ಹೃದಯಾಘಾತದಿಂದ ತಪ್ಪಿಸಿಕೊಂಡು ಲವಲವಿಕೆಯಿಂದಿರಲು ಇಲ್ಲಿವೆ ನೋಡಿ ಕೆಲವು ಸೂತ್ರಗಳು…!

0
1884

ಕೆಲವು ವರ್ಷಗಳ ಹಿಂದೆ `ಹೃದಯಾಘಾತ’ ಎಂದರೆ ಕ್ಯಾನ್ಸರ್ ರೋಗದ ರೀತಿಯಲ್ಲಿ ಭಯ ಹುಟ್ಟಿಸುತ್ತಿತ್ತು. ಸ್ವಲ್ಪ ಎದೆ ನೋವು ಬಂದರೂ ಭಯಪಟ್ಟು ಆಸ್ಪತ್ರೆ ಸೇರುತ್ತಿದ್ದರು. 50 ವರ್ಷ ಮೇಲ್ಪಟ್ಟವರು ತುಂಬಾ ಜಾಗರೂಕರಾಗಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು ಆದರೆ ಈಗ ಹೃದಯಾಘಾತ ಸಾಮಾನ್ಯ ಕಾಯಿಲೆಯಂತಾಗಿದೆ.
ಯಾರನ್ನು ಕೇಳಿದರೂ ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಎಂದು ಗೊಣಗುತ್ತಾ ಸಕ್ಕರೆ ಇಲ್ಲದ ಸಪ್ಪೆ ಚಹಾ ಕುಡಿಯುತ್ತಾರೆ. ಆದರೆ ಕೇವಲ ಸಕ್ಕರೆ ಬಿಟ್ಟರೆ ಸಮಸ್ಯೆ ಪರಿಹಾರವಾಗಲು ಖಂಡಿತಾ ಸಾಧ್ಯವಿಲ್ಲ. ಇಂದಿನ ಜೀವನಶೈಲಿಯೇ ಸಾವಿಗೆ ಆಹ್ವಾನ ನೀಡುವಂತಾಗುತ್ತಿರುವುದರಿಂದ ಮೊದಲು ಜೀವನಶೈಲಿಯನ್ನು ಸುಧಾರಿಸಿಕೊಳ್ಳುವುದು ಅಗತ್ಯವಾಗಿದೆ. ಗೊತ್ತಾಗದಂತೆ ದೇಹದಲ್ಲಿ ಬಿಪಿ, ಶುಗರ್ ಸೇರಿ ಹೃದಯಾಘಾತಕ್ಕೆ ಕಾರಣವಾಗಬಹುದು, ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು.

Image result for Heart attack '
1. ಒತ್ತಡ ಕಡಿಮೆಗೊಳಿಸದೇ ದಾರಿ ಇಲ್ಲ…
ಮೊದಲು ಕೇವಲ ಪುರುಷರಲ್ಲಿ ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿದ್ದ ಭಾರತದಲ್ಲಿ ಇದೀಗ ಮಹಿಳೆಗೂ ಇದರಿಂದ ಸಂಚಕಾರ ಉಂಟಾಗುತ್ತಿದೆ. ಕೌಟುಂಬಿಕ ಹಾಗೂ ಉದ್ಯೋಗದ ಒತ್ತಡದಿಂದ ಅನಾರೋಗ್ಯ ಪೀಡಿತರಾಗುತ್ತಿರುವ ಮಹಿಳೆಯರು ತಮ್ಮ ಆರೋಗ್ಯದ ಮೇಲಿನ ನಿಷ್ಕಾಳಜಿ ವಹಿಸುತ್ತಿರುವುದೇ ಹೃದಯಘಾತವಾಗಲು ಪ್ರಬಲ ಕಾರಣವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿಗಳಿಲ್ಲದೇ, ನಿದ್ದೆ ಇಲ್ಲದೇ ಹೈರಾಣಾಗುವ ಇವರಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ತರಲು ಸಾಧ್ಯವಾಗಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೂ ಯೋಚಿಸುತ್ತಾ, ಭಯಪಟ್ಟುಕೊಳ್ಳುತ್ತಾ ಒತ್ತಡದಲ್ಲಿಯೇ ಜೀವನ ಸಾಗಿಸುವಂತಾಗಿರುತ್ತದೆ. ಕಚೇರಿಯ ದುಗುಡವನ್ನು ಸಂಸಾರದ ಮೇಲೆ ಹಾಕುತ್ತಾ, ಸಂಸಾರದ ಸಮಸ್ಯೆಗಳನ್ನು ಕೆಲಸದ ಮೇಲೆ ಹಾಕುತ್ತಾ ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತಾರೆ.

ಈ ಸಮಸ್ಯೆಗಳಿಂದ ದೂರಾಗಿ ಲವಲವಿಕೆಯಿಂದಿರಲು ಕೆಲವು ಸೂತ್ರಗಳನ್ನು ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗಬಹುದು..

2. ನಿತ್ಯ 30 ನಿಮಿಷದ ವ್ಯಾಯಮ ಹಾಗೂ ವಾಯುವಿಹಾರ

Image result for yoga
3. ಪ್ರಾಣಾಯಾಮ ಮತ್ತು ಧ್ಯಾನ ( ನಿತ್ಯವಾಗದಿದ್ದರೂ ವಾರದಲ್ಲಿ 4 ದಿನ ಮಾಡಿದರೂ ಸಾಕು)

Related image
4. ದಿನಕ್ಕೆ ಸ್ವಲ್ಪ ಪ್ರಮಾಣದಲ್ಲಿ ನಾಲ್ಕು ಬಾರಿ ಊಟ

Image result for dinner with family
5. ಪ್ರತಿ ಮೂರು ಗಂಟೆಗೊಮ್ಮೆ ಏನಾದರೂ ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ( ಡ್ರೈಫ್ರೂಟ್ಸ್, ಹಣ್ಣುಗಳು)

6. ಹೆಚ್ಚಿನ ನೀರಿನ ಸೇವನೆ:

Image result for drinking water
7. ಸಿಟ್ಟು ಕಡಿಮೆ ಮಾಡಿಕೊಂಡು ನಗುತ್ತಾ ಇರುವುದು
8. ನಿಯಮಿತವಾಗಿ ಆರೋಗ್ಯ ತಪಾಸಣೆ(ಪಿಬಿ/ಶುಗರ್/ರಕ್ತಪರೀಕ್ಷೆ)
10. ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು.