ಮೊಸರಿಂದ ಕೇವಲ ಊಟದ ರುಚಿ ಮಾತ್ರ ಹೆಚ್ಚುವುದಲ್ಲದೇ ನಿಮ್ಮ ಆರೋಗ್ಯವನ್ನೂ ಹೇಗೆ ವೃದ್ಧಿಸುತ್ತದೆ ಅಂತ ತಿಳಿದುಕೊಳ್ಳಿ..

0
2008

ಮೊಸರು ಸೌಂದರ್ಯವೃದ್ಧಿಗೆ ಅಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಅಂದರೆ ತಪ್ಪಾಗಲಾರದು. ಊಟದ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಮೊಸರು ಸೇವನೆ ಮಾಡುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಲು ಮೊಸರಿನ ರೂಪ ಪಡೆದಾಗ ಅದರಲ್ಲಿರುವ ಸಕ್ಕರೆ ಆಮ್ಲ ರೂಪ ಪಡೆಯುವುದರಿಂದ ಹಾಲಿಗಿಂತ ಮೊದಲು ಜೀರ್ಣವಾಗುವ ಶಕ್ತಿಯನ್ನು ಇದು ಹೊಂದಿದೆ. ಅದಕ್ಕೆ ಎಲ್ಲ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ.

ಕೇವಲ ಮೊಸರು ತಿನ್ನುವುದರಿಂದ ಅಷ್ಟೇ ಅಲ್ಲ ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರ ಮಾಡಬಹುದು.

ಲೈಂಗಿಕ ಆರೋಗ್ಯ ವೃದ್ಧಿ


ಮೊಸರು ಜೊತೆ ಈರುಳ್ಳಿಯನ್ನು ಸೇರಿಸಿ ಸೇವಿಸಿದರೆ ಇದು ಹೆಂಗಸರ ಮತ್ತು ಗಂಡಸರ ಲೈಂಗಿಕ ಆರೋಗ್ಯಕ್ಕೆ ಸಹಕಾರಿ ಎಂದು ಸಂಶೋಧನೆಗಳು ತಿಳಿಸಿದೆ.

ಜೀರ್ಣಸಂಬಂಧಿ ಸಮಸ್ಯೆಗೆ


ಒಂದು ಕಪ್ ಮೊಸರಿನೊಂದಿಗೆ ಸ್ವಲ್ಪ ಕಪ್ಪು ಉಪ್ಪನ್ನು ರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಮಸ್ಯೆಅಷ್ಟೇ ಅಲ್ಲ ಗ್ಯಾಸ್, ಅಸಿಡಿಟಿಯಂತಹ ಸಮಸ್ಸೆಯನ್ನು ಕೂಡ ಕಡಿಮೆಯಾಗುತ್ತದೆ.

ಮಲಬದ್ಧತೆಗೆ


ಒಂದು ಕಪ್ಪು ಮೊಸರಿ ನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿ ಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗಿ ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.

ತೂಕ ಕಡಿಮೆ ಮಾಡಲು


ಒಂದು ಕಪ್ ಮೊಸರಿಗೆ ಸ್ವಲ್ಪ ಜೀರಿಗೆ ಪುಡಿಯನ್ನು ಬೆರೆಸಿಕೊಂಡು ತಿನ್ನಬೇಕು.

ದೇಹಕ್ಕೆ ಶಕ್ತಿ ನೀಡುತ್ತದೆ


ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿಂದರೆ ದೇಹಕ್ಕೆ ಶಕ್ತಿ ಸಿಗುವುದರ ಜೊತೆಗೆ ಮೂತ್ರ ಕೋಶದ ಸಮಸ್ಯೆಯನ್ನು ಕೂಡ ದೂರವಾಗುತ್ತವೆ.

ದಂತ ಸಂಬಂಧಿ ಸಮಸ್ಯೆಗೆ


ಒಂದು ಕಪ್ ಮೊಸರಿನೊಂದಿಗೆ ಸ್ವಲ್ಪ ಓಂಕಾಳನ್ನು ಬೆರೆಸಿ ತಿನ್ನಬೇಕು.

ರೋಗನಿರೋಧಕ ಶಕ್ತಿಗೆ


ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ ಗಳು, ರೋಗಗಳು ಬರದಂತೆ ನೋಡಿ ಕೊಳ್ಳಬಹುದು.

ಕೀಲು ನೋವಿಗೆ


ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿ ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ಪೋಷಕ ಅಂಶ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆಮಾಡುತ್ತೆ. ಹಲವು ವೃದ್ಧಾಪ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.