ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಕಾದಿದೆ ಕಂಟಕ; ಅಪಾಯದಲ್ಲಿರುವ 182 ಡೇಂಜರ್ ಏರಿಯಾಗಳಿಗೆ ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ,

0
715

ರಾಜ್ಯದಲ್ಲಿ ಬಿಟ್ಟು ಬಿಡದೆ ಶುರಿಯುತ್ತಿರುವ ಮಳೆಯಿಂದ ಇಡಿ ಕರುನಾಡೇ ಮಳೆಯಲ್ಲಿ ತೇಲುತ್ತಿದೆ. ಮಲೆನಾಡು ಉತ್ತರ ಕರ್ನಾಟಕ ಸೇರಿದಂತೆ 18 ಜಿಲ್ಲೆಗಳು ನೀರಿನಲ್ಲಿ ತೇಲುತ್ತಿವೆ. ಅದರಂತೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಪ್ರವಾಹದಲ್ಲಿ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಬರಿ ಕೆಲವು ಭಾಗದಲ್ಲಿ ಮಾತ್ರವಲ್ಲದೆ ಈಗ ಬೆಂಗಳೂರಿಗೂ ತಟ್ಟುವ ಸೂಚನೆಯಿದ್ದು. ಹೈ ಅಲರ್ಟ್ ನೀಡಲಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಹೌದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 2 ಸೆ.ಮೀಟರ್ ನಿಂದ 6 ಸೆಂಟಿ ಮೀಟರ್ ವರೆಗೂ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿಗೂ ಜಲಕಂಟಕ ಎದುರಾಗುವ ಸಾಧ್ಯತೆ ಇದ್ದು ಬಿಬಿಎಂಪಿ ವ್ಯಾಪ್ತಿಯ ಹಲವು ಏರಿಯಾಗಳಿಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅದರಂತೆ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ದೊರೆತಿದೆ. ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಭಾರೀ ಮಳೆಯಾದರೆ ಇಡೀ ನಗರವೇ ತತ್ತರಿಸಿಹೋಗುವುದು ಗ್ಯಾರಂಟಿಯಾಗಿದೆ. 198 ವಾರ್ಡ್ ಗಳಲ್ಲಿ 182 ಅಪಾಯಕಾರಿ ಸ್ಥಳಗಳಿದ್ದು, ಈ ಪ್ರದೇಶಗಳು ಸಂಪೂರ್ಣ ಜಲಾವೃತಗೊಳ್ಳಲಿದ್ದು, ಭಾರೀ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಬೆಂಗಳೂರಿನ 182 ಡೇಂಜರ್ ಸ್ಥಳಗಳು

ಪೂರ್ವದಲ್ಲಿ 11 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಬ್ರಾಡ್ ವೇ ರಸ್ತೆ, ಆರ್ಮ್‍ಸ್ಟ್ರಾಂಗ್ ಜಂಕ್ಷನ್, ಎಂವಿಗಾರ್ಡನ್, ವಿವೇಕಾನಂದನಗರ, ಸ್ವೀಪರ್ಸ್ ಕಾಲೋನಿ, ಸುಬ್ಬಯ್ಯನಪಾಳ್ಯ, ಟಿಂಬರ್ ಲೇಔಟ್, ಕಲ್ಯಾಣನಗರ, ಚಲ್ಲಕೆರೆ ವ್ಯಾಪ್ತಿ. ಡೇಂಜರ್ ಸ್ಥಳಗಳಾಗಿದ್ದು, ಪಶ್ಚಿಮ ವಲಯದಲ್ಲಿ 33 ಅಪಾಯಕಾರಿ ಸ್ಪಾಟ್‍ಗಳನ್ನು ಪತ್ತೆಹಚ್ಚಲಾಗಿದೆ. ಮಂತ್ರಿಮಾಲ್, ಗೋಪಾಲಪುರ, ಕೆಂಪೇಗೌಡನಗರ, ಕಮಲಾನಗರ, ಗುಟ್ಟಹಳ್ಳಿ, ಮಲ್ಲೇಶ್ವರಂ ಲಿಂಕ್‍ರಸ್ತೆ, ನಂದಿನಿ ಲೇಔಟ್, ಯಶವಂತಪುರ ಟಿಟಿಎಂಸಿ, ಎನ್‍ಜಿಇಎಫ್ ಲೇಔಟ್, ಕಲ್ಯಾಣನಗರ, ಬಿನಿಮಿಲ್, ರಾಯಪುರಂ, ಚಾಮರಾಜಪೇಟೆ, ಸುಮನಹಳ್ಳಿ, ಸಾಕಮ್ಮ ಬಡಾವಣೆ. ಜನರು ಮುನ್ನಚರಿಕೆ ವಹಿಸಬೇಕಾಗಿದೆ.

ಅಷ್ಟೇ ಅಲ್ಲದೆ ದಕ್ಷಿಣ ವಲಯದ ಪ್ರದೇಶಗಳಾದ ಕವಿಕಾ ಲೇಔಟ್, ಕೆಂಪಾಪುರ, ವೃಷಭಾವತಿ ಕಣಿವೆ ವ್ಯಾಪ್ತಿ, ಚೋಳೂರುಪಾಳ್ಯ, ರಂಗನಾಥ ಕಾಲೋನಿ, ಮುನೇಶ್ವರನಗರ, ಗಾಳಿ ಆಂಜನೇಯ ದೇವಸ್ಥಾನ, ಕಾಳಿದಾಸನಗರ, ಯಡಿಯೂರು, ಬಾಪೂಜಿನಗರ, ದ್ವಾರಕಾನಗರ, ಕಾಮಕ್ಯಲೇಔಟ್‍, ಕೋರಮಂಗಲ ಕಣಿವೆ ವ್ಯಾಪ್ತಿಯ ಪಾಮ್‍ಗ್ರೋವ್ ರಸ್ತೆ, ವಿನಾಯಕನಗರ, ಮೈಕೆಲ್ ಚರ್ಚ್ ಪ್ರದೇಶ, ಆನೆಪಾಳ್ಯ, ಕುಂಬಾರಗುಂಡಿ, ಜಲ ಕಂಕಟ ಎದುರಾಗಲಿದೆ.

ಯಲಹಂಕದ ಕರಿಯಪ್ಪನಪಾಳ್ಯ, ಮಾನ್ಯತಾಟೆಕ್‍ಪಾರ್ಕ್, ಟಾಟಾನಗರ, ತಿಂಡ್ಲುಕೆರೆ , ದೊಡ್ಡಬೊಮ್ಮಸಂದ್ರ ಕೆರೆ, ಯೋಗೇಶ್ವರ್‍ನಗರದ ಐದು ಪ್ರದೇಶಗಳು, ಮಹಾದೇವಪುರದ ಮಹೇಶ್ವರಿನಗರ, ಪಟ್ಟಂದೂರು ಅಗ್ರಹಾರ, ವರ್ತೂರು ಕೋಡಿ, ದೊಡ್ಡನಕ್ಕುಂದಿ, ಮಾರತಹÀಳ್ಳಿ, ರಾಮಮೂರ್ತಿನಗರ, ಕೌದೇವನಹಳ್ಳಿ, ದೇವಸಂದ್ರ, ಎನ್‍ಆರ್‍ಐ ಲೇಔಟ್, ಅಂಬೇಡ್ಕರ್ ಸ್ಲಮ್, ವಿನಾಯಕ ಲೇಔಟ್ ವ್ಯಾಪ್ತಿಯ 15 ಪ್ರದೇಶಗಳು, ನೀರಿನಲ್ಲಿ ಮುಳುಗುವ ಸಂಭವವಿದೆ.