ಪ್ರಧಾನಮಂತ್ರಿ ನ್ಯಾಷನಲ್‌ ಡಯಾಲಿಸಿಸ್‌ ಯೋಜನೆಯ ಅಡಿಯಲ್ಲಿ ಇನ್ಮುಂದೆ ಕಿಡ್ನಿ ರೋಗಿಗಳಿಗೆ ಮನೆಯಲ್ಲೇ ಡಯಾಲಿಸಿಸ್..

0
1094

ಜನರಿಗೆ ಬರುವ ಆರೋಗ್ಯ ತೊಂದರೆಗಳಲ್ಲಿ ಕಿಡ್ನಿ ರೋಗವು ಸಾಮಾನ್ಯವಾಗಿದೆ. ಅದರಂತೆ ಕಿಡ್ನಿ ಸಮಸ್ಯೆ ಇರುವವರು ಡಯಾಲಿಸಿಸ್‌ ಮಾಡಿಸಲೆಬೇಕಾಗುತ್ತೆ. ವಾರದಲ್ಲಿ ಒಂದು ಬಾರಿ ಇಲ್ಲ ಮೂರು ಬಾರಿ ಮಾಡಿಸಬೇಕಾಗುತ್ತೆ. ಇದರಿಂದ ಆಸ್ಪತ್ರೆಗೆ ಜನರು ಓಡಾಡಿ ಸಾಕಾಗಿರುತ್ತೆ, ಇದೆಲ್ಲವನ್ನು ಅರಿತ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ನ್ಯಾಷನಲ್‌ ಡಯಾಲಿಸಿಸ್‌ ಯೋಜನೆಯ ಅಡಿಯಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವರ ಮನೆಯಲ್ಲೇ ಪೆರಿಟೋನಿಯಲ್‌ ಡಯಾಲಿಸಿಸ್‌ ಸೌಲಭ್ಯ ಒದಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.

Also read: ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳು ತುಂಬಾ ನೋವನ್ನುಂಟು ಮಾಡುತ್ತವೆ, ಈ ಮನೆಮದ್ದುಗಳನ್ನು ಪಾಲಿಸಿ ಕಿಡ್ನಿ ಕಲ್ಲುಗಳಿಂದ ಮುಕ್ತಿ ಹೊಂದಿ!!

ಹೌದು ಕಿಡ್ನಿ ಸಮಸ್ಯೆ ಇರುವವರು ಡಯಾಲಿಸಿಸ್‌ಗಾಗಿ ಪ್ರತೀ ವಾರ ಆಸ್ಪತ್ರೆಗೆ ಹೋಗುವ ಸಮಸ್ಯೆ ತಿಳಿದದ್ದೇ. ಆಸ್ಪತ್ರೆ ಓಡಾಟ ತಪ್ಪಿಸುವ ನಿಟ್ಟಿನಲ್ಲಿ ರೋಗಿ ಮನೆಯಲ್ಲಿ ಸ್ವತಃ ತಾನೇ ಡಯಾಲಿಸಿಸ್ ಮಾಡಿಕೊಳ್ಳುವ ಯೋಜನೆ ಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಕಿಡ್ನಿ ರೋಗಿಗಳು ನಿತ್ಯ ಡಯಾಲಿಸಿಸ್ ಮಾಡಿ ಕೊಳ್ಳಲು ರೋಗಿಗಳ ಮನೆಗೆ ಉಚಿತವಾಗಿ ‘ಪೆರಿಟೋನಿಯಲ್ ಡಯಾಲಿಸಿಸ್ ಯೂನಿಟ್’ ನೀಡಲು ಸರಕಾರ ಮುಂದಾಗಿದೆ.

2016ರಲ್ಲಿ ಈ ಯೋಜನೆ ಜಾರಿಯಾದಾಗ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ದಯಾಲಿಸಿಸ್‌ ನೀಡುವ ಯೋಜನೆ ಪರಿಚಯಿಸಲಾಗಿತ್ತು. ಈ ಸೌಲಭ್ಯವನ್ನು ಪಡೆಯಲು ರೋಗಿಗಳು ಪ್ರತಿಬಾರಿಯೂ ಜಿಲ್ಲಾ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇದರಿಂದ ರೋಗಿಗಳಿಗೆ ಹೆಚ್ಚಿನ ಹೊರೆ ಆಗುತ್ತಿತ್ತು. ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರಡು ಪ್ರಸ್ತಾವನೆಯ ಪ್ರಕಾರ ರೋಗಿಗಳ ಮನೆಯಲ್ಲೇ ಪೆರಿಟೋನಿಯಲ್‌ ಡಯಾಲಿಸಿಸ್‌ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಹಿಮೋಡಯಾಲಿಸ್‌ಗೆ ಹೋಲಿಸಿದರೆ ಪೆರಿಟೋನಿಯಲ್‌ ಡಯಾಲಿಸಿಸ್‌ ಭಿನ್ನರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ರಕ್ತ ಶುದ್ಧೀಕರಣ ನಡೆಸುತ್ತದೆ.

Also read: ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಈ ಡಾಕ್ಟರ್ ಬಳಿಯಿದೆ ರಾಮಬಾಣದಂತಹ ಔಷಧಿ!!

ಏನಿದು ಪೆರಿಟೋನಿ ಯಲ್ ಡಯಾಲಿಸಿಸ್’?

ಪೆರಿಟೋನಿ ಯಲ್ ಡಯಾಲಿಸಿಸ್’ ಎಂಬುದು ಆಸ್ಪತ್ರೆಯಲ್ಲಿ ಮಾಡುವ ಹಿಮೋ ಡಯಾಲಿಸಿಸ್‌ಗಿಂತ ಕೊಂಚ ಭಿನ್ನವಾದುದು. ಪೆರಿಟೋನಿಯಲ್ ಡಯಾಲಿಸಿಸ್ ಅನ್ನು ರೋಗಿಗಳು ಸ್ವತಃ ಮನೆ–ಯಲ್ಲೇ ಮಾಡಿ ಕೊಳ್ಳಬಹುದು. ಹೊಟ್ಟೆಯ ಪದರಕ್ಕೆ ಟ್ಯೂಬ್ ಹಾಕಿ, ಅದರ ಮೂಲಕ ಫ್ಲೂಯಿಡ್ ನೀಡಿ ಶುದ್ಧೀಕರಿ ಸುವುದು ಮತ್ತು ಅಲ್ಲಿಂದ ಬರುವ ತ್ಯಾಜ್ಯ ಅಥವಾ ಮೂತ್ರವನ್ನು ಟ್ಯೂಬ್ ಮೂಲಕ ಹೊರ ಹಾಕುವಂತೆ ಮಾಡುವುದು. ಅತ್ಯಂತ ಸರಳ ರೂಪದಲ್ಲಿ ರೋಗಿ ಸ್ವತಃ ಅಥವಾ ತನ್ನ ಸಹಾಯಕರ ನೆರವಿನೊಂದಿಗೆ ಮನೆಯಲ್ಲಿಯೇ ಡಯಾಲಿಸಿಸ್ ಮಾಡಿಕೊಳ್ಳಬಹುದು. ಆರಂಭದಲ್ಲಿ ರೋಗಿಯ ಹೊಟ್ಟೆಗೆ ಟ್ಯೂಬ್ ಜೋಡಿಸುವ ಪ್ರಕ್ರಿಯೆಯನ್ನು ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಮಾಡುತ್ತಾರೆ. ಬಳಿಕ ಮನೆಯಲ್ಲಿ ನಿತ್ಯ ಡಯಾಲಿಸಿಸ್ ಮಾಡಿಕೊಳ್ಳಬಹುದು. ಈ ವ್ಯವಸ್ಥೆಯಿಂದ ರೋಗಿಗಳು ಆಸ್ಪತ್ರೆಗೆ ಬಂದು ಹೋಗುವ ಅಗತ್ಯವಿಲ್ಲ.

ಮನೆಯಲ್ಲೇ ಚಿಕಿತ್ಸೆ ಸಿಗುತ್ತಾ?

Also read: ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್ ಮೊರೆ ಹೋಗೋ ಮುಂಚೆ ಈ ನಾಟಿ ವೈದ್ಯರನೊಮ್ಮೆ ಭೇಟಿ ಮಾಡಿ, ಹಣದ ಜೊತೆ ಆರೋಗ್ಯಾನು ಉಳಿಸಿಕೊಳ್ಳಿ!!

ಈ ಯೋಜನೆಯ ಅಡಿಯಲ್ಲಿ ಚಿಕಿತ್ಸಕರು ರೋಗಿಗಳ ಮನೆಗೆ ಅಥವಾ ಹತ್ತಿರದ ಸಮುದಾಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳೊಂದಿಗೆ ಭೇಟಿ ನೀಡಲಿದ್ದಾರೆ. ಒಂದು ವೇಳೆ ರೋಗಿಗಳಿಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪ್ರಯಾಣಕ್ಕೆ ತಗುಲುತ್ತಿದ್ದ ವೆಚ್ಚ ಉಳಿತಾಯವಾಗಲಿದೆ.