ವೇದದ ಕಾಲದಲ್ಲಿಯೇ ಪ್ರಚಲಿತದಲ್ಲಿದ್ದ ಅರಿಶಿಣ ಇದಕ್ಕಿಂತ ಉತ್ತಮ ಔಷಧಿ ಮತ್ತೊಂದಿಲ್ಲ.!

0
977

ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ:
ಅರಿಶಿಣಯನ್ನು ಸಕ್ಕರೆ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸುವ ಮೂಲಕ ಇನ್ಸುಲಿನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಅರಿಶಿನದ ಇನ್ನೊಂದು ಉಪಯೋಗವೆಂದರೆ ಇದು ಇನ್ಸುಲಿನ್ ರೋಧವನ್ನು ಕಡಿಮೆ ಮಾಡಿ ಟೈಪ್2 ಸಕ್ಕರೆ ಕಾಯಿಲೆ ಉಂಟಾಗುವುದನ್ನು ತಡೆಗಟ್ಟಲು ನೆರವಾಗುತ್ತದೆ.

source: ayushakti.com

ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡುತ್ತದೆ:
ಅರಿಶಿಣವನ್ನು ಆಹಾರದ ಭಾಗವಾಗಿ ಉಪಯೋಗಿಸುವುದರಿಂದ ಸೆರಮ್ ಕೊಲೆಸ್ಟರಾಲ್ ಮಟ್ಟವು ಕಡಿಮೆಯಾಗುತ್ತದೆಯೆಂದು ಅಧ್ಯಯನಗಳು ತಿಳಿಸಿವೆ. ಅತಿಯಾದ ಕೊಲೆಸ್ಟರಾಲ್‍ನಿಂದ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕೊಲೆಸ್ಟರಾಲ್ ಮಟ್ಟದ ಸರಿಯಾದ ನಿರ್ವಹಣೆಯಿಂದ ಹಲವಾರು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟ ಬಹುದಾಗಿದೆ.

source: santelog.promety.net

ಇಮ್ಯುನಿಟಿ ಬೂಸ್ಟರ್:
ಅರಿಶಿಣವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಆಂಟಿಬ್ಯಾಕ್ಟಿರಿಯಲ್, ಆಂಟಿವೈರಲ್, ಆಂಟಿಫಂಗಲ್ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬಲಿಷ್ಠ ರೋಗನಿರೋಧಕ ವ್ಯವಸ್ಥೆಯು ಶೀತ, ಜ್ವರ ಮತ್ತು ಕೆಮ್ಮಿನ ಸಂಭವನೀಯತೆಯನ್ನು ಕಡಿಮೆ ಮಾಡುತ್ತವೆ. ನಿಮಗೆ ನೆಗಡಿ ಕೆಮ್ಮು ಅಥವಾ ಜ್ವರವುಂಟಾದರೆ ಒಂದು ಚಮಚ ಅರಿಶಿಣ ಪುಡಿಯನ್ನು ಒಂದು ಗ್ಲಾಸ್ ಬಿಸಿಹಾಲಿನಲ್ಲಿ ಕರಗಿಸಿ ದಿನಕ್ಕೊಮ್ಮೆ ಕುಡಿಯುವುದರಿಂದ ಬೇಗ ಚೇತರಿಕೆ ಕಂಡುಬರುತ್ತದೆ.

source: youtube.com

ಗಾಯವನ್ನು ಮಾಗಿಸುತ್ತದೆ:
ಅರಿಶಿಣ ಒಂದು ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಪದಾರ್ಥವಾಗಿದ್ದು ಇದನ್ನು ಸೋಂಕು ನಿವಾರಕವಾಗಿ ಬಳಸಬಹುದು. ನಿಮಗೆ ಗಾಯ ಅಥವಾ ಸುಟ್ಟ ಗಾಯಗಳಾಗಿದ್ದರೆ ಆ ಜಾಗದ ಮೇಲೆ ಅರಿಶಿನಪುಡಿಯನ್ನು ಉದುರಿಸುವುದರಿಂದ ಚೇತರಿಕೆಯ ಪ್ರಮಾಣವು ಹೆಚ್ಚುತ್ತದೆ. ಅರಿಶಿನವು ಹಾನಿಗೊಳಗಾದ ಚರ್ಮವನ್ನು ರಿಪೇರಿ ಮಾಡುತ್ತದೆ. ಆದ್ದರಿಂದ ಇದನ್ನು ಸೋರಿಯಾಸಿಸ್ ಮತ್ತು ಚರ್ಮದ ಇನ್ನಿತರ ಉರಿಯೂತ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು.

source: i0.wp.com

ಅರಿಶಿಣ ಮತ್ತು ಅರ್ಥರೈಟಿಸ್:
ಕಕ್ರ್ಯುಮಿನ್‍ನ ಉರಿಯೂತಗಳನ್ನು ಕಡಿಮೆ ಮಾಡುವ ಗುಣದಿಂದಾಗಿ ಇದು ಮೂಳೆ ಸಂಧಿವಾತ ಮತ್ತು ರುಮೆಟೈಡ್ ಸಂಧಿವಾತಗಳ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದರ ಆಂಟಿಆಕ್ಸಿಡೆಂಟ್ ಗುಣವು ದೇಹದ ಸೆಲ್‍ಗಳನ್ನು ಮತ್ತು ಅಂಗಾಂಶಗಳಿಗೆ ಹಾನಿಮಾಡುವ ಪ್ರೀ ರ್ಯಾಡಿಕಲ್‍ಗಳನ್ನು ಕೊಲ್ಲುತ್ತವೆ. ರುಮೆಟೈಡ್ ಸಂಧಿವಾತದಿಂದ ಬಳಲುತ್ತಿರುವವರು ನಿಯಮಿತವಾಗಿ ಅರಿಶಿನವನ್ನು ಸೇವಿಸಿದರೆ ಸಣ್ಣ ಮತ್ತು ಮಧ್ಯಮ ಸಂಧಿನೋವು ಹಾಗೂ ಸಂಧಿ ಊತದಿಂದ ಹೆಚ್ಚಿನ ಆರಾಮವನ್ನು ಕಾಣುತ್ತಾರೆ.

source: i0.wp.com