ಆರೋಗ್ಯವಂತ ವ್ಯಕ್ತಿಯಾಗಿರಲು ಬಯಸಿದ್ದೀರಾ….? ಹಾಗಾದ್ರೆ ಇದನ್ನ ನೋಡಲೇಬೇಕು.

0
1007

ಆರೋಗ್ಯವಂತ ವ್ಯಕ್ತಿಯಾಗಿರಲು ಬಯಸಿದ್ದೀರಾ? ಕೆಲವೊಂದು ನಿಧಾನ ಬದಲಾವಣೆಗಳ ಮೂಲಕ ಖಂಡಿತವಾಗಿಯೂ ಎಲ್ಲರೂ ಉತ್ತಮ ಆರೋಗ್ಯ ಜೀವನ ಸಾಗಿಸಬಹುದು. ದೀರ್ಘಕಾಲ ಕಾಡುವ ಕ್ಯಾನ್ಸರ್, ಲ್ಯಾನ್ಸರ್ ದೂರವಿರಿಸಿ ನೆಮ್ಮದಿಯಿಂದ ಜೀವನ ಅನುಭವಿಸಬಹುದು. ಅದಕ್ಕೆ ಬೇಕಿರುವುದು ವಿಶ್ರಾಂತಿ, ಸದಾ ಉಲ್ಲಾಸದ ಮನಸ್ಸನ್ನು ಕಾಪಾಡಿಕೊಂಡು ಹೋಗಬಹುದು.

• ನಿದ್ದೆ ಮಾಡುವುದರಿಂದ ಆರೋಗ್ಯಕರ ಶರೀರ ನಿಮ್ಮದಾಗಬೇಕಿದ್ದಾರೆ. ನಿತ್ಯವೂ 8-10 ಕಾಲ ನಿದ್ರೆ ಅಗತ್ಯ. ನಿಯಮಿತ ನಿದ್ದೆ ನಿಮ್ಮನ್ನು ಎಚ್ಚರದ ಅವಧಿಯಲ್ಲಿ ಜಾಗೃತವಾಗಿರಿಸುತ್ತದೆ. ಸಕ್ಕರೆ ಮಿಶ್ರಿತ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಶಾಲೆಗೆ, ಕಾಲೇಜುಗಳಿಗೆ ಹೋಗುವವರು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.

source: ndtvimg.com

• ಶಾಂತವಾದ ಪರಿಸರದಲ್ಲಿ ಹತ್ತಾರು ನಿಮಿಷ ಸುಮ್ಮನೆ ಕೂರುವುದರಿಂದ ನಿಮ್ಮಮ ಮನಸ್ಸು ನಿರಾಳವಾಗುತ್ತದೆ. ದಿನವೀಡಿ ಉಲ್ಲಾಸದಿಂದ ಕಳೆಯುವಂತಹ ಮನಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಕೆಲಸ ಕಾರ್ಯಗಳ ಯಾವುದೇ ಒತ್ತಡವಿಲ್ಲದೇ ಕಳೆದ ಈ ಹತ್ತು ನಿಮಿಷಗಳು ನಿಮ್ಮನ್ನು ರಿಪ್ರೆಷ್ ಮಾಡುತ್ತದೆ. ದಿನಕ್ಕೆರಡು ಬಾರಿ ಹೀಗೆ ಮಾಡಿದರೆ ಇನ್ನೂ ಒಳ್ಳೆಯದು.

source: cdn.shutterstock.com

• ಕೆಲಸ ಮಾಡುವಾಗ ಇಲ್ಲ ಬೇರೆ ಸಂದರ್ಭದಲ್ಲಿ ಏನಾದರೂ ತಿನ್ನಬೇಕೆನಿಸಾದಗಲೆಲ್ಲಾ ಹಣ್ಣು, ಅಥವಾ ತರಕಾರಿಗಳನ್ನು ತಿನ್ನಿ. ಇದು ನಿಮ್ಮ ಆರೋಗ್ಯವನ್ನು ಕಾಯುತ್ತದೆ. ನಾಲಿಗೆಗೂ ಸವಿ. ಹೆಚ್ಚಿನ ಹಣ್ಣಿನ ಸೇವನೆಯಿಂದ ಆರೋಗ್ಯ ರಕ್ಷಣೆ ಆಗುತ್ತದೆ.

• ನೀರು ಅಮೃತ ಸಮಾನ, ಹೆಚ್ಚೆಚ್ಚು ನೀರು ಕುಡಿದಷ್ಟು ಆರೋಗ್ಯ ವೃದ್ಧಿಸುತ್ತದೆ. ಪ್ರತಿನಿತ್ಯ ಐದು ಲೀಟರ್ ನೀಡು ಕುಡಿಯಲೇಬೇಕು. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಮರುಪೂರ್ಣಗೊಳಿಸಲು ಸಹಕಾರಿ. ತಲೆನೋವು ಅಜಿರ್ಣ ಮತ್ತಿತ್ಯಾದಿ ಸಮಸ್ಯೆಗಳನ್ನು ದೇಹದಲ್ಲಿರುವ ಹೆಚ್ಚಿನ ನೀರಾಂಶ ಇನ್ನಿಲ್ಲದಂತೆ ಮಾಡುತ್ತದೆ.

• ದಿನಾ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ನಿಮ್ಮ ಸ್ನಾಯುಗಳನ್ನು ಬಲಗೊಳಿಸುತ್ತವೆ. ಮತ್ತು ಆರೋಗ್ಯಯುತವಾಗಿಸುತ್ತವೆ. ನಿತ್ಯ ಹಿತವಾದ ವಾತಾರಣದಲ್ಲಿ ಓಡಿದರೆ ಖಂಡಿತವಾಗಿ ದೇಹಕ್ಕೆ ಚೆಂದನೆಯ ಆಕಾರ ಬರುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಆದರೆ ಓಡುತ್ತಿರುವಾಗ ತಟ್ಟನೇ ನಿಂತುನಿಡಬೇಡಿ. ಇದರಿಂದ ಸ್ನಾಯುಗಳಿಗೆ ಪೆಟ್ಟು.  ಓಡುವಾಗ ಆಳವಾದ ಉಸಿರಾಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

source: pillsforallblog.com

ನಿಮ್ಮ ಬಗ್ಗೆ ಒಳ್ಳೆಯ ಭಾವನೆಯಿರಲಿ. ನಿಮ್ಮನ್ನು ನೀವು ಯಾರೊಂದಿಗೂ ತುಲನೆ ಮಾಡಿಕೊಳ್ಳಬೇಡಿ. ಯಾರಲ್ಲೂ ಇಲ್ಲದ ಯಾವುದೋ ವಿಶೇಷವಾದ ಪ್ರತಿಭೆ ನಿಮ್ಮಲ್ಲಿರಬಹುದು. ಅದನ್ನು ಹುಡುಕಿಕೊಳ್ಳಿ. ನಿಮ್ಮ ಬಗ್ಗೆ ನಿಮಗೇ ಒಳ್ಳೆಯ ಭಾವನೆಗಳಿಲ್ಲದಿದ್ದರೆ ಕೀಳಿರಿಮೆಯಿಂದಲೇ ಆರೋಗ್ಯ ಬೇಗ ಹದಗೆಡುತ್ತದೆ. ಸ್ವ- ಇರುವಂತೆ ನೋಡಿಕೊಳ್ಳಬೇಕು.