ಮಳೆಗಾಲದಲ್ಲಿ ಅರೋಗ್ಯ ಸಂರಕ್ಷಣೆ ಹೇಗೆ?

0
1000

ಮಳೆಗಾಲ ಎಂದೊಡನೆ ತತ್ತಕ್ಷಣ ನೆನಪಾಗುವುದು ಜಿಟಿ ಜಿಟಿ ಮಳೆ, ಬಣ್ಣ ಬಣ್ಣದ ಕೊಡೆ, ತಂಪಾದ ವಾತಾವರಣ, ಅದರಲ್ಲೂ ಏನಾದರು ಬಿಸಿ ಬಿಸಿ ತಿನಸುಗಳು ಸವಿಯಲು ಸಿಕ್ಕರೆ ಅದೇ ಸ್ವರ್ಗ.! ಮಳೆಗಾಲ ಎಷ್ಟು ರಮಣೀಯವೋ ಅಷ್ಟೇ ಅಪಾಯಕಾರಿ ಕೂಡ. ನಾವು ನಮ್ಮ ಆರೋಗ್ಯದಲ್ಲಿ ಎಚ್ಚರ ವಹಿಸದಿದ್ದಲ್ಲಿ ಅನೇಕ ರೋಗಗಳ ಶಿಕಾರಿಗಳಾಗುತ್ತೇವೆ.

 ಮಳೆಗಾಲದಲ್ಲಿ ಅರೋಗ್ಯ ರಕ್ಷಣೆ:
೧) ಆರೋಗ್ಯಕರ ಆಹಾರ ಪದ್ಧತಿ:

Related image
ಮಳೆಗಾಲದಲ್ಲಿ ಸಹಜವಾಗಿ ಪಚನಾಂಗ ವ್ಯೂಹಗಳ ಕಾರ್ಯಕ್ಷಮತೆ ಕಡಿಮೆಯಾಗಿರುತ್ತದೆ. ಈ ಕಾಲದಲ್ಲಿ ನೀರಿನಿಂದ ಉಂಟಾಗುವ ಖಾಯಿಲೆಗಳು ಅಧಿಕವಾಗಿರುವುದರಿಂದ ಕಾಯಿಸಿ ಶೋಧಿಸಿದ, ಉಗುರು ಬೆಚ್ಚಗಿನ ನೀರನ್ನು ಸೇವಿಸುವುದು ಉತ್ತಮ. ರಸ್ತೆ ಬದಿಯಲ್ಲಿ ಸಿಗುವ ಚಾಟ್ಸ್, ಜ್ಯೂಸು ಹಾಗು ಇತರೆ ಕರಿದ ತಿಂಡಿಗಳನ್ನು ನಿಮ್ಮಿಂದ ದೂರವಿಡಿ. ರಾತ್ರಿ ಹೊತ್ತು ಹಸಿ ತರಕಾರಿ ಹಾಗು ಹಣ್ಣುಗಳ ಸೇವನೆಯನ್ನು ಕಡಿಮೆಗೊಳಿಸಿ. ಆದಷ್ಟು ವಿಟಮಿನ್ ಸಿ ಉಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚ್ಚಾಗುತ್ತದೆ. ಆದಷ್ಟು ಮನೆಯಲ್ಲಿ ಸಿದ್ಧಪಡಿಸಿದ ಊಟವನ್ನು ಸೇವಿಸಿ.

೨) ಹೆಚ್ಚು ನೀರನ್ನು ಸೇವಿಸಿ:

Related image
ಈ ಹವಾಮಾನದಲ್ಲಿ ಬಾಯಾರಿಕೆ ಕಡಿಮೆ, ಹಾಗಂದ ಮಾತ್ರಕ್ಕೆ ನೀರು ಕುಡಿಯಬಾರದೆಂದಲ್ಲ.
ದಿನಕ್ಕೆ ಕನಿಷ್ಠ ೨ ರಿಂದ ೩ ಲೀ ನಷ್ಟು ನೀರನ್ನು ಸೇವಿಸಬೇಕು.
ಸೋಡಾ, ಕಾರ್ಬೊನೇಟೆಡ್ ನೀರು, ಕೆಫಿನೇಟೆಡ್ ದ್ರವ, ಹಾಗು ಆಲ್ಕೋಹಾಲ್ ಗಳಿಂದ ದೂರವಿರಿ.

೩) ಮಳೆಯಲ್ಲಿ ನೆನೆಯುವುದನ್ನು ಕಡಿಮೆಮಾಡಿ:

Image result for soaking in rain:
ಮಳೆಯಲ್ಲಿ ನೆನೆಯುವುದು ಎಷ್ಟು ಚೇತೋಹಾರಿಯೋ ಅಷ್ಟೇ ಅಪಾಯಕಾರಿ ಕೂಡ.
ಮಳೆಯಲ್ಲಿ ನೆನೆದಾಗ ವಿಷಕಾರಿ ಬ್ಯಾಕ್ಟೀರಿಯಾ ಹಾಗು ವೈರಸ್ ಗಳು ದೇಹವನ್ನು ಪ್ರವೇಶಿಸಿ ಅನೇಕ ರೋಗಗಳನ್ನುಂಟು ಮಾಡುತ್ತವೆ.
ದೇಹವು ಬಹಳ ಹೊತ್ತು ಒದ್ದೆಯಾಗಿದ್ದರೆ ಕಾಲಿನ ಸಂದಿ, ತೊಡೆಗಳ ಸಂಧಿ, ಕಂಕುಳಲ್ಲಿ ಫಂಗಲ್ ಇನ್ಫೆಕ್ಷನ್ ಆಗಿ  ಉರಿ, ತುರಿಕೆ ಉಂಟಾಗುತ್ತದೆ.
ಒದ್ದೆಬಟ್ಟೆಯೊಂದಿಗೆ ಎಸಿ ಒಳಗೆ ಕುಳಿತುಕೊಳ್ಳಬೇಡಿ.
ಯಾವಾಗಲೂ ಒಣ, ಬೆಚ್ಚಗಿನ ಬಟ್ಟೆ ಹಾಗು ಕಾಲಚೀಲಗಳನ್ನು ಧರಿಸಿ ಓಡಾಡಿ. ಹೀಗೆ ಮಾಡುವುದರಿಂದ ದೇಹದ ಉಷ್ಣತೆ ಸಮತೋಲನದಲ್ಲಿರುತ್ತದೆ.

೪) ಸೊಳ್ಳೆಗಳಿಂದ ದೂರವಿರಿ:

Related image
ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಅವುಗಳ ಹಾವಳಿ ಅಧಿಕ.
ಸೊಳ್ಳೆಗಳು ಡೆಂಗ್ಯೂ ಹಾಗೂ ಮಲೇರಿಯಾನಂತಹ ಖಾಯಿಲೆಗಳನ್ನು ಹರಡುವುದರಿಂದ ಎಚ್ಚರಿಕೆ ಅತ್ಯಗತ್ಯ.
ಮನೆಯಿಂದ ಹೊರ ಹೋಗುವಾಗ ಮಸ್ಕಿಟೋ ರೆಪೆಲ್ಲೆಂಟ್ ಕ್ರೀಮ್ ಗಳನ್ನೂ ಮೈಗೆ ಹಚ್ಚಿಕೊಳ್ಳಿ
ಮನೆಯಲ್ಲಿ  ಸೊಳ್ಳೆಪರದೆ, ಮಸ್ಕಿಟೋ ರೆಪೆಲ್ಲೆಂಟ್ಗಳನ್ನ ಬಳಸಿ.
ಮನೆ ಸುತ್ತ ಮುತ್ತ ನೀರನ್ನು ಒಂದೆಡೆ ನಿಲ್ಲಲು ಬಿಡಬೇಡಿ.ತಾಜ್ಯ ಪ್ಲಾಸ್ಟಿಕ್, ಹೂಕುಂಡ, ಮೋರಿಗಳಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಿ.

5) ದಿನಕ್ಕೆರಡು ಬಾರಿ ಸ್ನಾನ ಮಾಡಿ:

Image result for Bathing
ಮಳೆಗಾಲದಲ್ಲಿ ಬೆವರುವುದು ಕಡಿಮೆಯಾಗುವುದರಿಂದ ಚರ್ಮದ ಮುಖಾಂತರ ಕಲ್ಮಶಗಳು ಹೊರ ಹೋಗುವುದು ಕಡಿಮೆ.
ದಿನಕ್ಕೆರಡು ಬಾರಿ ಸ್ನಾನ ಮಾಡಿದ್ದಲ್ಲಿ ಚರ್ಮದ ರಕ್ತ ಸಂಚಾರ ಅಧಿಕವಾಗಿ ಅದು ಕಲ್ಮಶಗಳನ್ನು ಹೊರ ಹಾಕುವಲ್ಲಿ ಸಫಲವಾಗುತ್ತದೆ.ಚರ್ಮದ ಮೇಲಿರುವ ಕೀಟಾಣುಗಳನ್ನು ಹೊರ ದಬ್ಬಲು ಸ್ನಾನ ಸಹಾಯಕಾರಿ.

೬)ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ:

Image result for Do not touch your eyes repeatedly
ಮಳೆಗಾಲದಲ್ಲಿ ಕಣ್ಣಿನ ಇನ್ಫೆಕ್ಷನ್ ಗಳಾದ ಕ್ಯಾಂಜೆಕ್ಟುವಿಟಿಸ್ , ಕಣ್ಣುರಿ,  ಕಣ್ಣು ಕೆರೆತ ಜಾಸ್ತಿ.
ಬರಿ ಕೈಯಿಂದ ಕಣ್ಣುಗಳನ್ನು ಮುಟ್ಟಬೇಡಿ ಎದು ಇನ್ಫೆಕ್ಷನ್ ಗೆ ದಾರಿಯಾದೀತು.
ಆಗಾಗ ಕೈಗಳನ್ನು ತೊಳೆದುಕೊಳ್ಳಿ, ಇದರಿಂದ ಹಲವು ಖಾಯಿಲೆಗಳನ್ನು ತಡೆಗಟ್ಟಬಹುದು.
ಕಣ್ಣುಗಳಲ್ಲಿ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಈ ಮೇಲಿನ ಸೂಚನೆಗಳನ್ನು ಪಾಲಿಸಿದಲ್ಲಿ ಈ ಮಳೆಗಾಲ ಸ್ವರ್ಗವಾಗುವುದರಲ್ಲಿ ಸಂದೇಹವೇ ಇಲ್ಲ..