ಆರೋಗ್ಯಯುಕ್ತವಾದ ಬೀಟ್‌ರೂಟ್ ಹಲ್ವಾ ಮಾಡುವ ವಿಧಾನ..

0
719

ಬೀಟ್‌ರೂಟ್ ಅಂದರೆ ಯಾರಿಗೆ ಗೊತ್ತಿಲ ಹೇಳಿ ನೂರಾರು ಔಷಧಿಯ ಗುಣ ಹೊಂದಿರುವ ಈ ತರಕಾರಿಯು ತನ್ನ ಬಣ್ಣ ಆಕೃತಿಯಲ್ಲಿ ವಿಭಿನ್ನತೆಯನ್ನು ಹೊಂದಿದೆ ಇದನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಹೀಗಿವೆ ನೋಡಿ ರಕ್ತಹೀನತೆ ತಡೆಯುತ್ತದೆ ಮತ್ತು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ದೇಹದಲ್ಲಿ ಹೊಸ ಕೋಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ಪುನಶ್ಚೇತನಗೊಳಿಸುವ ಪರಿಣಾಮವನ್ನು ನೀಡುತ್ತದೆ, ಜೀರ್ಣಕ್ರಿಯೆ ಮತ್ತು ಕರುಳಿನ ಪೆರಿಸ್ಟಾಲ್ಸಿಸ್ ಅನ್ನು ಸುಧಾರಿಸುತ್ತದೆ, ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ಪರಿಣಾಮವಾಗಿ, ನಯವಾದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಮಾರಣಾಂತಿಕ ಗೆಡ್ಡೆಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ, ಅಧಿಕ ರಕ್ತದೊತ್ತಡ ಮತ್ತು ಅಪಧಮನಿಕಾಠಿಣ್ಯದ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ, ಪುರುಷರಲ್ಲಿ ಲೈಂಗಿಕ ಚಟುವಟಿಕೆಯನ್ನು ಪ್ರಚೋದಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತೆ, ಮಾನಸಿಕವಾಗಿ ಆರೋಗ್ಯಯುಕ್ತವಾಗಿದು ಖಿನ್ನತೆಯನ್ನು ನಿಭಾಯಿಸುತ್ತದೆ, ಕಣ್ಣುಗಳ ಆರೋಗ್ಯವನ್ನು ಉಳಿಸಲು ಸಹಾಯ ಮಾಡುತ್ತದೆ. ಇಷೆಲ್ಲ ಉಪಯೋಗ ವಿರುವ ಬೀಟ್‌ರೂಟ್ ನಿಂದ ಹಲ್ವ ಮಾಡುವ ವಿಧಾನ ಇಲ್ಲಿದೆ ನೋಡಿ.

Also read: ವಿಜಯ ದಶಮಿಯ ಆಚರಣೆಯಲ್ಲಿ ದೇವಿಗೆ ಪ್ರಿಯವಾದ `ಸಬ್ಬಕ್ಕಿ ಖೀರು’ ಮಾಡುವ ವಿಧಾನ..

ಬೇಕಾದ ಪದಾರ್ಥಗಳು:

 • ನಾಲ್ಕು ಬೀಟ್‍ರೂಟ್
 • ಎರಡು ಕಪ್ ಹಾಲು
 • ಅರ್ಧ ಕಪ್ ಸಕ್ಕರೆ
 • ಒಂದು ಚಿಕ್ಕ ಚಮಚ ಏಲಕ್ಕಿ ಪುಡಿ
 • ಮೂರು ಟೇಬಲ್ ಚಮಚ ತುಪ್ಪ
 • ಸ್ವಲ್ಪ ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ

Also read: ನವರಾತ್ರಿಯ ಹಬ್ಬದಲ್ಲಿ ಶೇಂಗಾ ಹೋಳಿಗೆಯನ್ನು ಮಾಡಿ ಸವಿದು ನೋಡಿ…

 • 100 ಗ್ರಾಂ ಕೋವಾ
 • ಅರ್ಧ ಗ್ಲಾಸ್ ಮಂದಗೊಳಿಸಿದ ಹಾಲು

ತಯಾರಿಸುವ ವಿಧಾನ:

 • ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ
 • ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ
 • ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ
 • ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ

Also read: ಮೈಸೂರಿನ ಮಹಾರಾಜರಿಂದ ಹೆಸರು ಪಡೆದ ಮೈಸೂರು ಪಾಕ್ ತಯಾರಿಸುವ ವಿಧಾನ..

 • ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ
 • ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ
 • ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿಹಾಲನ್ನು ಬೆರೆಸಿ.
 • ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸಿರಿ
 • ನಂತರ ಪಾತ್ರೆಯನ್ನು ಕೆಳೆಗೆ ಇಳಿಸಿ. ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ
 • ಈಗ ಆರೋಗ್ಯಯುಕ್ತವಾದ ಬೀಟ್‍ರೂಟ್ ಹಲ್ವಾ ರೆಡಿ.