ಬೇಸಿಗೆಯಲ್ಲಿ ದಿನವೂ ಎಳನೀರನ್ನು ಕುಡಿಯುವುದರಿಂದ ನಾನಾ ಖಾಯಿಲೆಗಳಿಗೆ ರಾಮಬಾಣ!!

0
1780

ರಾಜ್ಯದಲ್ಲಿ ಬಿಸಿಲಿನ ಧಗ ದಿನೇ ದಿನೇ ಹೆಚ್ಚಾಗುತ್ತದೆ. ಇದ್ರಿಂದ ಬಚಾವಾಗಲು ಜನ ತಂಪು ಪಾನಿಯಗಳ ಮೊರೆ ಹೋಗ್ತಿದ್ದಾರೆ. ಇದ್ರಲ್ಲೂ ಜನರ ಮೊದಲ ಆದ್ಯತೆ ಎಳನೀರು. ಎಳನೀರು ದಾಹ ತಣಿಸಿ, ನಿಶಕ್ತಿ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಿದ್ರೆ ಎಳನೀರಿನ ಉಪಯೋಗ ಎಷ್ಟು ಗೊತ್ತಾ?

ಎಳನೀರು ಆರೋಗ್ಯದ ವೃದ್ಧಿಗೆ ವೈದ್ಯರು ಹೇಳುವ ಪಾನೀಯ. ಈ ಪಾನೀಯದಲ್ಲಿ ಖನಿಜ, ಲವಣ, ಸಕ್ಕರೆ ಇದೆ. ದೆಹ ಚಟುವಟಿಕೆಗಳಿಂದ ಕೂಡಿರಲು ಎಳನೀರು ತುಂಬು ಯೋಗ್ಯ. ಇನ್ನು ಈ ಪಾನೀಯ ದೇಹದಲ್ಲಿ ನೀರಿನ ಪ್ರಮಾಣವನ್ನು ಒದಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಈಗಿನ ಕಾಲದ ಕೋಲ್ಡ್​ ಕ್ರೀಮ್​ ಕೆಲಸವನ್ನು ಸಹ ಎಳನೀರು ಮಾಡುತ್ತದೆ. ಈ ಪಾನೀಯವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿನ ಜಿಡ್ಡು ಕಡಿಮೆ ಆಗುತ್ತದೆ. ಅಲ್ಲದೆ ಇದರ ಸೇವನೆಯಿಂದ ಕ್ಯಾನ್ಸರ್​ ಸಂಭವನೆ ಕಡಿಮೆ.

  • ಮನುಷ್ಯನ ಉತ್ತಮ ಆರೋಗ್ಯಕ್ಕೆ ರಕ್ತ ಸಂಚಾರ ಬಹು ಮುಖ್ಯ. ಇದರ ಸೇವನೆಯಿಂದ ರಕ್ತ ಸಂಚಾರ ಸಲೀಸಾಗುತ್ತದೆ. ಅಲ್ಲದೆ ಕೆಟ್ಟ ಕೊಬ್ಬು ಶೇಖರಣೆ ಆಗದಂತೆ ನೋಡುತ್ತದೆ. ಒಳ್ಳೆ ಕೊಬ್ಬಿನ ಅಂಶ ಜಾಸ್ತಿ ಮಾಡಿ, ಹೆಚ್ಚು ಶಕ್ತಿ ನೀಡಲು ಇದು ಉಪಯೋಗ.
  • ದೇಹದಲ್ಲಿ ಸೋಡಿಯಂ ಮತ್ತು ಪೊಟಾಶಿಯಂ ಹತೋಟಿಗೆ ತರಲು, ಎಳನೀರು ಸಹಾಯಕ ಇದ್ರಿಂದ ರಕ್ತದ ಒತ್ತಡ ಕಡಿಮೆ ಆಗುತ್ತೆ.

  • ದೇಹದಲ್ಲಿನ ಕೊಬ್ಬು ಕರಗಿಸಿ ಪಚನ ಕ್ರಿಯೆ ಸುಗಮವಾಗಿ ಮಾಡುತ್ತದೆ. ಅಲ್ಲದೆ ಜೀರ್ಣಕ್ರೀಯೆ ಸಹ ಚುರುಕಾಗುತ್ತದೆ.
  • ನಾವು ಕೆಲಸ ಮಾಡುವಾಗ ಮೈ ಕೈ ನೋಯಿಸುತ್ತದೆ. ಕೂಳಿತುಕೊಳ್ಳಲು, ಏಳಲು ಸಮಸ್ಯೆ ಇದ್ರೆ, ಎಳನೀರು ಸೆವಿಸಿದ್ರೆ ಕಡಿಮೆಯಾಗುತ್ತದೆ. ಅಲ್ಲದೆ ದೇಹದಲ್ಲಿನ ಮೂಳೆ ಗಟ್ಟಿಯಾಗುತ್ತದೆ. ಅಲ್ಲದೆ ಇದನ್ನು ಮುಖಕ್ಕೆ ಹಚ್ಚಿಕೊಂಡ್ರೆ ಮಾಯಿಶ್ಚರೈಸರ್ ತರಹ ಕೆಲಸ ಮಾಡತ್ತೆ

  • ಇನ್ನು ತಾಂತ್ರಿಕ ಜೀವನಕ್ಕೆ ಹೊಂದಿಕೊಂಡ ಕೆಲಸ ಮಾಡಲು ಒತ್ತಡ ಮಹತ್ವದ ಕಾರ್ಯವನ್ನು ವಹಿಸುತ್ತದೆ. ಈ ಒತ್ತಡವನ್ನು ನಿವಾರಿಸಲು ಎಳನೀರು ಸೇವನೆ ಸಹಾಯಕ.
  • ಇನ್ನು ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವದಕ್ಕಿಂತ ಮೊದಲು, ಈ ಪಾನೀಯ ಸೇವಿಸಿದ್ರೆ ಉತ್ತಮ. ಅಲ್ಲದೆ ಇದರ ಪ್ರಾಶಾನದಿಂದ ಹೊಟ್ಟೆಯಲ್ಲಿನ ಹುಳಗಳು ಸಾಯುತ್ತವೆ. ಆಮ್ಲವನ್ನು ತೆಗೆದು ಹಾಕುತ್ತೆ.

  • ಎಳನೀರು ಸೇವನೆಯಿಂದ ಮೂತ್ರಪಿಂಡದಲ್ಲಿ ಕಲ್ಲಾಗಿದ್ದರೆ ಇದು ಕರಿಗುತ್ತದೆ. ಚರ್ಮರೋಗಕ್ಕೆ ರಾಮಬಾಣ.
  • ಇನ್ನು ತಲೆಯಲ್ಲಿನ ಹೊಟ್ಟು ಇದ್ರೆ, ಇದನ್ನು ತಲೆಗೆ ಬಳಸಿ, ಆರಲು ಬಿಟ್ಟರೆ ಕೂದಲು ಹೊಳಪಾಗುತ್ತದೆ, ಅಲ್ಲದೆ ಉದುರೋದಿಲ್ಲ.