ಬೆಂಡೆಕಾಯಿಯ ಈ ಹತ್ತು ಆರೋಗ್ಯ ಗುಣಗಳನ್ನು ಕೇಳಿದರೆ ನಿತ್ಯವೂ ಬೆಂಡೆಕಾಯಿ ತಿನ್ಬೇಕು ಅನ್ನಿಸುತ್ತೆ.

0
1934

Kannada News | Health tips in kannada

ಬೆಂಡೆಕಾಯಿ ಇಂದ ಆಗುವ ಹತ್ತು ಆರೋಗ್ಯಕರ ಲಾಭಗಳು.

1. ಇದು ವಿಶ್ವದಾದ್ಯಂತ ಅಪೌಷ್ಟಿಕತೆಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವು ಗಮನಾರ್ಹ ಪ್ರಮಾಣದಲ್ಲಿ ಪ್ರಮುಖ ಪೋಷಕಾಂಶಗಳೊಂದಿಗೆ ಇದೆ.

2. ಇದರಲ್ಲಿ ಕರಗಬಲ್ಲ ಫೈಬರ್ಗಳು ಇರುವುದರಿಂದ, ಇದನ್ನು ಸೇವಿಸಿದ ನಂತರ ದೀರ್ಘ ಸಮಯದವರೆಗೆ ಹಸಿವಾಗುವುದಿಲ್ಲ, ಇದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿ ಇರುತ್ತದಲ್ಲದೆ, ದೇಹದ ತೂಕ ಇಳಿಸಲು ನೆರವಾಗುತ್ತದೆ.

3. ಇದರಲ್ಲಿರುವ ಉತ್ಕರ್ಷಣ ನಿರೋಧಕ ಪೊಲೀಫ್ಹೆನೋಲ್ಗಳು ಮತ್ತು ಫ್ಲ್ಯಾವೊನೊಯ್ಡ್ಸ್ ನಿಮ್ಮ ಖಿನ್ನತೆ ಮತ್ತು ಸುಸ್ತು ಸಮಸ್ಯೆಗಳನ್ನು ದೂರಮಾಡುತ್ತವೆ.

4. ಇದು ಇನ್ಸುಲಿನ್-ನ ಸೆನ್ಸ್ ಸಾಮರ್ಥ್ಯವನ್ನು ಹೆಚ್ಚಿಸಿ ಪ್ಯಾಂಕ್ರಿಯಾಸ್ ನಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿ ಆಗುವ ಹಾಗೆ ಮಾಡುತ್ತದೆ ಇದರಿಂದ ನಿಮ್ಮ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡುತ್ತದೆ.

5. ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಮಟ್ಟವನ್ನು ತಗ್ಗಿಸಿ ರಕ್ತಸಂಚಾರ ಸುಗಮಗೊಳಿಸುತ್ತದೆ ಇದರಿಂದ ದೇಹದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಮತ್ತು ಮುಚ್ಚಿದ ಅಪಧಮನಿಗಳು ತೆರೆದು ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ.

6. ಇದರಲ್ಲಿ ಹೆಚ್ಚು ಹೇರಳವಾಗಿ ವಿಟಮಿನ್ K ಇರುವುದರಿಂದ, ಆಸ್ಟಿಯೊಪೊರೋಸಿಸ್, ಫ್ಯಾಕ್ಚೆರ್ ಮತ್ತು ಗಾಯದಿಂದಾಗುವ ವಿಪರೀತ ರಕ್ತಸ್ರಾವವನ್ನು ತಡೆದು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

7. ಇದರಲ್ಲಿ ಹೆಚ್ಚು ಹೇರಳವಾಗಿ ವಿಟಮಿನ್ A ಇರುವುದರಿಂದ, ನಿಮ್ಮ ಕಣ್ಣಿನ ಸಂಭಂದಿತ ದೋಷಗಳನ್ನು ನಿವಾರಿಸಿ ಕಣ್ಣಿನ ಸೋಂಕುಗಳು ಬಾರದಿರುವ ಹಾಗೆ ಕಾಪಾಡಿ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

8. ಇದು ತನ್ನ ಅಂಟು ವಿರೋಧಿ ಗುಣದಿಂದ ಎಚ್. ಪೈಲೊರಿ ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆದು ಜಠರದುರಿತ ಅಥವಾ ಗ್ಯಾಸ್ಟ್ರೀಟೈಸ್ ಸಮಸ್ಯೆಯನ್ನು ದೂರಮಾಡುತ್ತದೆ.

9. ಇದನ್ನು ಸೇವಿಸುವುದರಿಂದ ಲಿವರ್ ಅಥವಾ ಯಕೃತ್ತು ಸಮಸ್ಯೆಗಳನ್ನು ತರುವ ಫ್ರೀ ರಾಡಿಕಲ್ಸ್ ಸಾಯುತ್ತವೆ, ಇದರಿಂದ ನಿಮ್ಮ ಯಕೃತ್ ಆರೋಗ್ಯ ಸುಧಾರಿಸುತ್ತದೆ.

10. ಇದನ್ನು ಸೇವಿಸುವುದರಿಂದ ಆನುವಂಶಿಕವಾಗಿ ಬರುವ ಅಲ್ಜಿಮರ್ಸ್ ಅಥವಾ ಮರೆಗುಳಿತನ ಕಾಯಿಲೆಯನ್ನು ತಡೆಗಟ್ಟಿ ಕಾಯಿಲೆ ಬರದಿರುವ ಹಾಗೆ ಮಾಡುತ್ತದೆ.

Also read: ಹಬ್ಬಕ್ಕೂ ಮುನ್ನ ಹರಿವ ವರುಣನ ಹರಿವು..ಯುಗಾದಿಗೂ ಮುನ್ನವೇ ಮಳೆಯಾಗೋ ಸಾಧ್ಯತೆ..