ಊಟ ಆದ ಮೇಲೆ ೧೫ ನಿಮಿಷ ನಡಿದ್ರೆ ಎಷ್ಟೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ ಇವತ್ತಿಂದನೇ ಈ ಅಭ್ಯಾಸ ರೂಡಿಸಿಕೊಳ್ತೀರಾ..

0
4753

Kannada News | Health tips in kannada

ಒತ್ತಡಯುಕ್ತ ಬ್ಯುಸಿ ಜೀವನದಲ್ಲಿ ನಮಗೆ ಎಕ್ಸರ್ಸೈಜ್ ಮಾಡ್ಲಿಕ್ಕೆ ಪುರುಸೊತ್ತೇ ಇರಲ್ಲ. ವ್ಯಾಯಾಮ ರಹಿತ ಜೀವನ ಶೈಲಿ ನಾನಾ ರೋಗಗಳಿಗೆ ಎಡೆಮಾಡಿಕೊಡುತ್ತವೆ. ಹೇಗಪ್ಪಾ ಟೈಮ್ ಮ್ಯಾನೇಜ್ ಮಾಡೋದು ಅನ್ನೋವರಿಗೆ ಇಲ್ಲಿದೆ ಉಪಾಯ. ಗಂಟೆಗಟ್ಲೆ ಪಾರ್ಕ್ ನಲ್ಲಿ, ಜಿಮ್ ನಲ್ಲಿ ವ್ಯಾಯಾಮ ಮಾಡಕ್ಕೆ ಆಗ್ತಿಲ್ಲ ಅಂದ್ರೆ ಕನಿಷ್ಠ ಊಟ ಆದ್ಮೇಲಾದ್ರು ೧೦೦ ಹೆಜ್ಜೆ ನಡೀರಿ.. ಹೀಗೆ ನಡೆಯೋದ್ರಿಂದ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತಾ?

೧) ಜೀರ್ಣಶಕ್ತಿ ಹೆಚ್ಚಾಗುತ್ತದೆ:

ಕಂಠ ಪೂರ್ತಿ ತಿಂದು ಹೊಟ್ಟೆ ಬಾರ ಆಗಿದ್ರೆ ಕೈ ತೊಳೆದ ತಕ್ಷಣ ಒಂದು ಹತ್ತು ನಿಮಿಷ ಅಡ್ಡಾಡಿ.ಹೀಗೆ ಮಾಡೋದ್ರಿಂದ ಅಧಿಕ ಗ್ಯಾಸ್ಟ್ರಿಕ್ ರಸಗಳು ಉತ್ಪಾದನೆಯಾಗಿ ಹೊಟ್ಟೆಯಲ್ಲಿರುವ ಆಹಾರ ಶೀಘ್ರ ಜೀರ್ಣವಾಗುತ್ತದೆ. ಹೀಗೆ ನಡಿಯೋದ್ರಿಂದ ಹೊಟ್ಟೆಯುಬ್ಬರ, ಅಸಿಡಿಟಿ, ಅಜೀರ್ಣ,ಮಲಭದ್ದತೆ ಮುಂತಾದ ಹೊಟ್ಟೆಯ ಸಮಸ್ಯೆಗಳಿಂದ ದೂರವಿರಬಹುದು.

೨) ಮೆಟಬೋಲಿಸಂ ಅಧಿಕಗೊಳಿಸುತ್ತದೆ:

ಮೆಟಬೋಲಿಸಂ ಹೆಚ್ಚಾದಷ್ಟು ಜೀವಕೋಶಗಳ ಕಾರ್ಯದಕ್ಷತೆ ಹೆಚ್ಚಾಗಿ ಕ್ಯಾಲೊರಿ ಬರ್ನಿಂಗ್ ಅಧಿಕವಾಗುತ್ತದೆ. ಇದರಿಂದ ಅಂಗಾಂಗಗಳಲ್ಲಿ ಶೇಖರಗೊಳ್ಳುವ ಬೊಜ್ಜಿನ ಪ್ರಮಾಣ ಕಡಿಮೆಯಾಗಿ ಅವುಗಳ ಆರೋಗ್ಯವು ವೃದ್ಧಿಸುತ್ತದೆ. ಹಸಿವು ಅಧಿಕವಾಗುತ್ತದೆ.

೩) ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆ ಮಾಡುತ್ತದೆ:

ಅನಿಯಮಿತ ಆಹಾರ ಪದ್ದತಿಯು ನಮ್ಮ ರಕ್ತದಲ್ಲಿನ ಟ್ರೈಗ್ಲಿಸೆರೈಡ್ ಅಂಶವನ್ನು ಅಧಿಕಗೊಳಿಸಿ ಹೃದ್ರೋಗಗಳಿಗೆ ಮೂಲ ಕಾರಣವಾಗುತ್ತಿವೆ. ಊಟದ ನಂತರದ ನಡಿಗೆ ಈ ಟ್ರೈಗ್ಲಿಸೆರೈಡ್ ಅನ್ನು ಕಡಿಮೆಗೊಳಿಸಿ ಹೃದ್ರೋಗ ಬಾರದಂತೆ ತಡೆಗಟ್ಟುತ್ತದೆ. ನಡಿಗೆಯು ಹೃದಯದ ವ್ಯಾಯಾಮ ಕೂಡ. ನಡಿಗೆಯಿಂದ ಹೃದಯದ ಅರೋಗ್ಯ ಕೂಡ ವೃದ್ಧಿಸುತ್ತದೆ.

೪) ನಿದ್ರಾಹೀನತೆ ತಡೆಗಟ್ಟುತ್ತದೆ:

ಅತಿಯಾದ ಒತ್ತಡ, ಅನಿರ್ದಿಷ್ಟ ನಿದ್ರೆಯ ವೇಳೆಯು ನಿದ್ರಾಹೀನತೆಗೆ ಮೂಲಕಾರಣವಾಗುತ್ತಿವೆ. ರಾತ್ರಿ ಊಟವಾದ ಬಳಿಕ ೨೦ ನಿಮಿಷ ನಡೆದ್ದಲ್ಲಿ ಕಾಲುಗಳ ಸ್ನಾಯುಗಳು ಬಲಿಷ್ಠಗೊಳ್ಳುವುದಲ್ಲದೆ ನಿದ್ರೆಯು ಚೆನ್ನಾಗಿ ಬರುವುದು.

೫) ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ:

ಊಟವಾದ ಬಳಿಕ ೨೦ ನಿಮಿಷಗಳ ಕಾಲ ವಾಕ್ ಮಾಡಿದ್ದಲ್ಲಿ ಊಟದಿಂದ ರಕ್ತಕ್ಕೆ ಬಂದ ಸಕ್ಕರೆ ಅಂಶಗಳು ಕರಗಿ ಸಮಸ್ಥಿತಿಗೆ ಬರುತ್ತದೆ.ಇದರಿಂದ ಅಧಿಕ ಸಕ್ಕರೆ ಅಂಶಗಳಿಂದ ಉಂಟಾಗುವ ಪಾದ ಉರಿ,ಕಣ್ಣು ಮಂಜಾಗುವಿಕೆ, ಸುಸ್ತು, ಇತರೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಮಧುಮೇಹಿಗಳಿಗಂತೂ ಇದು ರಾಮಬಾಣ.

೬) ಬೊಜ್ಜು ಕಡಿಮೆ ಮಾಡುತ್ತದೆ:

ಊಟವಾದ ಬಳಿಕ ನಡಿದ್ದಲ್ಲಿ ಮೆಟಬೋಲಿಸಂ ಹೆಚ್ಚಾಗಿ ಕ್ಯಾಲೊರಿ ಬರ್ನಿಂಗ್ ಅಧಿಕವಾಗುತ್ತದೆ. ಇದರ ಪರಿಣಾಮವಾಗಿ ಸಂಗ್ರಹಗೊಂಡ ಬೊಜ್ಜು ರಕ್ತಕ್ಕೆ ಸೇರಿ ಕರಗಿ ಎನರ್ಜಿ ನೀಡುತ್ತದೆ. ಇದರಿಂದ ನಿಮ್ಮ ಹೊಟ್ಟೆಯ/ಸೊಂಟದ ಸುತ್ತಳತೆಯು ಕಡಿಮೆಯಾಗಿ ಸ್ತೂಲಕಾಯ, ಮಧುಮೇಹ, ರಕ್ತದೊತ್ತಡ ಮುಂತಾದ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆ.

Also Read: ಧನಿಯಾದಲ್ಲಿರೋ ಆರೋಗ್ಯಕಾರಿ ಗುಣ ಗೊತ್ತಾದ್ರೆ ದಿನಸಿ ಲಿಸ್ಟ್ ನಲ್ಲಿ ಧನಿಯಾ ಹೆಸರು ಫಸ್ಟ್ ಬರೀತೀರಾ..!!

Watch: