ಆಟವಾಡುವ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೇದು ಮತ್ತು ತುಂಬಾ ಸಿಂಪಲ್ ಆಗಿ ತಯಾರಿಸಬಹುದಾದ ಸಬ್ಬಕ್ಕಿ ಉಂಡೆ ಮಾಡುವ ವಿಧಾನ..!!

0
1257

ಸಬ್ಬಕ್ಕಿ, ಸಾಬೂದಾನ ಅಥವಾ ಸೀಮೆಅಕ್ಕಿ ಎಂದೂ ಕರೆಯುವ ಈ ಪದಾರ್ಥವು ಹೆಚ್ಚು ಕಾಬ್ರೋಹೈಡ್ರೇಟ್ ಹೊಂದಿದೆ. ಉಪವಾಸ ಕೈಗೊಳ್ಳುವಾಗ ಇದರ ಬಳಕೆ ಹೆಚ್ಚು. ಆಟವಾಡುವ ಮಕ್ಕಳು ನಿಶಕ್ತಿ ಹೊಂದಿದಾಗ ಇದನ್ನು ಸೇವಿಸಿದರೆ ನಿಶ್ಯಕ್ತಿ ಶಮನವಾಗುವುದು. ಅಲ್ಲದೆ ಇದರಲ್ಲಿರುವ ಪಿಷ್ಟ ಅಥವಾ ಕಾರ್ಬೋಹೈಡ್ರೇಟುಗಳು ಅದ್ಭುತವಾದ ಶಕ್ತಿ ಮತ್ತು ತ್ವರಿತ ವರ್ಧಕವನ್ನು ನೀಡುತ್ತವೆ. ಜೀರ್ಣಶಕ್ತಿ ಕಡಿಮೆ ಇರುವವರು ಇದರಲ್ಲಿ ತಯಾರಾದ ಆಹಾರ ಸೇವಿಸಿದರೆ ತ್ವರಿತ ಶಕ್ತಿ ಸಿಗುತ್ತದೆ. ಅಂತಹ ಬಗೆ ಬಗೆ ಸಾಬುದಾಣೆ ಖಾದ್ಯಗಳಲ್ಲಿ ಸಾಬೂದಾನ ಉಂಡೆ ಕೂಡ ಒಂದು. ಇದು ಸಣ್ಣ ಮಕ್ಕಳಿಗೆ ತುಂಬಾ ಇಷ್ಟವಾಗುವಂತಹ ಖಾದ್ಯ.

ಸಬ್ಬಕ್ಕಿ ತರಿಯ ಲಡ್ಡು ಬೇಕಾಗುವ ಸಾಮಗ್ರಿ :

  • ಸಬ್ಬಕ್ಕಿ-2 ಕಪ್,
  • ಬೆಲ್ಲ-1 ಕಪ್,
  • ಹುರಿದ ಕಡಲೆಕಾಯಿ ಬೀಜ-1/2 ಕಪ್,
  • ಏಲಕ್ಕಿ ಪುಡಿ-1/2 ಟೀ ಚಮಚ,
  • ಜಾಕಾಯಿ ಪುಡಿ-1/4 ಟಿ ಚಮಚ,
  • ಎಳ್ಳು ಪುಡಿ-1 ಟೀ ಚಮಚ,
  • ತುಪ್ಪ-3/4 ಕಪ್,

ಮಾಡುವ ವಿಧಾನ:

  1. ಸಬ್ಬಕ್ಕಿಯನ್ನು ಹುರಿದು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಕಡಲೆಕಾಯಿ ಬೀಜವನ್ನು ತರಿತರಿಯಾಗಿ ಪುಡಿ ಮಾಡಿ.
  2. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಕರಗಿಸಿ. ಬೆಲ್ಲ ಕರಗಿದ ನಂತರ, ಸಬ್ಬಕ್ಕಿ ಪುಡಿ, ಕಡಲೆಕಾಯಿ ಬೀಜ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ಎಳ್ಳು ಬೆರೆಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿಳಿಸಿ.
  3. ಸ್ವಲ್ಪ ತುಪ್ಪ ಹಾಕಿ ಬೇಕಾದ ಗಾತ್ರದಲ್ಲಿ ಕಟ್ಟಿದರೆ, ಸಬ್ಬಕ್ಕಿ ಉಂಡೆ ರೆಡಿ.