಾರೆ. ಹಣ್ಣು, ಹಣ್ಣಿನ ಸಿಪ್ಪೆ ಇವು ಪುನರ್ಪುಳಿಯ ಔಷಧೀಯ ಗುಣಗಳು.

Also read: ಪಿತ್ತಕ್ಕೆ, ಉರಿಮೂತ್ರಕ್ಕೆ, ರಕ್ತಶುದ್ಧಿಗೆ ದುಬಾರಿ ಔಷಧಿ ಮೊರೆ ಹೋಗೋ ಬದ್ಲು ಈ ಶರಬತ್ತು ಮಾಡ್ಕೊಂಡು ಕುಡಿದ್ರೆ ಸಾಕು…

ಕೋಕಂ ಹಣ್ಣು ಹೇಗೆ ಉಪುಯುಕ್ತ ಅಂತ ತಿಳಿದುಕೊಳ್ಳೋಣ ಬನ್ನಿ

  • ಹಣ್ಣು ತಂಪು ಗುಣವನ್ನು ಹೊಂದಿದೆ. ಆಹಾರದ ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
  • ಹಣ್ಣಿನ ಸಿಪ್ಪೆಯನ್ನು ತಿಕ್ಕಿದರೆ ಗುಳ್ಳೆ- ಕಜ್ಜಿ ಗುಣವಾಗುತ್ತದೆ.ಹಣ್ಣಿನ ರಸವನ್ನು ಸುತ್ತ ಗಾಯ , ಗಾಯಗೊಂಡ ಚರ್ಮ ಮುಂತಾದವುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.
  • ಕೋಕಮ್ ಬೀಜದಲ್ಲಿ ಶೇ ೨೩ ರಿಂದ ೨೬ ರಷ್ಟು ತೈಲಾಂಶವಿದ್ದು ಇದನ್ನು ಔಷಧಿಯಾಗಿ ಬಳಸುತ್ತಾರೆ.
  • ಇದರ ಸಿಪ್ಪೆಯ ಕಷಾಯವನ್ನು ಕುಡಿದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
  • ಕೋಕಮ್ ಮರದ ಕಾಂಡದ ತೊಗಟೆಯನ್ನು ಪುಡಿ ಮಾಡಿ, ಬಿಸಿ ನೀರಿಗೆ ಸೇರಿಸಿ ಕುದಿಸಬೇಕು. ಸ್ವಲ್ಪ ತಣ್ಣಗಾದ ಕಷಾಯದಿಂದ ಪಕ್ಷಾಘಾತವಾದ ಭಾಗಕ್ಕೆ ಹಚ್ಚಬೇಕು. ಇದರಿಂದ ಪಕ್ಷಾಘಾತದಲ್ಲಿ ಚೇತರಿಕೆ ಕಂಡುಬರುತ್ತದೆ.

Also read: ಅಜೀರ್ಣಕ್ಕೆ, ಪಿತ್ತದೋಷಕ್ಕೆ ಶುಂಠಿಗಿಂತ ಔಷಧಿ ಬೇಕಾ??