ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ ಅವರೆ

0
1353

ಸೋಯಾ ಅವರೆ ಅತ್ಯುತ್ತಮ ಪೌಷ್ಠಿಕಾಂಶವುಳ್ಳ ದ್ವಿದಳಧಾನ್ಯ ಹಾಗೂ ಎಣ್ಣೆ ಕಾಳಾಗಿದ್ದು, ಇದರಲ್ಲಿ ಶೇ 40ರಷ್ಟು ಸಸಾರಜನಕ ಮತ್ತು ಶೇ. 20ರಷ್ಟು ಎಣ್ಣೆಯ ಅಂಶವನ್ನು ಹೊಂದಿದ್ದು, ಶರೀರದ ಬೆಳವಣಿಗೆ ಮತ್ತು ರಕ್ಷಣೆಗೆ ಬೇಕಾಗುವ ಸುಣ್ಣ, ಕಬ್ಬಿಣಾಂಶ, ಸಾಕಷ್ಟು ಪ್ರಮಾಣದಲ್ಲಿವೆ. ಸೋಯಾ ಅವರೆ ಸಾಮಾನ್ಯ ಜನರಿಗೂ ಸಹ ಕೈಗೆಟುಕುವಂತದ್ದು. ಪ್ರತಿ ದಿನದ ಸಮತೋಲನ ಆಹಾರದಲ್ಲಿ ಸುಮಾರು 30-50ಗ್ರಾಂ ಸಂಸ್ಕರಿಸಿದ ಸೋಯಾ ಅಥವಾ ಸೋಯಾ ಉತ್ಪನ್ನಗಳ ಸೇವನೆ ಆರೋಗ್ಯ ದೃಷ್ಠಿಕೋನದಿಂದ ಉತ್ತಮವಾಗಿದೆ.

ಕೆಲವೊಂದು ಶಿಶುಗಳಿಗೆ ತಾಯಿ ಹಾಲು ಹಾಗೂ ಹಸು, ಎಮ್ಮೆ ಇವುಗಳ ಹಾಲು ಶರೀರಕ್ಕೆ ಒಗ್ಗುವುದಿಲ್ಲ. ಅತಂಹ ಸಂದರ್ಭಗಳಲ್ಲಿ ಸೋಯಾ ಅವರೆಯಿಂದ ತಯಾರಿಸಿದ ಹಾಲು ಮಾತ್ರವೇ ಶರೀರಕ್ಕೆ ಒಗ್ಗುವುದೆಂದು ಕಂಡುಹಿಡಿಯಲಾಗಿದ್ದು, ಅದರಿಂದ ಹಲವಾರು ಶಿಶುಗಳ ಪೋಷಣೆ ನಡೆಯುತ್ತಿದೆ.

source: nigeriagalleria.com

ಸೋಯಾ ಅವರೆಯ ತಿಂಡಿಗಳನ್ನು ತಯಾರಿಸುವುದರಲ್ಲಿ ಸೋಯಾ ಅವರೆಯನ್ನು ಉದ್ದಿನ ಬೇಳೆಗೆ ಬದಲಾಗಿ ಶೇಕಡಾ 50 ಅಥವಾ ಹೆಚ್ಚು ಪ್ರಮಾಣದಲ್ಲಿ ಬಳಸಬಹುದು. ಇದರಿಂದಾಗಿ, ತಿಂಡಿಗಳಲ್ಲಿ ಸಸಾರಜನಕದ ಪ್ರಮಾಣ ಹೆಚ್ಚಾಗುವುದಲ್ಲದೆ ಅವನ್ನು ತಯಾರಿಸುವ ಖರ್ಚಿನಲ್ಲಿಯೂ ಸಹ ಉಳಿತಾಯವಾಗುತ್ತದೆ.

ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಯೋಗ್ಯ. ಕ್ಯಾನ್ಸರ್ ತಡೆಗಟ್ಟುವ ಗುಣವಿರುವುದರಿಂದ ಸೋಯಾ ಅವರೆ, ಔಷಧಿಯಾಗಿಯೂ ಆಹಾರದಲ್ಲಿ ಬಳಕೆಯಲ್ಲಿದೆ.

source: beautyglimpse.com

ಸೋಯಾ ಅವರೆಯಲ್ಲಿರುವ ಪೋಷಕಾಂಶಗಳು.

ಸೋಯಾ ಅವರೆಯಲ್ಲಿ ಪೌಷ್ಟಿಕಾಂಶಗಳನ್ನು ನೋಡಿದರೆ, ಅದು ಚಮತ್ಕಾರಿಕ ಧಾನ್ಯವೇ ಎನ್ನಬಹುದು. ಸೋಯಾ ಅವರೆಯಲ್ಲಿ ಶೇಕಡಾ 43 ಸಸಾರಜನಕ (ಪ್ರೋಟೀನ್) ಅಂಶವಿದೆ. ಇಷ್ಟು ಪ್ರಮಾಣದ ಸಸಾರಜನಕವು ಬೇರೆ ಯಾವುದೇ ಆಹಾರ ಪದಾರ್ಥಗಳಲ್ಲೂ ಇಲ್ಲ. ಮೀನಿನಲ್ಲಿ ಶೇಕಡಾ 16 ರಿಂದ 20 ಇದ್ದರೆ, ಮೊಟ್ಟೆಯಲ್ಲಿ ಶೇಕಡಾ 13 ರಿಂದ 14, ಮಾಂಸದಲ್ಲಿ ಶೇಕಡಾ 18 ರಿಂದ 20 ಸಸಾರಜನಕವಿರುವುದು. ಸೋಯಾ ಅವರೆಯಲ್ಲಿ ಹೆಚ್ಚಿಗೆ ಸಸಾರಜನಕ ಇದೆ ಎನ್ನುವುದಷ್ಟೆ ಮಹತ್ವವಲ್ಲ. ಅದರ ಗುಣಮಟ್ಟವು ಕೂಡ ಒಳ್ಳೆಯದು. ತೃಣ ಧಾನ್ಯಗಳಲ್ಲಿ ಇಲ್ಲದಿರುವ ಲೈಸಿನ್ ಅಮೈನೋ ಆಮ್ಲ (6.4%) ಇದರಲ್ಲಿರುವುದು ಇದರ ವೈಶಿಷ್ಟ್ಯವಾಗಿದೆ. ಈ ಗುಣ ಮಟ್ಟವನ್ನು ಮಾಂಸಾಹಾರ ಪದಾರ್ಥಗಳಿಗೆ ಹೋಲಿಸಬಹುದಾಗಿದೆ.

source: cdn.authoritynutrition.com

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಸಾರಜನಕ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಸೋಯಾ ಅವರೆಯ ಪೌಷ್ಠಿಕ ಮೌಲ್ಯ ಅರಿತು ಹೆಚ್ಚಾಗಿ ಬಳಸಬೇಕಾಗಿದೆ. ಹೆಚ್ಚಿನ ಮೇದಸ್ಸು (19.5 ಗ್ರಾಂ.) ಹೊಂದಿರುವುದರಿಂದ ಇದು ಶಕ್ತಿದಾಯಕ ಆಹಾರವು ಆಗಿದೆ. 100 ಗ್ರಾಂ. ಸೋಯಾ ಅವರೆಯು 432 ಕಿಲೋ ಕ್ಯಾಲರಿ ಶಕ್ತಿಯನ್ನೊದಗಿಸುತ್ತದೆ. ಸೋಯಾ ಅವರೆಯಲ್ಲಿ ಸುಣ್ಣದಂಶ, ರಂಜಕ ಹಾಗೂ ಕಬ್ಬಿಣ ಹೆಚ್ಚಿನ ಪ್ರಮಾಣದಲ್ಲಿವೆ. ಇದು ಎ,ಬಿ,ಡಿ,ಇ, ಮತ್ತು ಕೆ ಜೀವಸತ್ವಗಳನ್ನು ಹೊಂದಿರುತ್ತದೆ. ಸೋಯಾ ಅವರೆಯಲ್ಲಿ ಶರ್ಕರ ಪಿಷ್ಟ ಶೇಕಡಾ 25 ರಷ್ಟು ಕಡಿಮೆ ಇರುವುದರಿಂದ, ಇದು ಮಧು ಮೇಹ ರೋಗಿಗಳಿಗೆ ಅತ್ಯುತ್ತಮ.

ಸೋಯಾ ಅವರೆ ಔಷಧಿಯಾಗಿಯೂ ಆಹಾರದಲ್ಲಿ ಬಳಕೆ

source: maangchi.com

ಇಡ್ಲಿ, ದೋಸೆ ಆಂಬೊಡೆ ಮೊದಲಾದ ಆಹಾರ ತಯಾರಿಕೆಯಲ್ಲಿ ಸೋಯಾ ಅವರೆ ಬಳಸುವುದರಿಂದ ಪೌಷ್ಟಿಕವಾದ ಆಹಾರ ದೊರೆಯುತ್ತದೆ. 1 ಕೆ.ಜಿ. ಗೋಧಿಗೆ 100 ಗ್ರಾಂ ಸೋಯಾ ಬೆರೆಸಿ ಹಿಟ್ಟು ಮಾಡಿಸುವುದರಿಂದ ಚಪಾತಿ ಸ್ವಾದಿಷ್ಟಕರವಾಗಿರುತ್ತದೆ. ಹಾಗೆ ರಾಗಿಗೂ ಬೆರೆಸಿ ಹಿಟ್ಟು ಮಾಡಿಸಿ ಮುದ್ದೆ ಮಾಡುವುದರಿಂದ ಸತ್ವಯುತ, ಸಮತೋಲನದ ಆಹಾರ ನಮಗೆ ದೊರೆಯುತ್ತದೆ.