ಆರೋಗ್ಯಯುಕ್ತ ಸ್ಟ್ರಾಬೆರ್ರಿ, ಪೈನಾಪಲ್ ಕೇಸರಿಬಾತ್ ತಯಾರಿಸುವ ವಿಧಾನ..!!

0
635

ಕೇಸರಿಬಾತ್ ಅಂದ್ರೆ ಎಲ್ಲರ ಮನೆಯಲ್ಲಿ ನೆಲೆಯೂರಿರುವ ಒಂದು ಸಿಹಿ ಖಾದ್ಯವಾಗಿದೆ ಯಾರೇ ಸಂಬಧಿಕರು ಬಂದರು, ಸಣ್ಣ ಕಾರ್ಯಕ್ರಮ ಅಥವಾ ದೊಡ್ಡ ಕಾರ್ಯಕ್ರಮಗಳು ಇದ್ದರು ಮೊದಲು ನೆನೆಪಿಗೆ ಬರುವ ಅಡುಗೆ ಕೇಸರಿಬಾತ್ ಇದನ್ನು ಶಿರಾ ಅಂತಾನು ಕರೆಯಲಾಗುತ್ತದೆ ಈ ಕೇಸರಿಬಾತ್ಗೂ ಹಣ್ಣುಗಳಿಗೂ ಅವಿನಾಭಾವ ಸಂಬಂಧವಿದೆ ಈ ಎರಡನ್ನು ಕೂಡಿಸಿ ನೂರಾರು ತರಹದ ಕೇಸರಿಬಾತ್ ತಯಾರಿಸಬಹುದು. ಅಂತಹ ಎರಡು ಖಾದ್ಯಗಳಾದ ಸ್ಟ್ರಾಬೆರ್ರಿ ಕೇಸರಿಬಾತ್ ಮತ್ತು ಪೈನಾಪಲ್ ಕೇಸರಿಬಾತ್ ನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

Also read: ರುಚಿಯಾದ, ಸ್ವಾದಿಷ್ಟಭರಿತ ಮತ್ತು ಫಟಾಫಟ್ ಅಂತ ಮಾಡಬಹುದಾದ ಕೇಸರಿ ಬಾತ್.. ಇಂದೇ ಟ್ರೈ ಮಾಡಿ..!!

ಸ್ಟ್ರಾಬೆರ್ರಿ ಕೇಸರಿಬಾತ್ ಗೆ ಬೇಕಾಗುವ ಪದಾರ್ಥಗಳು:

 • ಒಂದು ಕಪ್ ಚಿರೋಟಿ ರವಾ
 • 1/2 ಕಪ್ ಸಕ್ಕರೆ
 • ಒಂದು ಕಪ್ ತುಪ್ಪ
 • 20 ಗ್ರಾಂ ಗೋಡಂಬಿ
 • 20 ಗ್ರಾಂ ಒಣದ್ರಾಕ್ಷಿ
 • ಸ್ವಲ್ಪ ಏಲಕ್ಕಿ ಲವಂಗ ಪುಡಿ
 • ಸ್ಟ್ರಾಬೆರ್ರಿ ರಸ ೧ ಸಣ್ಣ ಕಪ್
 • ಎರಡು ಕಪ್ ನೀರು

ಮಾಡುವ ವಿಧಾನ:

Also read: ರುಚಿಯಾದ ಶೇಂಗಾ ಹೋಳಿಗೆ ಮಾಡುವ ವಿಧಾನ

 • ಮೊದಲು ಚಿರೋಟಿ ರವಾ ಮತ್ತು ಎರಡು ದೊಡ್ಡ ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದುಕೊಳ್ಳಿ.
 • ಒಂದು ದಪ್ಪತಳದ ಪಾತ್ರೆಯಲ್ಲಿ ನೀರನ್ನು ಮಳಿಸುವ ವರೆಗೆ ಕುಡಿಸಿ
 • ನಂತರ ಹುರಿದ ರವಾ ಸೇರಿಸಿ ಚೆನ್ನಾಗಿ ಬೇಯಿಸಿ.
 • ಈಗ ಅದಕ್ಕೆ ಸಕ್ಕರೆ ಹಾಗು 4-5 ಚಮಚ ತುಪ್ಪ ಹಾಕಿ ಚೆನ್ನಾಗಿ ತಿರುವಿ.
 • ನಂತರ ಗೋಡಂಬಿ, ದ್ರಾಕ್ಷಿ, ಮತ್ತು ಸ್ಟ್ರಾಬೆರ್ರಿ ರಸ ಸೇರಿಸಿ, ತುಪ್ಪ ಬಿಡುವವರೆಗೆ ಬೇಯಿಸಿ.
 • ಈಗ ಸ್ಟ್ರಾಬೆರ್ರಿ ಕೇಸರಿಬಾತ್ ರೆಡಿ

ಪೈನಾಪಲ್ (ಅನಾನಸ್) ಕೇಸರಿಬಾತ್

ಬೇಕಾಗುವ ಪದಾರ್ಥಗಳು:

 • ಎರಡು ಕಪ್ ಸಕ್ಕರೆ
 • ಎರಡು ಸ್ಪೂನ್ ಉಪ್ಪು
 • 2/3 ಕಪ್ ತುಪ್ಪ
 • ಎರಡು ಕಪ್ ಬಿಸಿ ನೀರು
 • 1/2 ಕಪ್ ತುರಿದಿರುವ ಪೈನಾಪಲ್ ರಸ
 • 3 ರಿಂದ 4 ಟೇಬಲ್ ಸ್ಪೂನ್ ಗೋಡಂಬಿ ಚೂರುಗಳು, ಒಣದ್ರಾಕ್ಷಿ
 • ಒಂದು ಟೀ ಸ್ಪೂನ್ ಏಲಕ್ಕಿಪುಡಿ

ತಯಾರಿಸುವ ವಿಧಾನ:

 • ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಮಾಡಿ.
 • ಇದಕ್ಕೆ ಕೇಸರಿ ರವೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ 8 – 10 ನಿಮಿಷ ಹುರಿಯಿರಿ.
 • ಹುರಿದ ರವೆಗೆ ದೊಡ್ಡ ಚಿಟಿಕೆಯಷ್ಟು ಉಪ್ಪು ಹಾಕಿ ಕುದಿಯಿವ ಎರಡೂವರೆ ಕಪ್ ಬಿಸಿನೀರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 • ಇದಕ್ಕೆ ಒಂದು ಪ್ಲೇಟ್ ಮುಚ್ಚಿ 7 – 8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ.
 • ನೀರಿನಂಶ ಆರಿ ರವಾ ಮಿಶ್ರಣ ಬೆಂದ ನಂತರ ಇದಕ್ಕೆ ಎರಡು ಕಪ್ ನಷ್ಟು ಸಕ್ಕರೆ ಸೇರಿಸಿ ಕೈಯಾಡಿಸಿ. ಸಕ್ಕರೆ ಸೇರಿಸಿದಾಗ ಮಿಶ್ರಣ ನೀರೊಡೆದು ಪುನಃ ತೆಳ್ಳಗಾಗುತ್ತದೆ. ಆಗಾಗ್ಗೆ ಕೈಯಾಡಿಸಿ 8 – 10 ನಿಮಿಷ ಬೇಯಿಸಿ.
 • ಗೋಡಂಬಿ ಚೂರುಗಳು ಹಾಗೂ ದ್ರಾಕ್ಷಿಯನ್ನು ಒಂದು ಚಮಚದಷ್ಟು ತುಪ್ಪದಲ್ಲಿ ಹುರಿದು ಕೇಸರಿಗೆ ಸೇರಿಸಿ.
 • ಕೊನೆಯಲ್ಲಿ ಇದಕ್ಕೆ ತುರಿದ ಪೈನಾಪಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಲೇಟ್-ನ್ನು ಅರ್ಧ ಮುಚ್ಚಿ ಇನ್ನೂ ಐದು ನಿಮಿಷ ಬೇಯಿಸಿ
ಈಗ ಪೈನಾಪಲ್ ಕೇಸರಿಬಾತ್ ತಯಾರಾಗಿದೆ ಸವಿದು ನೋಡಿ.