ಅತ್ತರೂ ಪರವಾಗಿಲ್ಲ ಅರೋಗ್ಯ ಬೇಕು ಎನ್ನೋವ್ರು ಓದ್ರಿ, ಈರುಳ್ಳಿ ಉಪಯೋಗ ತಿಳಿದುಕೊಳ್ರಿ.!

0
2203

ಈರುಳ್ಳಿಯಲ್ಲಿ ಅನೇಕ ವಿಧಗಳಿದ್ದರೂ ಬಿಳಿ ಮತ್ತು ಕೆಂಪು ನೀರುಳ್ಳಿಗಳು ಹೆಚ್ಚು ಬಳಕೆಯಲ್ಲಿವೆ. ಗುಣದಲ್ಲಿ ಬಿಳಿ ಈರುಳ್ಳಿಯೇ ಉತ್ತಮ. ಷಡ್ರಸಗಳಲ್ಲಿ ಉಪ್ಪನ್ನು ಬಿಟ್ಟು ಈರುಳ್ಳಿಯಲ್ಲಿ ಸಿಹಿ, ಹುಳಿ, ಖಾರ, ಒಗರು, ಕಹಿ ಈ ಐದು ರಸಗಳಿರುತ್ತದೆ.

ಆಯಾಸ ನಿವಾರಣೆಗೆ:

Also read: ಉತ್ತಮ ಆರೋಗ್ಯಕ್ಕೆ ಯಾವ ಹಣ್ಣು ಸೇವಿಸುವುದು ಒಳ್ಳೆಯದು; ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ನೋಡಿ..

೧೦ ಗ್ರಾಂ ಬೆಲ್ಲದೊಂದಿಗೆ ಒಂದು ಸಾದಾರಣ ಗಾತ್ರದ ಈರುಳ್ಳಿಯನ್ನು ತುಂಡರಿಸಿ ಜಗಿದು ತಿನ್ನಬೇಕು. ಬೇಕೆನಿಸಿದರೆ ಸ್ವಲ್ಪ ನೀರು ಕುಡಿಯಬೇಕು ಇದರಿಂದ ದೇಹದಲ್ಲಿ ನವ ಚೈತನ್ಯ ಹೊಮ್ಮುವುದು.

ವೀರ್ಯವೃದ್ಧಿಗೆ:

ನೀರುಳ್ಳಿ ಬೀಜಗಳನ್ನು ಚೂರ್ಣಿಸಿಕೊಂಡು ೫ ಗ್ರಾಂ ಚೂರ್ಣಕ್ಕೆ ೧೦ ಗ್ರಾಂ ಬೆಲ್ಲ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ತಿಂದು ಮೇಲೆ ಸ್ವಲ್ಪ ಹಾಲು ಕುಡಿಯಬೇಕು.

ಕೆಮ್ಮು, ಶೀತ ನೆಗಡಿ ನಿವಾರಣೆಗೆ:

ಈರುಳ್ಳಿ ರಸ ಎರಡು ಚಮಚಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಶ್ಲೇಷ್ಮ ನಿವಾರಣೆಯಾಗುತ್ತದೆ.

ಮೂತ್ರದೋಷಗಳಿಗೆ:

ಒಂದು ದೊಡ್ಡ ಈರುಳ್ಳಿಯನ್ನು ಜಜ್ಜಿ ನಾಲ್ಕು ಗ್ಲಾಸ್ ನೀರು ಹಾಕಿ ಕುದಿಸಿ, ಕಾಲು ಭಾಗಕ್ಕೆ ಇಳಿಸಿಕೊಳ್ಳಬೇಕು.ಈ ಕಷಾಯವನ್ನು ಮೂರು ಬಾರಿ ಕುಡಿಯುವುದರಿಂದ ಮೂತ್ರದ ಉರಿ, ಪದೇ ಪದೇ ಮೂತ್ರಕ್ಕೆ ಹೋಗುವುದು ನಿಯಂತ್ರಣಕ್ಕೆ ಬರುವುದು.

ರಕ್ತ ಮೂಲವ್ಯಾಧಿಗೆ:

ಈರುಳ್ಳಿಯನ್ನು ಜಜ್ಜಿ ಒಂದು ಕಪ್ಪು ನೀರಿನಲ್ಲಿ ಕುದಿಸಿ ಅದಕ್ಕೆ ಒಂದಿಷ್ಟು ಬೆಲ್ಲ ಬೆರೆಸಿ ಬೆಳಿಗ್ಗೆ ತಿಂದಲ್ಲಿ ರಕ್ತ ಮೂಲವ್ಯಾಧಿ ನಿವಾರಣೆಯಾಗುವುದು.

ಚೇಳಿನ ವಿಷಕ್ಕೆ:

ಈರುಳ್ಳಿ ರಸಕ್ಕೆ ಒಂದಿಷ್ಟು digest ಉಪ್ಪು ಕಲಿಸಿ, ಚೇಳು ಕುಟುಕಿದ ಸ್ಥಳಕ್ಕೆ ಹಚ್ಚುವುದರಿಂದ ಚೇಳು ಕುಟುಕಿದ ವಿಷ ನಿವಾರಣೆಯಾಗುತ್ತದೆ.

ಜೀರ್ಣಶಕ್ತಿಗೆ:

Also read: ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮು ಕಫ ಸಮಸ್ಯೆಗಳಿಗೆ ಕೆಲವು ಸರಳವಾದ ಮನೆಮದ್ದುಗಳು ಇಲ್ಲಿವೆ ನೋಡಿ..

ಊಟದಲ್ಲಿ ಈರುಳ್ಳಿಯನ್ನು ಪ್ರತಿದಿನವೂ ಉಪಯೋಗಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

ದೇಹದ ತೂಕ ಹೆಚ್ಚಬೇಕೆಂದಿದ್ದರೆ:

Also read: ಮಧುಮೇಹ ವಿದೆಯೇ ಯೋಚಿಸಬೇಡಿ ಈ ಪಾನೀಯಗಳನ್ನು ತಪ್ಪದೆ ಸೇವಿಸಿದರೆ ಕೆಲವೇ ದಿನನಗಳಲ್ಲಿ ಮಧುಮೇಹ ನೀವಾರಣೆಯಾಗುತ್ತದೆ.

ಈರುಳ್ಳಿಯಲ್ಲಿ ಕಬ್ಬಿಣದ ಅಂಶವಿದೆ. ಈರುಳ್ಳಿಯನ್ನು ಬೆಲ್ಲದೊಂದಿಗೆ ಜಜ್ಜಿ ಒಂದು ಉಂಡೆ ಮಾಡಿ ತಿನ್ನುತ್ತಿದ್ದರೆ ದೇಹದ ತೂಕವು ಹೆಚ್ಚುವುದು,ರಕ್ತ ಶುದ್ಧಿಯಾಗುವುದು.

ಕಾಲಿನ ಹಿಮ್ಮಡಿ ಒಡೆದಿದ್ದರೆ:

ಈರುಳ್ಳಿಯನ್ನು ಜಜ್ಜಿ ಒಡೆದ ಪಾದ, ಹಿಮ್ಮಡಿಗಳಿಗೆ ಹಚ್ಚಿ ರಾತ್ರಿ ಕಟ್ಟಿ ಬೆಳಿಗ್ಗೆ ತೊಳೆದುಕೊಂಡಲ್ಲಿ ಹಿಮ್ಮಡಿ ಸರಿತಾಗುವುದು.

ಕಾಮವರ್ಧಕ:

ಒಂದು ಸಾದಾರಣ ಗಾತ್ರ ಈರುಳ್ಳಿ.ಒಂದು ಸಣ್ಣ ಬೆಳ್ಳುಳ್ಳಿ, ಒಂದು ಟೊಮೇಟೊ ಹಣ್ಣು, ಹತ್ತು ಗ್ರಾಂ ಹಸಿ ಶುಂಠಿಗಳನ್ನ ಮಿಕ್ಸರನಲ್ಲಿ ತಿರುವಿ ರಸವನ್ನು ಹಿಂಡಿ ಸೋಸಿಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ಜೇನು,ಸಕ್ಕರೆ,ತುಪ್ಪ ಮಿಶ್ರ ಮಾಡಿ ಚೆನ್ನಾಗಿ ಕಲಕಿ ಬೆಳಿಗ್ಗೆ ಕುಡಿದಲ್ಲಿ ಲೈಂಗಿಕ ಶಕ್ತಿ ಹೆಚ್ಚುವುದು.