ಮೊಬೈಲ್ ಎಷ್ಟೊಂದು ಉಪಯುಕ್ತ ಎನ್ನುವರಿಗೆ ಆಘಾತ; ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಿದ್ರೆ ರೋಗ, ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಕಾರಣವಂತೆ!!

0
818

ಮೊಬೈಲ್-ಯೊಂದು ಮೊದಲನೇ ಹೆಂಡತಿ, ಮೊದಲನೇ ಗಂಡ, ಮೊದಲನೇ ಪಾಲಕರು ಎನ್ನುವಷ್ಟು ಮಟ್ಟಿಗೆ ಜನರ ಮನಸ್ಸನು ಸೇರಿದೆ. ಬೆಳ್ಳಿಗ್ಗೆ ಎಬ್ಬಿಸುವುದು ರಾತ್ರಿ ಮಲಗಿಸುವುದು ಕೂಡ ಮೊಬೈಲ್ ಆಗಿದೆ. ಒಂದು ನಿಮಿಷ ನಿಮ್ಮನೆ ನೀವೇ ಪರೀಕ್ಷಿಸಿ ನೋಡಿ ನೀವು ದಿನದ ಎಷ್ಟು ಘಂಟೆ ಮೊಬೈಲ್ ಬಿಟ್ಟು ಇರುತ್ತಿರ ಅಂತ! ಯೋಚಿಸಿನೋಡಿ. ಹಾಗಂತ ಮೊಬೈಲ್ ಬಳಕೆ ತುಂಬಾ ಒಳ್ಳೆಯದು ಅಲ್ಲ ಕೆಟ್ಟದು ಅಲ್ಲ. ಅತಿಯಾದ ಅಮೃತ ವಿಷ ಅನ್ನೋ ರೀತಿ ಮೊಬೈಲ್ ಬಳಕೆ ಬಂದು ಒದಗಿದೆ. ಅದಕ್ಕಾಗಿ ಸಂಶೋಧನೆಯೊಂದು ನಡೆದಿದ್ದು ಎಷ್ಟೊಂದು ದೋಷಗಳು ಮೊಬೈಲ್ ಬಳಕೆಯಿಂದ ಎನ್ನುವುದು ತಿಳಿಸಿದೆ.

Also read: ಮೊಬೈಲ್​ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರ; ಹೊಸ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಸೈಬರ್ ಕಳ್ಳರು..

ಹೌದು ಮನುಷ್ಯ ಸ್ಮಾರ್ಟ್‌ಫೋನ್‌ ಇಲ್ಲದೇ ಯಾವ ಕೆಲಸವು ಆಗದು ಎನ್ನುವ ಮಟ್ಟಿಗೆ ಸ್ಮಾರ್ಟ್‌ಪೋನ್‌ಗಳಿಗೆ ಅಡಿಕ್ಟ್ ಆಗಿದ್ದು, ಆದರೆ ಸದ್ದಿಲ್ಲದೇ ಸ್ಮಾರ್ಟ್‌ಫೋನ್‌ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ದಂಪತಿಗಳ ಅನ್ಯೂನ್ಯತೆ ದೂರವಾಗಿಸುತ್ತಿರುವ ಜೊತೆಗೆ ನಿದ್ದೆಗೆ ಭಂಗ ತರುತ್ತಿದೆ. ಎಂದು ಹೇಳುವುದು ಆಶ್ಚರ್ಯ ಎನಿಸಿದರು ವಿಪರೀತ ಸ್ಮಾರ್ಟ್‌ಫೋನ್ ಬಳಕೆ ನಿದ್ರೆಗೆ ಅಡ್ಡಿಪಡಿಸುತ್ತಿದ್ದು, ಸಂತಾನೋತ್ಪತ್ತಿ ಕುಂಠಿತಕ್ಕೂ ಕಾರಣವಾಗಿದೆ ಎನ್ನುವ ಗಂಭೀರ ಅಂಶಗಳು ಆಸ್ಟ್ರೇಲಿಯಾದ ‘ಕ್ವೀನ್ಸ್‌ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯ’ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಏನಿದು ಸಂಶೋಧನೆ ?

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ಈ ಅಧ್ಯಾಯನಕ್ಕೆ ಆಸ್ಟ್ರೇಲಿಯಾದ 18 ರಿಂದ 83 ವಯಸ್ಸಿನ ನಡುವಿನ 709 ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಬಳಸಿಕೊಳ್ಳಲಾಗಿತ್ತು. ಪ್ರಸ್ತುತ ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರು ಅತೀಯಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದು, ಕಳೆದ 13 ವರ್ಷಗಳಿಂದ ಟೆಕ್ನೊಫೆರೆನ್ಸ್‌(ತಾಂತ್ರಿಕತೆ)ಯಲ್ಲಿ ಏರಿಕೆ ಕಂಡುಬಂದಿದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧ್ಯಯನವು ಹೊರಹಾಕಿದ್ದು, ಟೆಕ್ನೊಫೆರೆನ್ಸ್‌(technoference) ಎಂದು ಹೇಳುತ್ತಿದೆ. ಹಾಗಂದರೆ ಅತೀಯಾದ ಸ್ಮಾರ್ಟ್‌ಫೋನ್‌ ಬಳಕೆಗೆ ಅಡಿಕ್ಟ್‌ ಆಗಿರುವುದಕ್ಕೆ ಈ ಪದ ಬಳಸಲಾಗುತ್ತಿದೆ.

ಸಂತಾನೋತ್ಪತ್ತಿ ಕುಸಿತ?

Also read:

ಪರಸ್ಪರ ಮಹಿಳೆ ಪುರುಷರಿಬ್ಬರೂ ಸಂಪೂರ್ಣ ಸ್ಮಾರ್ಟ್‌ಫೋನಿನಲ್ಲಯೇ ಮಗ್ನರಾಗುತ್ತಿರುವುದು, ದಂಪತಿಗಳ ಸಂಬಂಧದ ನಡುವೆ ಅಂತರ ಮೂಡಿಸುತ್ತಿದೆ. ಹೀಗಾಗಿ ದಂಪತಿಗಳಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗುತ್ತವೆ ಎಂಬ ಅಂಶಗಳನ್ನು ಅಧ್ಯಯನವು ಹೊರಹಾಕಿದ್ದು. ಶೇ.12.6 ರಷ್ಟು ಪುರುಷರ ತಿಳಿಸಿದ್ದಾರೆ. ಹಾಗೂ ಶೇ.14 ರಷ್ಟು ಮಹಿಳೆಯರು ಸಹ ಸಂತಾನೋತ್ಪತ್ತಿ ಕುಸಿತಕ್ಕೆ ಅತೀಯಾದ ಸ್ಮಾರ್ಟ್‌ಫೋನ್ ಬಳಕೆಯೇ ಕಾರಣ ಎಂಬದನ್ನು ತಿಳಿಸಿದ್ದಾರೆ. ಇನೊಂದು ಸಂಶೋಧನೆಯ ವರದಿ ಪ್ರಕಾರ ವಿಪರೀತ ಸ್ಮಾರ್ಟ್‌ಫೋನ್‌ ಉಪಯೋಗಿಸುವುದರಿಂದ ತಲೆನೋವು, ಕಣ್ಣುಗಳ ನೋವುಗಳು ಸೇರಿದಂತೆ ಹಲವು ಗಂಭೀರ ನೋವುಗಳಿಗೆ ಕಾರಣವಾಗುತ್ತದೆ ಎಂಬುದನ್ನು ಶೇ.8.4 ಮಹಿಳೆಯರು ಮತ್ತು ಶೇ.7.9 ರಷ್ಟು ಪುರುಷರು ಹೇಳಿಕೊಂಡಿದ್ದಾರೆ.

ಹೆಚ್ಚುತ್ತಿರುವ ಟೆಕ್ನೊಫೆರೆನ್ಸ್‌

2005ರಲ್ಲಿ ನಡೆದ ಇದೇ ಮಾದರಿಯ ಸರ್ವೇಯ ಪ್ರಶ್ನೇಗಳನ್ನೆ ಈ ಅಧ್ಯಯದ ಸರ್ವೇಯಲ್ಲಿ ಕೇಳಲಾಗಿದ್ದು, ಅತೀಯಾದ ಸ್ಮಾರ್ಟ್‌ಫೋನ್ ಬಳಕೆ ನಿದ್ರೆ ಕಸೆದುಕೊಂಡಿದೆ, ಸಂತಾನೋತ್ಪತ್ತಿ ಕ್ಷೀಣಿಸಿದೆ, ವಾಹನ ಚಾಲನೆ ಮಾಡುವಾಗ ಸ್ಮಾರ್ಟ್‌ಫೋನ್‌ ಬಳಕೆ ತೊಂದರೆ ತಂದಿದೆ, ಮತ್ತು ಹಲವು ಸಮಸ್ಯೆಗಳನ್ನು ಎದುರಿಸಲಾಗಿದೆ ಎಂಬುದನ್ನು ತಿಳಿಸಿದೆ.